ಹಸಿರು ಸೌಧಗಳು                      
    

Police Office Complex at Gulbarga

ಗುಲ್ಬರ್ಗದ ಪೊಲೀಸ್ ಕಛೇರಿ ಸಂಕೀರ್ಣ ಹಸಿರು ಸೌಧದ ಪರಿಕಲ್ಪನೆಯ ಆಧಾರದ ಮೇಲೆ ನಿರ್ಮಿಸಲಾಗಿದೆ.


ಹಸಿರಾಗುವ ತವಕದ ಉದ್ದೇಶ :

ಪರಿಸರ ಮತ್ತು ನೀರಿನ ಸಂರಕ್ಷಣೆ, ಶಕ್ತಿಯ ಸಮರ್ಥತೆ, ಮರುಸಂಸ್ಕರಿಸಿದ ಉತ್ಪನ್ನಗಳ ಬಳಕೆ ಮತ್ತು ಸಂಸ್ಕರಿಸಬಹುದಾದ ಶಕ್ತಿಯನ್ನು ಪ್ರೋತ್ಸಾಹಿಸುವುದು ಈ ಪರಿಕಲ್ಪನೆಯ ಮುಖ್ಯ ಉದ್ದೇಶ.

ನಾವು ಕೆಲಸ ಮಾಡುವ, ವಾಸಿಸುವ ಕಟ್ಟಡಗಳು ಚಳಿ ಗಾಳಿ, ಉಷ್ಣತೆ, ಮಳೆ, ಮಂಜಿನಿಂದ ನಮ್ಮನ್ನು ರಕ್ಷಿಸುತ್ತವೆ, ಮತ್ತು ಈ ಕಟ್ಟಡಗಳು ನಮ್ಮ ಪರಿಸರದ ಮೇಲೆ ಪರಿಣಾಮವನ್ನೂ ಬೀರುತ್ತವೆ. ಕಟ್ಟಡ ನಿರ್ಮಾಣ ಮತ್ತು ಅವುಗಳ ನಿರ್ವಹಣೆಗೆ ಬೃಹತ್ ಪ್ರಮಾಣದ ಶಕ್ತಿ, ನೀರು ಮತ್ತು ವಸ್ತುಗಳು ಬೇಕಾಗುತ್ತವೆ. ಇವುಗಳಿಂದ ಬೃಹತ್ ಪ್ರಮಾಣದ ತ್ಯಾಜ್ಯವೂ ನಿರ್ಮಾಣವಾಗುತ್ತದೆ. ಬಳಸುವ ಜಾಗ ಮತ್ತು ನಿರ್ಮಾಣ ಕಾರ್ಯವು ನೆರೆಹೊರೆಯ ಜೈವಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ, ಅದೇ ವೇಳೆಗೆ ಹೊಸ ಒಳಾಂಗಣ ಸಮಸ್ಯೆ ಮತ್ತು ಸವಾಲುಗಳನ್ನು ಸೃಷ್ಟಿಸುತ್ತದೆ.

ಕಟ್ಟಡ ನಿರ್ಮಾಣ ಚಟುವಟಿಕೆ ತ್ವರಿತ ಗತಿಯಲ್ಲಿ ಏರುತ್ತಿದೆ. ಅಲ್ಲದೆ ಉದ್ಯಮ ಮತ್ತು ಕೃಷಿಯ ನಂತರ ನಿರ್ಮಾಣ ವಲಯವು ಶಕ್ತಿಯನ್ನು ಅತೀ ಹೆಚ್ಚು ಬಳಸುವ ಮೂರನೇ ವಿಭಾಗ ಎನಿಸಿಕೊಂಡಿದೆ. ಇದೇ ಕಾರಣಕ್ಕೆ ಹಸಿರು ಕಟ್ಟಡಗಳ ಅಗತ್ಯ ಹೆಚ್ಚಾಗಿದೆ. ಪರಿಸರವನ್ನು ಉಳಿಸುವ ಸವಾಲುಗಳನ್ನು ಎದುರಿಸಲು ಹಸಿರು ಸೌಧಗಳು ಬೇಕು.

ಪರಿಸರ ಸ್ನೇಹೀ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಮತ್ತು ಅದನ್ನು ನಿರ್ಮಾಣ ವಲಯದಲ್ಲಿ ಕಾರ್ಯರೂಪಕ್ಕೆ ತರುವುದರಿಂದ ರಾಷ್ಟ್ರೀಯ ಸಂಪನ್ಮೂಲದ ರಕ್ಷಣೆಯಾಗುತ್ತದೆ. ಅಲ್ಲದೆ ನಿರ್ವಹಣಾ ವೆಚ್ಚವೂ ಉಳಿತಾಯವಾಗುತ್ತದೆ.


 

 

Top