ಪವಮಾನ ಶಕ್ತಿ                     
ಪ್ರಸ್ತುತ ಸ್ವಾಭಾವಿಕ ಶಕ್ತಿ ಮೂಲಗಳಾದ ಭೂಪದರಗಳಲ್ಲಿ ದೊರಕುವ ಇಂಧನ ಹಾಗೂ ಕಲ್ಲಿದ್ದಲು ಬರಿದಾಗುತ್ತಿರುವ ಹಿನ್ನೆಲೆಯಲ್ಲಿ ನವೀಕರಿಸಬಹುದಾದ ಅಥವಾ ವಸ್ತುಶಃ ನಶಿಸಿಹೋಗದ ಶಕ್ತಿಮೂಲಗಳನ್ನು ಹುಡುಕುವುದು ಇಂದಿನ ಅಗತ್ಯವಾಗಿದೆ. ಅಲ್ಲದೆ ಕಲ್ಲಿದ್ದಲು ಇತ್ಯಾದಿ ಬಳಕೆಯಿಂದಾಗಿ ನಾವು ಪರಿಸರವನ್ನು ಸಹ ಕಲುಷಿತಗೊಳಿಸುತ್ತಿದ್ದೇವೆ.

ಇದರಿಂದಾಗಿ ಸೂರ್ಯನ ಅಲ್ಟ್ರಾ ವಯಲೆಟ್ ಕಿರಣಗಳಿಂದ ಜೀವ ಸಂಕುಲವನ್ನು ರಕ್ಷಿಸುತ್ತಿರುವ ಓಝೋನ್ ಪದರ ದಿನದಿಂದ ದಿನಕ್ಕೆ ತೆಳುವಾಗುತ್ತಿದ್ದು, ಅಲ್ಟ್ರಾ ವಯಲೆಟ್ ಕಿರಣ ಒಳನುಸುಳುವ ಭೀತಿ ಎದುರಾಗಿದೆ. ದಹ್ಯಮೂಲಗಳಿಂದ ಭಾರೀ ಪ್ರಮಾಣದಲ್ಲಿ ತ್ಯಾಜ್ಯಶಾಖ ಉತ್ಪತ್ತಿಯಾಗುತ್ತಿದ್ದು, ಇದು ಪರಿಸರ ವ್ಯವಸ್ಥೆಯ ಮೇಲೆ ಒತ್ತಡ ಹೇರುತ್ತಿದೆ. ಹೀಗಾಗಿ ನಾವು ಮಾಲಿನ್ಯ ಮುಕ್ತ ಮತ್ತು ನವೀಕರಿಸಬಹುದಾದ ಪರ್ಯಾಯ ಇಂಧನದತ್ತ ಸಾಗಬೇಕು. ಇದರಲ್ಲಿ ಪವಮಾನ ಶಕ್ತಿ (ವಿಂಡ್ ಎನರ್ಜಿ) ಈ ಭಾಗದ ವಿಷಯವಾಗಿದೆ.
 


ಪವಮಾನ ಶಕ್ತಿಯು ಸ್ವಾಭಾವಿಕವಾದ ಶಕ್ತಿಯಾಗಿದ್ದು, ಎಲ್ಲಿ ಗಾಳಿಯು ಸೆಕೆಂಡಿಗೆ 12 ಮೈಲಿ ವೇಗದಲ್ಲಿ ಬೀಸುತ್ತದೋ ಅಲ್ಲಿ ಪವಮಾನ ಶಕ್ತಿ ಉತ್ಪಾದಿಸಬಹುದಾಗಿದೆ. ಪವಮಾನ ಶಕ್ತಿಯು ಮಾಲಿನ್ಯ ಮುಕ್ತವಾಗಿದ್ದು ಇದರಲ್ಲಿ ಯಾವುದೇ ರೀತಿಯ ಅರಣ್ಯನಾಶ/ ಮೌಲ್ಯಯುತ ಭೂಮುಳುಗಡೆ ಇರುವುದಿಲ್ಲ. ಜೀವಸಂಕುಲ ಮತ್ತು ಸಸ್ಯಸಂಕುಲಗಳಿಗೆ ಯಾವುದೇ ರೀತಿಯ ಉಪದ್ರವವೂ ಆಗುವುದಿಲ್ಲ. ಈ ಯೋಜನೆಗಳ ಜಾರಿಗೆ ತಗಲುವ ಧಾರಣಾ ಸಮಯ ಸಹ ಅಲ್ಪ. ಜೊತೆಗೆ ಸಾಂಪ್ರದಾಯಿಕ ವಿದ್ಯುತ್ ಯೋಜನೆಗಳೊಂದಿಗೆ ಪವಮಾನ ಶಕ್ತಿ ಯೋಜನೆಗಳ ವೆಚ್ಚವನ್ನು ತುಲನೆಮಾಡಬಹುದಾಗಿದೆ.

ಪವಮಾನ ಶಕ್ತಿ ಯೋಜನೆಗಳ ಪರಿಮಿತಿ:

  • ಗಾಳಿ ಬೀಸುವ ದಿಕ್ಕು ಮತ್ತು ವೇಗಕ್ಕೆ ಅವಲಂಬಿತವಾಗಿರುತ್ತದೆ.
  • ಉತ್ಪಾದಿಸಿದ ಶಕ್ತಿಯನ್ನು ಸಂಗ್ರಹಿಸಿಡಲೇಬೇಕು.

 

 

Top