ಇ-ಪಾಯಿಂಟ್ ಬುಕ್                     


ಇ-ಪಾಯಿಂಟ್ ಪುಸ್ತಕವು ಪೊಲೀಸ್ ಬೀಟ್ ನಲ್ಲಿ ಬಳಸಲಾಗುವ ಪಾಯಿಂಟ್ ಬುಕ್ ಗೆ  ಸಮಾನವಾಗಿರುತ್ತದೆ. ಪಾಯಿಂಟ್  ಪುಸ್ತಕದಲ್ಲಿ ಸಾಮಾವ್ಯವಾಗಿ  ಗಸ್ತಿನಲ್ಲಿರುವ  ಪೊಲೀಸ್ ಸಿಬ್ಬಂದಿ  ತನ್ನ ಗಸ್ತು ಸೇವೆಗೆ ಸಂಬಂಧಿಸಿದಂತೆ ದಾಖಲಿಸುತ್ತಾರೆ. ಗಸ್ತು ಸೇವೆ ಸಮರ್ಪಕವಾಗಿ ಆಗಿದೆಯೇ  ಇಲ್ಲವೆ  ಎಂಬುದನ್ನು ತಿಳಿಯಲು ಮೇಲ್ವಿಚಾರಕರಿಗೆ ಇದು ನೆರವಾಗುತ್ತದೆ. ಇದೇ ರೀತಿ ಇ-ಪಾಯಿಂಟ್ ಬುಕ್ ನಲ್ಲಿ ಸಹ (ಇನ್ಫೋಹೈವೇ ಅಥವಾ ಇಂಟರ್ ನೆಟ್ ನಲ್ಲಿರುವ ಪಾಯಿಂಟ್ ಬುಕ್) ನೀವು ಮೇಲ್ವಿಚಾರಕರಿಗೆ ತಿಳಿಯುವಂತೆ ನಿರ್ಮಾಣ ಕಾಮಗಾರಿಗೆ ಸೂಕ್ತವಾಗಿ ಸ್ಪಂದಿಸಲಾಗಿದೆಯೋ ಇಲ್ಲವೋ ಎಂಬ ಬಗ್ಗೆ  ದಾಖಲಿಸಬಹುದಾಗಿದೆ. ಇ-ಪಾಯಿಂಟ್ ಪುಸ್ತಕದಲ್ಲಿ ಹೈಪರ್ ಲಿಂಕ್ ಆಯ್ಕೆ ಮಾಡಿಕೊಳ್ಳುವ ಮೂಲಕ  ಮುಕ್ತವಾಗಿ  ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನೀವು ಮಾಡಬೇಕಾದ್ದು ಇಷ್ಟೆ. ನೀವು ಮೇಲ್ವಿಚಾರಕರ ಗಮನಕ್ಕೆ ತರಬಯಸುವ ಕಾಮಗಾರಿಯ ಗುಣಮಟ್ಟ  ಮತ್ತಿತರ ವಿಷಯಕ್ಕೆ ಸಂಬಂಧಿಸಿದಂತೆ ನೀವು ಯಾವ ಯೋಜನೆಗೆ ಸಂಬಂಧಿಸಿದಂತೆ ತಿಳಿಸಲಿಚ್ಛಿಸುತ್ತೀರಿ ಎಂಬುದನ್ನು ಮೊದಲು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಅನಿಸಿಕೆಗಳನ್ನು ತಿಳಿಸಲು ಯೋಜನೆಯ ಹೆಸರನ್ನು ಆಯ್ಕೆ ಮಾಡಿದ ಬಳಿಕ Next ಎಂಬ ಸಂಪರ್ಕದ ಮೇಲೆ ಕ್ಲಿಕ್ ಮಾಡಿ. ನಿಮ್ಮ ಸಲಹೆ ಹಾಗೂ ಸಂದೇಶಗಳು ಯೋಜನೆಯ ಸಂಬಂಧಿತ ಎಲ್ಲ ವ್ಯಕ್ತಿಗಳಿಗೂ ಏಕಕಾಲದಲ್ಲಿ ತಲುಪುತ್ತದೆ ಜೊತೆಗೆ ಸೂಕ್ತ ಪರಿಹಾರದ ಖಾತ್ರಿಯೂ ಇರುತ್ತದೆ. ನಿಮಗೆ ನೀವು ಕಳುಹಿಸಿದ ಸಲಹೆಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮದ ಬಗ್ಗೆ ಮಾಹಿತಿ ಬೇಕಾದಲ್ಲಿ ಅದನ್ನು ತಮ್ಮ ಪರಾಮರ್ಶೆಗೆ ಕಳುಹಿಸಲು ಸಮರ್ಥರಿರುತ್ತೇವೆ. ಅದಕ್ಕೆ ತಾವು ತಮ್ಮ ವಿಳಾಸ, ವಿದ್ಯುನ್ಮಾನ ವಿಳಾಸ ಅಥವಾ ದೂರವಾಣಿ ಸಂಖ್ಯೆಯನ್ನು ನಮಗೆ ಕಳುಹಿಸಬೇಕು.

ಈ ಕೆಲಸವನ್ನು ಸುಗಮಗೊಳಿಸಲು ನಾವು, ತಾವು ತಮ್ಮ ಆಯ್ಕೆಯ ಯಾವ ವಿಷಯಕ್ಕೆ ಸಂಬಂಧಿಸಿದಂತೆ ಸಲಹೆ-ಅನಿಸಿಕೆ ಕೊಡಲು ಬಯಸುತ್ತೀರಿ ಎಂಬುದನ್ನು ವರ್ಗೀಕರಿಸುವ ಪ್ರಯತ್ನ ಮಾಡಿದೆ. ಹೀಗಾಗಿ ತಾವು ನಿಮ್ಮ ಆಯ್ಕೆಯ ವಿಷಯದಲ್ಲಿ ಸಲಹೆ, ಅನಿಸಿಕೆಗಳನ್ನು ಮುಕ್ತವಾಗಿ ತಿಳಿಸಿ. ಇದು ನಿಮ್ಮ ಅಭಿಪ್ರಾಯಗಳನ್ನು ದಾಖಲಿಸಿ ನಮಗೆ ತಿಳಿಸುವ ನಿಮ್ಮ ಪಾಯಿಂಟ್ ಬುಕ್ ಆಗಿರುತ್ತದೆ. ನಾವು ತಮ್ಮ ಅಮೂಲ್ಯ ಸಲಹೆ ಹಾಗೂ ಅಭಿಪ್ರಾಯಗಳನ್ನು ನಮ್ಮ ಮುಂದಿನ ಯೋಜನೆಗಳಲ್ಲಿ ಸಹ ಅಳವಡಿಸಿಕೊಳ್ಳುತ್ತೇವೆ. ನಿಮ್ಮ ಚಿಂತನೆಗಳು ನಮ್ಮ  ಸೇವೆಯನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಸಹಕಾರಿಯಾಗುತ್ತದೆ. ನಿಮ್ಮ ಗೌಪ್ಯವಾಗಿ ಮಾಹಿತಿಯನ್ನು ಕೊಡಲು ಇಚ್ಛಿಸಿದಲ್ಲಿ, ನೀವು ಮುಖಪುಟದಲ್ಲಿರುವ ಗೌಪ್ಯವಾಗಿ (In confidence) ಲಿಂಕ್ ಗೆ ಹೋಗಲು ಸಲಹೆ ಮಾಡಲಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಸಂದೇಶವನ್ನು ಕೇವಲ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಮಾತ್ರ ನೋಡುತ್ತಾರೆ.

ಸಮಯವನ್ನು ಉಳಿಸುವ ಸಲುವಾಗಿ ನೀವು ನಿಮ್ಮ ಸಲಹೆ ಕೊಡುವಾಗ ಎಷ್ಟು ಸಂಕ್ಷಿಪ್ತವೋ ಅಷ್ಟು ಸಂಕ್ಷಿಪ್ತವಾಗಿ ತಿಳಿಸಿ. ಇನ್ನೂ ಅಂತರ್ಜಾಲ ವ್ಯವಸ್ಥೆ  ಹೊಂದದ ಹಾಗೂ  ನಿರ್ಮಾಣ ಕಾಮಗಾರಿಗಳ ಬಗ್ಗೆ ಅಮೂಲ್ಯ ಸಲಹೆಗಳನ್ನು ನೀಡಲಿಚ್ಛಿಸುವವರಿಗಾಗಿ ನಾವು ಎಲ್ಲ ಕಾರ್ಯಕ್ಷೇತ್ರಗಳಲ್ಲಿ ಕಿಯೋಸ್ಕ್ ಗಳನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿದ್ದೇವೆ. ಈ ಕಿಯೋಸ್ಕ್ಸ್ ಗಳ ಸೇವೆ ಸಹ ನೀವು ನಮಗೆ ಇ-ಮೇಲ್ ಕಳುಹಿಸಿದ ರೀತಿಯಲ್ಲೇ ನೇರವಾಗಿ ತಲುಪುತ್ತದೆ.

ನೀವು ಸಲಹೆ ನೀಡಲಿಚ್ಛಿಸುವ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ.

Top