ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದ

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆ ೧೯೯೯
[೨೦೦೦ರ ೨೯ನೇ ಕಾಯ್ದೆ]

ಉದ್ದೇಶಗಳು ಮತ್ತು ಕಾರಣಗಳ ವಿವರಣೆ:

(೧೯೯೯ರ ಎಲ್.ಸಿ. ಮಸೂದೆಯಿಂದ ಪಡೆಯಲಾಗಿದ್ದು)

ಇತ್ತೀಚಿನ ದಿನಗಳಲ್ಲಿ ಅನೇಕ ಸರ್ಕಾರಿ ಇಲಾಖೆಗಳಲ್ಲಿ, ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಲ್ಲಿ, ಶಾಸನಾತ್ಮಕ ಮಂಡಳಿಗಳಲ್ಲಿ ಇತ್ಯಾದಿ ಕಡೆಗಳಲ್ಲಿ ಟೆಂಡರ್ ಪ್ರಕ್ರಿಯೆಗಳಲ್ಲಿ ಅವ್ಯವಹಾರಗಳು ನಡೆಯುತ್ತಿರುವುದು ಕಂಡುಬಂದಿದೆ. ಟೆಂಡರ್‌ಗೆ ಸಾಕಷ್ಟು ಪ್ರಚಾರ ನೀಡದಿರುವುದು, ಟೆಂಡರ್ ದಾಖಲೆಗಳ ಸರಬರಾಜಿನಲ್ಲಿ ನಿರ್ಬಂಧ ಇದಕ್ಕೆ ಕಾರಣ. ಇದರಿಂದಾಗಿ ಟೆಂಡರ್ ಮೌಲ್ಯಮಾಪನ ಮತ್ತು ಸ್ವೀಕಾರದಲ್ಲಿ ಪಾರದರ್ಶಕತೆಯ ಕೊರತೆ ಉಂಟಾಗಿದೆ.

ಇಂತಹ ಅವ್ಯವಹಾರಗಳು ಪುನರಾವರ್ತನೆಯಾಗದಂತೆ ತಡೆಯುವ ಸಲುವಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತರಲು ಮತ್ತು ಟೆಂಡರ್‌ಗಳ ಆಹ್ವಾನ, ಪರಿಷ್ಕರಣ ಮತ್ತು ಸ್ವೀಕಾರವನ್ನು ಮಾನ್ಯ ಮಾಡಲು ಶಾಸನವೊಂದನ್ನು ತರಲಾಗುವುದು ಎಂದು ೧೯೯೭-೯೮ನೇ ವರ್ಷದ ಬಜೆಟ್ ಭಾಷಣದಲ್ಲಿ ಪ್ರಕಟಿಸಲಾಯಿತು.

ಹಾಗಾಗಿ ಈ ಮಸೂದೆ.II

                                                          II

                                     ೨೦೦೧ರ ೨೧ನೇ ಕಾಯ್ದೆಯ ತಿದ್ದುಪಡಿ

                 (ಎಲ್.ಎ.ಮಸೂದೆ ಸಂಖ್ಯೆ ೨೦೦೧ರ ೨೦ನ್ನು ನೋಡಿ) (ಕಡತ ಸಂಖ್ಯೆ...)

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆ ೧೯೯೯ರ ೪ನೇ ವಿಧಿಯ ಪರಿಚ್ಛೇದ (ಇ), ಸರ್ಕಾರಿ ಇಲಾಖೆಗೆ ೫ ಲಕ್ಷ ರೂ. ಮೌಲ್ಯವನ್ನು ಮೀರದ ಸರಕು ಹಾಗೂ ಸೇವೆಗಳ ಸಂಗ್ರಹಣೆಗೆ ಸಂಬಂಧಿಸಿದಂತೆ ಕಾಯ್ದೆಯ IIನೇ ಅಧ್ಯಾಯ ಅನ್ವಯವಾಗುವುದನ್ನು ಹೊರತುಪಡಿಸುತ್ತದೆ ಮತ್ತು ಇದು ಸ್ಥಳೀಯ ಅಧಿಕಾರಿಗಳ ಮಟ್ಟಿಗೆ ೨ ಲಕ್ಷ ರೂ. ಮೌಲ್ಯವನ್ನು ಮೀರದ ಮಿನಿ ನೀರು ಸರಬರಾಜು ಮತ್ತು ಶಾಲಾ ಕೊಠಡಿಗಳ ನಿರ್ಮಾಣವನ್ನು ಅನುಷ್ಠಾನಕ್ಕೆ ತರುವ ಸಂದರ್ಭದಲ್ಲಿ ಅನ್ವಯವಾಗುವುದಿಲ್ಲ ಹಾಗೂ ಇತರ ಪ್ರಕರಣಗಳಲ್ಲಿ ಇದು ಒಂದು ಲಕ್ಷ ರೂಪಾಯಿಯನ್ನು ಮೀರಬಾರದು.

ಬೆಲೆಗಳ ಏರಿಕೆಯ ಹಿನ್ನೆಲೆಯಲ್ಲಿ, ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು ಮತ್ತಿತರ ಸಂದರ್ಭಗಳಲ್ಲಿ ಸರಕು ಹಾಗೂ ಸೇವೆಗಳ ಸಂಗ್ರಹಣೆಯ ವೇಳೆ ಎಲ್ಲ ಸರ್ಕಾರಿ ಇಲಾಖೆಗಳಿಗೆ ಸಮಾನವಾದ ಮಿತಿಯನ್ನು ವಿಧಿಸುವುದು ಅಗತ್ಯ ಎಂದು ಭಾವಿಸಲಾಯಿತು.

ಹಾಗಾಗಿ ಕಾಯ್ದೆಯ IIನೇ ಅಧ್ಯಾಯ ಅನ್ವಯವಾಗುವುದನ್ನು ಹೊರತುಪಡಿಸುವುದಕ್ಕಾಗಿ ತಿದ್ದುಪಡಿಯ ಅಗತ್ಯವಿದೆ ಎಂದು ಭಾವಿಸಲಾಯಿತು.;

(i) ಐದು ಲಕ್ಷ ರೂಪಾಯಿಗೂ ಮೀರಿದ ಎಲ್ಲ ರೀತಿಯ ನಿರ್ಮಾಣ ಕಾರ್ಯ ಕೈಗೊಳ್ಳಲು ಸರ್ಕಾರಿ ಇಲಾಖೆಗಳು, ರಾಜ್ಯ ಸರ್ಕಾರಿ ಸಂಸ್ಥೆ ಅಥವಾ ಯಾವುದೇ ಮಂಡಳಿ, ಸಂಸ್ಥೆ ಅಥವಾ ನಿಗಮದ ಯಾವುದೇ ಕಾನೂನು ಮೂಲಕ ಅಥವಾ ಅದರ ಅಡಿಯಲ್ಲಿ ಮತ್ತು ಸರ್ಕಾರ, ಜಿಲ್ಲಾ ಪಂಚಾಯತ್‌ಗಳು, ನಗರಪಾಲಿಕೆಗಳು, ನಗರಸಭೆ, ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಬಯಲುಸೀಮೆ ಅಭಿವೃದ್ಧಿ ಮಂಡಳಿ ಮಾಲೀಕತ್ವದಲ್ಲಿ ಅಥವಾ ನಿಯಂತ್ರಣದಲ್ಲಿ ಸಂಗ್ರಹಣ ಕಾರ್ಯ ನಡೆಯಬೇಕಾಗುತ್ತದೆ. ನಿರ್ಮಾಣ ಕಾರ್ಯವನ್ನು ಹೊರತುಪಡಿಸಿದ ಸರಕು ಅಥವಾ ಸೇವೆಗಳ ವಿಚಾರದಲ್ಲಿ ಇದರ ಮೌಲ್ಯ ಒಂದು ಲಕ್ಷ ರೂಪಾಯಿ ಮೀರಬಾರದು.

(ii) ಎರಡು ಲಕ್ಷ ರೂಪಾಯಿಗೂ ಮಿರದ ಮಿನಿ ನೀರು ಸರಬರಾಜು ಯೊಜನೆಗಳು ಅಥವಾ ಶಾಲಾ ಕಟ್ಟಡಗಳ ನಿರ್ಮಾಣ ಮತ್ತು ಒಂದು ಲಕ್ಷ ರೂಪಾಯಿಯನ್ನು ಮೀರದ ಇತರ ಪ್ರಕರಣಗಳಲ್ಲಿ ಗ್ರಾಮಪಂಚಾಯತ್, ತಾಲೂಕು ಪಂಚಾಯತ್, ಪುರಸಭೆ, ಪಟ್ಟಣ ಪಂಚಾಯತ್ ಅತವಾ ನಗರಾಭಿವೃದ್ಧಿ ಪ್ರಾಧಿಕಾರಗಳ ಮೂಲಕ ಸರಕುಗಳು ಅಥವಾ ಸೇವೆಗಳ ಸಂಗ್ರಹಣಾ ಕಾರ್ಯ ನಡೆಯಬೇಕಾಗುತ್ತದೆ.

ಹಾಗಾಗಿ ಈ ಮಸೂದೆ

 

            ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆ ೧೯೯೯
                                          [೨೦೦೦ರ ೨೯ನೇ ಕರ್ನಾಟಕ ಕಾಯ್ದೆ]
(೨೦೦೦ನೇ ಇಸವಿಯ ಡಿಸೆಂಬರ್ ೧೦ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆಯನ್ನು ಪಡೆಯಲಾಗಿದ್ದು, ೨೦೦೦ರ ಡಿಸೆಂಬರ್ ೧೩ನೇ ದಿನಾಂಕದಂದು ಕರ್ನಾಟಕ ಗಜೆಟ್ ಎಕ್ಸ್‌ಟ್ರಾಆರ್ಡಿನರಿಯಲ್ಲಿ ಮೊದಲು ಪ್ರಕಟಗೊಂಡಿದೆ)

                   ೨೦೦೧ರ ೨೧ನೇ ಕಾಯ್ದೆಯಿಂದ ತಿದ್ದುಪಡಿಯಾದಂತೆ
ಸಂಗ್ರಹಣಾ ಅಸ್ತಿತ್ವಗಳ ಮೂಲಕ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಟೆಂಡರ್ ಆಹ್ವಾನ, ಪರಿಷ್ಕರಣೆ ಮತ್ತು ಸ್ವೀಕಾರದಲ್ಲಿನ ನಿಯಮಾವಳಿಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ಮೂಲಕ ಸರಕುಗಳು ಮತ್ತು ಸೇವೆಗಳ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಈ ಕಾಯ್ದೆ ನೆರವಾಗುತ್ತದೆ.

ಟೆಂಡರ್‌ಗಳ ಆಹ್ವಾನ, ಪರಿಷ್ಕರಣೆ ಮತ್ತು ಸ್ವೀಕಾರದಲ್ಲಿನ ನಿಯಮಾವಳಿಗಳನ್ನು ಪರಿಣಾಮಕಾರಿಯಾಗಿ ಮಾಡಿ ಸಂಗ್ರಹಣಾ ಅಸ್ತಿತ್ವಗಳ ಮೂಲಕ ಸರಕುಗಳು ಮತ್ತು ಸೇವೆಗಳ ಸಂಗ್ರಹಣಾ ಪ್ರಕ್ರಿಯೆ ನಡೆಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಂತ ಸಮಯೋಚಿತವಾಗಿರುತ್ತದೆ.

ಭಾರತೀಯ ಗಣತಂತ್ರದ ಐದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ಶಾಸಕಾಂಗ ರೂಪಿಸಿದ ಕಾಯ್ದೆ ಈ ಕೆಳಗಿನಂತಿದೆ:

                                                    ಪೀಠಿಕೆ

ಶಾಸನದಲ್ಲಿರುವ ವ್ಯಾಖ್ಯಾನದಲ್ಲಿ ಯಾವುದೂ ಸ್ಪಷ್ಟವಾಗದಿದ್ದರೂ ಪೀಠಿಕೆಯಿಂದ ಕಾಯ್ದೆಯ ಉದ್ದೇಶಗಳು ಕಾಯ್ದೆಯ ಶಾಸನಾತ್ಮಕ ಇತಿಹಾಸ ಮತ್ತು ಸಾಮಾಜಿಕ-ಆರ್ಥಿಕ ವೈಶಿಷ್ಟ್ಯ ಮತ್ತು ಕಾಯ್ದೆಯು ಅಂಗೀಕಾರಗೊಂಡ ಸಂದರ್ಭದಲ್ಲಿನ ಆಕಾಂಕ್ಷೆಗಳನ್ನು ಒಂದಿಷ್ಟು ತಿಳಿದುಕೊಳ್ಳಬಹುದಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಗಿ/S ಎ.ರಾಜಪ್ಪ, (೧೯೭೮) ೨ಸಿಸಿ ೨೧೩.

ಶಾಸನದ ತಿರುಳನ್ನು ತಿಳಿದುಕೊಳ್ಳಲು ಪೀಠಿಕೆ ಅತ್ಯಂತ ಮಹತ್ವ. ಆದರೆ, ಶಾಸನದ ಸ್ಪಷ್ಟ ಹಾಗೂ ನಿಖರವಾದ ಭಾಷೆ ಅದನ್ನು ನಿಯಂತ್ರಿಸಬಹುದಿತ್ತು ಅಥವಾ ಇನ್ನಷ್ಟು ಅರ್ಹಗೊಳಿಸಬಹುದಿತ್ತು ಎಂಬುದು ಇದರ ಅರ್ಥವಲ್ಲ. ಕೇವಲ ಅನುಮಾನಕ್ಕೆ ಅವಕಾಶವಾದಾಗ ಮಾತ್ರ, ಇದನ್ನು ಕಾಯ್ದೆಯನ್ನಾಗಿ ಮಾಡಲು ಕಾರಣವೇನು ಮತ್ತು ಅದರ ಹಿಂದಿನ ಶಾಸನಾತ್ಮಕ ಉದ್ದೇಶವನ್ನು ತಿಳಿದುಕೊಳ್ಳಲು ಪೀಠಿಕೆ ಅನುಕೂಲವಾಗುತ್ತದೆ. ಶಾಸನ ಒಂದಕ್ಕಿಂತ ಹೆಚ್ಚು ಅರ್ಥವನ್ನು ಕೊಡಬಹುದಾಗಿದ್ದರೆ ಆಗ ಅದು ಉದ್ದೇಶಕ್ಕೆ ಹೆಚ್ಚು ಹತ್ತಿರವಾಗುತ್ತಿತ್ತು ಮತ್ತು ಪೀಠಿಕೆಯ ಅವಕಾಶವನ್ನು ಬಳಸಿಕೊಳ್ಳಬಹುದಿತ್ತು. ಹಾಗಾಗಿ ಪೀಠಿಕೆ ಕಾಯ್ದೆಯಲ್ಲಿನ ಸ್ಪಷ್ಟ ಮಾತುಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಶಾಸನದ ಅವಕಾಶಗಳ ಬಗ್ಗೆ ವ್ಯಾಖ್ಯಾನ ಮಾಡುವ ಸಂದರ್ಭದಲ್ಲಿ ಕೋರ್ಟ್ ಪೀಠಿಕೆಯಿಂದ ಆರಂಭಿಸಬಾರದು. ತ್ರಿಭುವನ್ ಪ್ರಕಾಶ್ ನಯ್ಯರ್ ಗಿ/S ಕೇಂದ್ರ ಸರ್ಕಾರ, ಎಐಆರ್ ೧೯೭೦ ಎಸ್‌ಸಿ ೫೪೦ (೧೯೬೯) ೩ ಎಸ್‌ಸಿಸಿ ೯೯.

ಪೀಠಿಕೆ ಹಕ್ಕುಗಳನ್ನು ನೀಡಲು ಅಥವಾ ಅವನ್ನು ಕಿತ್ತುಕೊಳ್ಳಲು ಅದೇನೂ ಪ್ರತ್ಯೇಕ ಕಾಯ್ದೆಯಲ್ಲ. ಕಾಯ್ದೆಯ ಭಾಗವೇ ಸ್ಪಷ್ಟ ಹಾಗೂ ಅಸಂದಿಗ್ದವಾಗಿರುತ್ತಿದ್ದರೆ ಪೀಠಿಕೆ ನಿರ್ಬಂಧವಾಗುತ್ತಿರಲಿಲ್ಲ ಅಥವಾ ವಿಸ್ತೃತಗೊಳ್ಳುತ್ತಿರಲಿಲ್ಲ.

ಆರ್.ವೆಂಕಟಸ್ವಾಮಿ ನಾಯ್ಡು ಗಿ/S ನರ್ಸಾರಾಮ್ ನಾರಾಯಣ್‌ದಾಸ್, ಎಐಆರ್ ೧೯೬೬ ಎಸ್‌ಸಿ ೩೬೧.

ಅರ್ಥವಿವರಣೆಯ ಸಾಧನಗಳು:


ವ್ಯಾಖ್ಯಾನದ ನಿಯಮಗಳು ಉಪಯುಕ್ತ ಸರ್ವೆಂಟ್‌ಗಳಾಗಿದ್ದು, ಆದರೆ, ಒಮ್ಮೊಮ್ಮೆ ಅವು ಅತ್ಯಂತ ಸಂಕಷ್ಟದ ಮಾಸ್ಟರ್‌ಗಳಾಗುವುದಿದೆ. ಕೇಶವ್‌ಜಿ ರವಿಜೀ ಮತ್ತು ಕಂ ಗಿ/S ಸಿಐಟಿ, (೧೯೯೦) ೨ ಎಸ್‌ಸಿಸಿ ೨೩೧

ಶಾಸನವನ್ನು ವ್ಯಾಖ್ಯಾನ ಮಾಡುವಾಗ ಅರ್ಥವಿವರಣೆಗೆ ಸೂಕ್ತವಾದ ನಿಯಮವನ್ನು ಅಳವಡಿಸಿಕೊಳ್ಳಬೇಕು. ಯಾಕೆಂದರೆ ಈ ಸಾಧನ ಶಾಸನವನ್ನು ರೂಪಿಸುವಾಗ ಆಗಿರುವ ದೋಷದ ಸ್ವರೂಪಕ್ಕೆ ತಕ್ಕಂತಿದ್ದು, ಅದನ್ನು ಸರಿಪಡಿಸಬೇಕು. ಪದಗಳು ಅತ್ಯಂತ ಸ್ಪಷ್ಟವಾಗಿದ್ದರೆ, ವ್ಯಾಖ್ಯಾನದ ಸಾಧನವನ್ನು ತೆರೆಯುವ ಅಗತ್ಯವೇ ಬರುವುದಿಲ್ಲ. ಮೆ| ಮರ್‍ಕೂರಿ ಪ್ರೆಸ್ ಮತ್ತು ಓರ್ಸ್. ಗಿ/S ಅಮೀನ್ ಶಕೂರ್ ಆಂಡ್ ಓರ್ಸ್., ಐಎಲ್‌ಆರ್ ೨೦೦೨ ಕರ್ನಾಟಕ ೨೩೦೪-ಡಿಬಿ.

ನ್ಯಾಯಾಲಯಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಮತ್ತು ಅದು ಕಾಲಕಾಲಕ್ಕೆ ಸಮಾಜದ ಅಗತ್ಯಕ್ಕೆ ತಕ್ಕಂತೆ ವ್ಯಾಖ್ಯಾನ ಮಾಡಬಲ್ಲ ಕಾನೂನನ್ನು ಅಳವಡಿಸಿಕೊಳ್ಳುವಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತದೆ. ಕೇಂದ್ರ ಸರ್ಕಾರ ಗಿ/S ಎಚ್.ಎಸ್.ಧಿಲ್ಲಾನ್, (೧೯೭೧) ೨ ಎಸ್‌ಸಿಸಿ ೭೭೯.

ಒಂದು ಕಾಯ್ದೆಯ ಅಭಿದಾನ ಅದರ ನಿಜವಾದ ಸ್ವರೂಪಕ್ಕೆ ಕನ್ನಡಿಯಲ್ಲ, ಬದಲಾಗಿ ಅದರೊಳಗಿನ ಸಾರ ಏನು ಎನ್ನುವುದು ಮುಖ್ಯ. ಏಐಆರ್ ೧೯೫೮ ಎಸ್‌ಸಿ ೪೦೮; ಏಐಆರ್೧೯೫೧ ಎಸ್‌ಸಿ ೩೧೮; ಏಐಆರ್ ೧೯೫೪ ಎಸ್‌ಸಿ ೧೧೯.

ಒಂದು ಕಾಯ್ದೆಯ ನೈಜ ಸ್ವರೂಪವನ್ನು ಕಂಡುಕೊಳ್ಳಬೇಕಿದ್ದರೆ, ನ್ಯಾಯಾಲಯಗಳು ಅದರ ಸ್ವರೂಪ ಮತ್ತು ನಿರ್ಮಿತಿಯ ಆಚೆಗೆ ನೋಡಬೇಕು. ಏಐಆರ್ ೧೯೫೪ ಎಸ್‌ಸಿ ೧೧೯

ಒಂದು ಶಾಸನದ ಕೆಲವು ಅವಕಾಶಗಳ ಬಗ್ಗೆ ಅರ್ಥವಿವರಣೆ ಮಾಡುವಾಗ ಮನಸ್ಸಿನಲ್ಲಿ ಇರಿಸಿಕೊಳ್ಳಬೇಕಾದ ಸಂಗತಿಯೇನೆಂದರೆ ವ್ಯಾಖ್ಯಾನ ಕೂಡ ಕಾಯ್ದೆಯ ಉದ್ದೇಶದ ವ್ಯಾಪ್ತಿಯನ್ನು ವಿಸ್ತರಿಸುವಂತಿರಬೇಕು. ಅದನ್ನು ಪ್ರತ್ಯೇಕವಾಗಿ ಓದುವಂತಿರಬಾರದು. ಟಿ.ಎಂ.ಎ. ಪೈ ಪ್ರತಿಷ್ಠಾನ ಗಿ/S ಕರ್ನಾಟಕ ರಾಜ್ಯ ಸರ್ಕಾರ, ೨೦೦೨ (೮) ಪುಟ ೫೭ರ ಸ್ಕೇಲ್ ೧.

ಒಂದು ಅವಕಾಶವನ್ನು ವ್ಯಾಖ್ಯಾನ ಮಾಡುವಾಗ ಕಾಯ್ದೆಯನ್ನು ಪೂರ್ತಿಯಾಗಿ ಓದಿಕೊಳ್ಳಬೇಕು. ಪೋಪಟ್‌ಲಾಲ್ ಶಾ ಗಿ/S ಮದ್ರಾಸ್ ರಾಜ್ಯ ಏಐಆರ್ ೧೯೫೩ ಎಸ್‌ಸಿ ೨೭೪.

ಶಾಸನಾತ್ಮಕ ಉದ್ದೇಶವನ್ನು ತಿಳಿದುಕೊಳ್ಳುವಾಗ, ಆ ಶಾಸನದ ಭಾಷೆ ಮಹತ್ವದ ಅಂಶವಾಗಿರುತ್ತದೆ. ಕನೈಲಾಲ್ ಸುರ್ ಪರಮ್‌ನಿಧಿ ಸಾಧುಕಾನ್, ಏಐಆರ್ ೧೯೫೭ ಎಸ್‌ಸಿ ೯೦೭.

ಶಾಸನದ ವ್ಯಾಖ್ಯಾನ ಮತ್ತು ಉದ್ದೇಶ ಸಾಧ್ಯವಾದಷ್ಟು ಸೌಹಾರ್ಧಯುತವಾಗಿರಬೇಕು. ನ್ಯೂ ಇಂಡಿಯಾ ಸುಗರ್ ಮಿಲ್ಸ್ ಲಿ. ಸಿಎಸ್‌ಟಿ, ಏಐಆರ್ ೧೯೬೬ ಎಸ್‌ಸಿ ೧೨೦೭.

ಶಾಸನವನ್ನು ವ್ಯಾಖ್ಯಾನ ಮಾಡುವಾಗ ನ್ಯಾಯಾಲಯಗಳು ಅದರ ಅನುಷ್ಠಾನದಿಂದ ಆಗುವ ಸಂಕಷ್ಟಕ್ಕೆ ಪರಿಹಾರ ನೀಡುವ ಅವಕಾಶಗಳನ್ನು ಕೂಡ ನಿರ್ಲಕ್ಷಿಸುವಂತಿಲ್ಲ. ಮೋರಿಸ್ ಮರ್ಕಂಟೈಲ್ ಬ್ಯಾಂಕ್ ಲಿ. ಕೇಂದ್ರ ಸರ್ಕಾರ ಏಐಆರ್ ೧೯೬೫ ಎಸ್‌ಸಿ ೧೯೫೬

ಕಾಯ್ದೆಯ ಒಂದು ಅವಕಾಶದಲ್ಲಿ ಇರುವ ಪದಗಳಿಗೆ ಅವುಗಳದ್ದೇ ಆದ ಸೂಕ್ತ ಮತ್ತು ಅದರದ್ದೇ ಆದ ಅರ್ಥವನ್ನು ಕೊಡಬೇಕು. ಅಸ್ಸಾಂ ರಾಜ್ಯ ದೇವಪ್ರಸಾದ್ ಬರುವಾ, ಏಐಆರ್ ೧೯೬೯ ಎಸ್‌ಸಿ ೮೩೧
 

ವಂಚನೆ ನಿಯಮ ಅಥವಾ ಹೇಡನ್ ಪ್ರಕರಣದ ನಿಯಮ:

ಈ ಪ್ರಕರಣ ಹೇಡನ್ ಪ್ರಕರಣ ಎಂತಲೇ ಜನಪ್ರಿಯ, (೧೫೮೪) ಅo. ಖeಠಿ. ೭ಚಿ: (೧೫೮೪) ೭೬ ಇಖ ೬೩೭ ಇದನ್ನು ಮೊದಲು ಬೆಂಗಾಲ್ ಇಮ್ಯುನಿಟಿ ಪ್ರಕರಣದಲ್ಲಿ ಭಾರತದ ಸುಪ್ರೀಂಕೋರ್ಟ್ ಇದನ್ನು ಪ್ರಸ್ತಾಪಿಸಿತು.

ಇಲ್ಲಿನ ನಿಯಮ “ಒಟ್ಟಾರೆಯಾಗಿ ಎಲ್ಲ ಶಾಸನಗಳ ಸ್ಪಷ್ಟ ಹಾಗೂ ನೈಜ ವ್ಯಾಖ್ಯಾನವಾನ.........” ನಾಲ್ಕು ವಿಷಯಗಳನ್ನು ಇಲ್ಲಿ ವಿವೇಚನೆಗೆ ತೆಗೆದುಕೊಳ್ಳಬೇಕಾಗಿದೆ-೧. ಕಾಯ್ದೆಯ ನಿರೂಪಣೆಗೆ ಮುನ್ನ ಅನುಸರಿಸಬೇಕಾದ ಸಾಮಾನ್ಯ ಕಾನೂನು ಏನು? ೨. ಸಾಮಾನ್ಯ ಕಾನೂನಿನಲ್ಲಿ ಕಲ್ಪಿಸದೇ ಇರುವ ದೋಷ ಮತ್ತು ವಂಚನೆ ಯಾವುದು? ೩. ಈ ರೋಗವನ್ನು ಗುಣಪಡಿಸಲು ಮತ್ತು ಪರಿಹರಿಸಲು ಸಂಸತ್ತು ಕಂಡುಕೊಂಡಿರುವ ಮಾರ್ಗ ಯಾವುದು? ೪. ಪರಿಹಾರ ಮಾರ್ಗದ ನೈಜ ಕಾರಣ; ಮತ್ತು ನಂತರ ಎಲ್ಲ ನ್ಯಾಯಾಧೀಶರು ವಂಚನೆಯನ್ನು ದಮನ ಮಾಡುವ ರೀತಿಯಲ್ಲಿ ತಮ್ಮ ಅಧಿಕಾರವನ್ನು ಬಳಸಿಕೊಳ್ಳಬೇಕು ಮತ್ತು ಕುಟಿಲೋಪಾಯದ ದಾರಿಯನ್ನು ಮತ್ತು ವಂಚನೆ ಮಾಡಿ ನುಣಿಚಿಕೊಳ್ಳುವುದನ್ನು ಈ ಪರಿಹಾರ ಮಾರ್ಗದ ಮೂಲಕ ದಮನ ಮಾಡಬೇಕು.


ಗೋಲ್ಡನ್ ರೂಲ್ ಅಥವಾ ವಾರ್‌ಬರ್ಟನ್ ಪ್ರಕರಣದಲ್ಲಿನ ರೂಲ್:

ವಾರ್‌ಬರ್ಟನ್ ಗಿ/S ಲೌವ್‌ಲ್ಯಾಂಡ್ (೧೯೨೮), ೧ ಹಡ್ಸನ್ ಮತ್ತು ಬಿ.ಐರಿಶ್ ಪ್ರಕರಣಗಳಲ್ಲಿ ರೂಪಿಸಲಾದ ನಿಯಮ. ಇದನ್ನು ಗೋಲ್ಡನ್ ರೂಲ್ ಎಂತಲೂ ಕರೆಯಲಾಗುತ್ತದೆ. “ಶಾಸನವನ್ನು ನಿರ್ಮಿಸುವ ಸಂದರ್ಭದಲ್ಲಿನ ನಿಯಮ ಮೊದಲಿಗೆ ಪದಗಳ ವ್ಯಾಕರಣಸೂತ್ರವನ್ನು ಕಾಯ್ದುಕೊಳ್ಳಬೇಕಾಗುತ್ತದೆ.”
 

                                          ಅಧ್ಯಾಯ - ೧

ಸಂಕ್ಷಿಪ್ತ ಶೀರ್ಷಿಕೆ ಮತ್ತು ಉಪಕ್ರಮ :

೧) ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆ ೧೯೯೯ ಎಂತಲೂ ಇದನ್ನು ಕರೆಯಬಹುದಾಗಿದೆ.
೨) ೨೦೦೦, ಅಕ್ಟೋಬರ್ ೪ರಂದು ಈ ಕಾಯಿದೆಯ ಅನುಷ್ಠಾನಕ್ಕೆ ಅನುಮೋದನೆ ದೊರೆಯಿತು.

೧. ವ್ಯಾಖ್ಯಾನ : ಈ ಕಾಯ್ದೆಯ ಪರಿಮಿತಿ ಹಾಗೂ ಅಗತ್ಯಗಳು
ಎ. ’ನಿರ್ಮಾಣ ಕಾಮಗಾರಿ’ ಇದರ ಅರ್ಥ; ನಿರ್ಮಾಣ ಕೈಗೊಳ್ಳುವುದು, ಧ್ವಂಸ ಕಾರ್ಯ, ದುರಸ್ತಿ ಅಥವಾ ಕಟ್ಟಡಗಳ ನವೀಕರಣ, ಅಷ್ಟೇ ಅಲ್ಲ ಸೇತುವೆ ಹಾಗೂ ಸ್ಟೀಲ್‌ನಿಂದ ರಚಿಸುವ ಇತರ ಯಾವುದೇ ನಿರ್ಮಾಣ ಕೂಡ ಇದರ ವ್ಯಾಪ್ತಿಗೆ ಸೇರುತ್ತದೆ.

ಬಿ. ’ಸರಕು’-ಯಂತ್ರೋಪಕರಣ, ಮೋಟಾರು ವಾಹನ, ಸಾಮಗ್ರಿಗಳು, ಪೀಠೋಪಕರಣ, ಸ್ಟೇಶನರಿ ಸಾಮಗ್ರಿಗಳು, ಜವಳಿ ಕಚ್ಚ ಸಾಮಗ್ರಿಗಳು, ಔಷಧಿ, ವೈಜ್ಞಾನಿಕ ಉಪಕರಣಗಳು, ಆಹಾರ ಧಾನ್ಯ ರಾಸಾಯನಿಕ, ಎಣ್ಣೆ ಮತ್ತು ಎಣ್ಣೆಬೀಜ ಅಥವಾ ಬಳಕೆ ಯೋಗ್ಯ ಇತರೆ ಸಾಮಗ್ರಿಗಳೂ, ಸಂಗ್ರಹಣಾ ಬಾಧ್ಯಸ್ತಿಕೆಯಡಿಯ ಬಳಕೆ ಅಥವಾ ವಿತರಣಾ ಯೋಗ್ಯ ಸಾಧನ-ಸಾಮಗ್ರಿಗಳು.

ಸಿ. ‘ಸರ್ಕಾರ’ ಎಂದರೆ ರಾಜ್ಯ ಸರ್ಕಾರ;

ಡಿ. ‘ಸಂಗ್ರಹಣಾ ಬಾಧ್ಯಸ್ತಿಕೆ’-ಅಂದರೆ ಯಾವುದೇ ಸರ್ಕಾರಿ ಇಲಾಖೆ, ರಾಜ್ಯ ಸರ್ಕಾರ ಒಡೆತನದ ಸಂಸ್ಥೆ, ಸ್ಥಳೀಯ ಪ್ರಾಧಿಕಾರ ಅಥವಾ ಮಂಡಳಿ, ಸರ್ಕಾರದ ಯಾವುದೇ ಕಾಯಿದೆಯಡಿ ಅಸ್ಥಿತ್ವಕ್ಕೆ ಬಂದ ಘಟಕ, ಅಥವಾ ನಿಗಮಕ್ಕೆ ಅಧಿಕಾರ.

ಇ. ‘ಸಾರ್ವಜನಿಕ ಸಂಗ್ರಹಣೆ’ ಅಥವಾ ‘ಬಾಧ್ಯಸ್ಥಿಕೆ’:- ಸಂಗ್ರಹಣಾ ಹಕ್ಕು ಬಳಸಿಕೊಂಡು ಸಾಮಗ್ರಿಗಳನ್ನು ಖರೀದಿಸುವುದು, ಸೇವೆ ಪಡೆಯುವುದು ಅಥವಾ ನಿರ್ಮಾಣ ಕಾಮಗಾರಿ ಕೈಗೊಳ್ಳುವುದು.

ಎಫ್. ‘ಸೇವೆ’ - ಸೇವೆ ನೀಡುವುದು, ಕುಂದುಕೊರತೆಗೆ ಸ್ಪಂದಿಸುವುದು, ನೆರವು ನೀಡುವುದು ಅಥವಾ ಸಾರ್ವಜನಿಕ ಕರ್ತವ್ಯ ನಿಭಾಯಿಸುವ ಹಾದಿಯಲ್ಲಿ ಲಾಭ ಮಾಡಿಕೊಡುವುದು. ಇದರಲ್ಲಿ ನಿರ್ಮಾಣ ಕೆಲಸಗಳೂ ಸೇರಿವೆ.

ಜಿ. ‘ನಿರ್ದಿಷ್ಟ ಸರಕು ಅಥವಾ ಸೇವೆಗಳು’ ಅಂದರೆ, ಟೆಂಡರ್‌ನಲ್ಲಿ ನಿರ್ದಿಷ್ಟಪಡಿಸಿರಬಹುದಾದ ಮತ್ತು ಸಂಗ್ರಹಣಾ ಬಾಧ್ಯಸ್ಥಿಕೆಯ ಪ್ರಯುಕ್ತ ಕರೆಯಲಾದ ಟೆಂಡರ್‌ನ ಸ್ವೀಕಾರದಿಂದಾದ ಗುತ್ತಿಗೆಯಲ್ಲಿ ಗುರುತಿಸಲಾದ ಸರಕುಗಳು ಅಥವಾ ಸೇವೆಗಳು.

ಎಚ್. ‘ಟೆಂಡರ್’- ಸಾಮಗ್ರಿ ಪೂರೈಸಲು ಅಥವಾ ಸೇವೆ ನೀಡಲು ಅಧಿಕೃತ ಆಹ್ವಾನ. ಟೆಂಡರ್ ಬುಲೇಟಿನ್ ಮೂಲಕ ಆ ಕುರಿತು ಪ್ರಕಟನೆ ಹೊರಡಿಸಬೇಕಾಗುತ್ತದೆ.

ಐ. ‘ಟೆಂಡರ್ ಸಮ್ಮತಿಸುವ ಪ್ರಾಧಿಕಾರ’- ಇದು ಟೆಂಡರ್‌ಗಳನ್ನು ಸಮ್ಮತಿಸುವ ಒಂದು ಕಚೇರಿ ಅಥವಾ ಸಮಿತಿ. ‘ಟೆಂಡರ್ ಆಹ್ವಾನಿಸುವ ಪ್ರಾಧಿಕಾರ’ ಎಂದರೆ, ಒಂದು ಕಚೇರಿ ಅಥವಾ ಟೆಂಡರ್‌ಗಳನ್ನು ಆಹ್ವಾನಿಸಲು ರಚಿಸಿದ ಒಂದು ಸಮಿತಿ. ಪರಿಚ್ಛೇದ ೯ರ ಅಡಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ.

e. ‘ಟೆಂಡರ್ ಬುಲೇಟಿನ್’- ಟೆಂಡರ್‌ಗಳನ್ನು ಆಹ್ವಾನಿಸುವ ಮತ್ತು ಸಮ್ಮತಿಸುವ ಪ್ರಕ್ರಿಯೆಯ ದಿಸೆಯಲ್ಲಿ ಹೊರಡಿಸುವ ಪ್ರಕಟಣೆ. ಆಹ್ವಾನದ ವಿವರಗಳನ್ನು ಈ ಪ್ರಕಟಣೆ ಒಳಗೊಂಡಿರಬೇಕು. ಇಡೀ ರಾಜ್ಯ ಅಥವಾ ಜಿಲ್ಲೆ ಅಥವಾ ಯಾವುದಾದರೂ ಒಂದು ಪ್ರದೇಶಕ್ಕೆ ಪ್ರಕಟಣೆ ಸೀಮಿತವಾಗಿರಬಹುದು.

ಕೆ. ‘ಟೆಂಡರ್ ಬುಲೇಟಿನ್ ಅಧಿಕಾರಿ’- ಪರಿಚ್ಛೇದ ೭ರಲ್ಲಿ ಪ್ರಸ್ತಾಪಿಸಿದ ಪ್ರಕಾರ ಈತ ರಾಜ್ಯ ಟೆಂಡರ್ ಬುಲೇಟಿನ್ ಅಧಿಕಾರಿ ಅಥವಾ ಬರೀ ಟೆಂಡರ್ ಬುಲೇಟಿನ್ ಅಧಿಕಾರಿ.
ಎಲ್. ‘ಟೆಂಡರ್ ದಸ್ತವೇಜು’- ಕಾಮಗಾರಿಗಳ ವೇಳಾಪಟ್ಟಿ, ಕಾಲಕ್ರಮದ ಪ್ರಗತಿ ವಿವರ, ಬೇಕಾಗುವ ಸಾಮಗ್ರಿಗಳು, ಸೇವೆಗಳು, ತಾಂತ್ರಿಕ ಅಗತ್ಯ, ಪ್ರಾತಿನಿಧಿಕತ್ವದ ಮಾನದಂಡ ಹಾಗೂ ಇತರೆ ಇಂತಹ ವಿವರಗಳ ಕಾಗದಪತ್ರ.

೩. ಕೆಲವು ಯೋಜನೆಗಳಿಗೆ ಅನ್ವಯವಾಗದ ಅವಕಾಶ: ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಹಣದ ನೆರವು ಪಡೆದ ಯೋಜನೆ ಅಥವಾ ಅಂತಾರಾಷ್ಟ್ರೀಯ ಒಪ್ಪಂದಗಳ ಅಡಿಯಲ್ಲಿ ಸಾಗುವ ಯೋಜನೆಗಳಿಗೆ ಈ ಕಾಯಿದೆಯ ಯಾವುದೇ ನಿಯಮಾವಳಿ ಅನ್ವಯ ಆಗುವುದಿಲ್ಲ.

೪. ಅನ್ವಯಸಾಧ್ಯತೆಯಿಂದ ಹೊರತಾದುದು: ಸರಕು ಮತ್ತು ಸೇವೆ ಪಡೆಯುವ ವಿಷಯದಲ್ಲಿ ಚಾಪ್ಟರ್-೨ನ್ನು ಅನ್ವಯಿಸಲಾಗದು. ಅಂತಹ ಸಂದರ್ಭಗಳು:

ಎ) ನೈಸರ್ಗಿಕ ವಿಕೋಪ ಸಂಭವಿಸಿದಾಗ ಅಥವಾ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿದಾಗ;

ಬಿ) ಒಂದೇ ಮೂಲದಿಂದ ಸರಕು ಮತ್ತು ಸೇವೆಗಳು ಲಭ್ಯವಾಗುವ ಸಂದರ್ಭ; ಸರಕು-ಸೇವೆ ಒದಗಿಸುವ ದಿಸೆಯಲ್ಲಿ ಗುತ್ತಿಗೆದಾರ ವಿಶೇಷ ಹಕ್ಕು ಸಂಪಾದಿಸಿದ್ದರೆ; ಈ ಎಲ್ಲ ಸೇವೆ ಒದಗಿಸಲು ಸಮಂಜಸ ಪರ್ಯಾಯ ಇಲ್ಲದಿದ್ದಾಗ. ಏಕಮೂಲ ಹೊರತಾದ ಪರ್ಯಾಯ ಇಲ್ಲ ಎನ್ನುವುದನ್ನು ಪರೀಕ್ಷಿಸಿ ದೃಢೀಕರಿಸಲು ಮೂವರು ತಜ್ಞರ ಸಮಿತಿ ಇರುತ್ತದೆ. ಈ ಸಮಿತಿಯ ಸದಸ್ಯರ ಪೈಕಿ ಸಂಗ್ರಹಣಾ ವಿಷಯದಲ್ಲಿ ತಾಂತ್ರಿಕ ಪರಿಣತಿಯ ಓರ್ವ ಪ್ರತಿನಿಧಿ. ಇಂತಹದ್ದೇ ಪರಿಣಿತಿ ಉಳ್ಳ ಸರ್ಕಾರದ ಪ್ರತಿನಿಧಿ ಮತ್ತು ಖ್ಯಾತ ಶೈಕ್ಷಣಿಕ ಅಥವಾ ಸಂಶೋಧನಾ ಸಂಸ್ಥೆಯ ಪ್ರತಿನಿಧಿ ಇರಬೇಕು. ಇವರು ಒಮ್ಮತದಿಂದ ಅಂತಹ ದೃಢೀಕರಣ ನೀಡಬೇಕಾಗುತ್ತದೆ;

ಸಿ) ಸ್ವಾಯತ್ತ ಅಧಿಕಾರ ಉಳ್ಳ ಸಂಸ್ಥೆ ಒಂದು ಬಾರಿ ಒಬ್ಬ ಗುತ್ತಿಗೆದಾರ ಅಥವಾ ಪೂರೈಕೆದಾರನಿಂದ ಸರಕು ಸೇವೆ ಪಡೆದರೆ ಹೆಚ್ಚುವರಿ ಸೇವೆ ಬೇಕಾದಾಗ ಪುನಃ ಅದೇ ಮೂಲದಿಂದ ಪಡೆಯಬೇಕು. ವಸ್ತುವಿನ ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆ ದೃಷ್ಟಿಯಿಂದ ಇದು ಅಗತ್ಯ;

ಡಿ) ಸರ್ಕಾರಿ ಇಲಾಖೆಗಳು, ಸಾರ್ವಜನಿಕ ಒಡೆತನದ ಸಂಸ್ಥೆಗಳು, ಶಾಸನಬದ್ಧ ಮಂಡಳಿಗಳು ಹಾಗೂ ಅಂತಹ ಇತರೆ ಸರ್ಕಾರಿ ಸಂಸ್ಥೆಗಳಿಂದ ಸರಕು ಸೇವೆ ಪಡೆಯುವಾಗ ಕಾಲಮಿತಿ ಮೀರುವಂತಿಲ್ಲ. ಸೇವಾ ಘೋಷಣೆ ಹೊರಬಿದ್ದ ದಿನದಿಂದ ಎರಡು ವರ್ಷದೊಳಗೆ ಅದನ್ನು ಪಡೆಯಬೇಕು.

ಇ) [ಸರ್ಕಾರಿ ಇಲಾಖೆಗಳು, ರಾಜ್ಯ ಸರ್ಕಾರಿ ಒಡೆತನದ ಸಂಸ್ಥೆಗಳು, ಇತರೆ ಯಾವುದೇ ಮಂಡಳಿ, ಕರ್ನಾಟಕದ ಪಂಚಾಯತ್ ರಾಜ್ಯ ಕಾಯಿದೆ, ೧೯೯೩ರ ಅಡಿಯಲ್ಲಿ ರಚಿತವಾದ ಜಿಲ್ಲಾ ಪಂಚಾಯಿತಿಗಳ, ಅಥವಾ ಸರ್ಕಾರಿ ನಿಯಂತ್ರಣದ ಅಥವಾ ಒಡೆತನ ಅಥವಾ ಯಾವುದೇ ಶಾಸನಬದ್ಧ ಸಂಸ್ಥೆ ಅಥವಾ ಕಾರ್ಪೊರೇಷನ್, ಅಥವಾ ಮುನಿಸಿಪಲ್ ಕಾರ್ಪೊರೇಷನ್ ಕಾಯಿದೆ, ೧೯೭೬ರ ಅಡಿಯಲ್ಲಿ ಸ್ಥಾಪನೆಯಾದ ಸಿಟಿ ಮುನ್ಸಿಪಲ್ ಕಾರ್ಪೊರೇಷನ್‌ಗಳು, ಅಥವಾ ೧೯೬೪ರ ಕರ್ನಾಟಕ ಮುನ್ಸಿಪಾಲಟಿಗಳ ಕಾಯಿದೆ ಅಡಿ ಅನುಷ್ಠಾನಕ್ಕೆ ಬಂದ ಸಿಟಿ ಮುನ್ಸಿಪಲ್ ಕೌನ್ಸಿಲ್‌ಗಳು, ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಕಾಯಿದೆ, ೧೯೯೩ರ ಅಡಿಯಲ್ಲಿ ಅಸ್ತಿತ್ವಕ್ಕೆ ಬಂದ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಅಥವಾ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಕಾಯಿದೆ, ೧೯೯೧ರಡಿಯಲ್ಲಿ ರಚನೆಯಾದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಥವಾ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾಯಿದೆ, ೧೯೯೪ರಡಿ ರಚಿತವಾದ ಬಯಲುಸೀಮೆ ಅಭಿವೃದ್ಧಿ ಮಂಡಳಿ, ಇವುಗಳಿಂದ ಸಂಗ್ರಹಣೆ ನಡೆಸಬೇಕಾಗಿ ಬಂದಾಗ-

(೧) ನಿರ್ಮಾಣ ಕಾಮಗಾರಿಗಳಾಗಿದ್ದ ಪಕ್ಷದಲ್ಲಿ ಅದರ ಒಟ್ಟು ಮೌಲ್ಯ ಐದು ಲಕ್ಷ ರೂ. ಮೀರಬಾರದು;
(೨) ನಿರ್ಮಾಣ ಕಾಮಗಾರಿ ಹೊರತಾದ ಸರಕು-ಸೇವೆಯಾಗಿದ್ದರೆ ಅದರ ಮೊತ್ತ ಒಂದು ಲಕ್ಷ ರೂ. ದಾಟಬಾರದು.

(ಇಇ) ಕರ್ನಾಟಕ ಪಂಚಾಯತ್ ರಾಜ್ಯ ಕಾಯಿದೆ, ೧೯೯೩ರಡಿ ರಚಿತವಾದ ಗ್ರಾಮಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅಥವಾ ಕರ್ನಾಟಕ ಮುನ್ಸಿಪಾಲಿಟಿಗಳ ಕಾಯಿದೆ, ೧೯೬೪ರಡಿ ರಚನೆಯಾದ ಪುರಸಭೆ ಅಥವಾ ಪಟ್ಟಣ ಪಂಚಾಯಿತಿಗಳು, ಅಥವಾ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯಿದೆ, ೧೯೮೭ರ ಅಡಿಯಲ್ಲಿ ರಚನೆಯಾದ ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಸರಕು-ಸೇವೆ ಸಂಗ್ರಹಣೆ ಪಡೆಯುವುದಾದರೆ-

(೧) ನೀರು ಸರಬರಾಜು ಅಥವಾ ಶಾಲಾ ಕೊಠಡಿಗಳ ನಿರ್ಮಾಣದಂತಹ ಕಾಮಗಾರಿಗಳ ಮೊತ್ತ ಎರಡು ಲಕ್ಷ ರೂ. ಮೀರಬಾರದು; ಮತ್ತು

(೨) ಇತರೆ ಉದ್ದೇಶಗಳಿಗಾದರೆ ಅದರ ಮೊತ್ತ ಒಂದು ಲಕ್ಷ ರೂ. ಮೀರಬಾರದು.

ಎಫ್) ಜಿಲ್ಲಾ ಸರಬರಾಜು ಮತ್ತು ವಿಲೇವಾರಿ ನಿರ್ದೇಶನಾಲಯ ಅಥವಾ ರಾಜ್ಯ ಖರೀದಿ ಉಗ್ರಣಾಲಯಗಳ ಇಲಾಖೆಯಿಂದ ದರ ಗುತ್ತಿಗೆಗಳ ಒಪ್ಪಂದದಡಿ ಸರಕು ಅಥವಾ ಸೇವೆ ಸಂಗ್ರಹಣೆ ಪಡೆಯುವುದಾದರೆ; ಮತ್ತು

ಜಿ) ಆ ಬಗ್ಗೆ ಸರ್ಕಾರದಿಂದ ಕಾಲಕಾಲಕ್ಕೆ ದೃಢೀಕರಣ ಅಗತ್ಯ ಎನ್ನಿಸಬಹುದು.

ಹೆಚ್) ನೂಲಿನ ಗಿರಣಿಗಳು ಹತ್ತಿ ಖರೀದಿಸುವಾಗ, ಕರ್ನಾಟಕ ಕೃಷಿ-ಕೈಗಾರಿಕೆಗಳ ನಿಗಮ ಅಥವಾ ಕರ್ನಾಟಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಒಕ್ಕೂಟವು ಎಣ್ಣೆ ಬೀಜ ಖರೀದಿಸುವಾಗ, ಸಕ್ಕರೆ ಕಾರ್ಖಾನೆಗಳು ಕಬ್ಬನ್ನು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ನೇರ ಭತ್ತ ಖರೀದಿಸುವಾಗ, ಕರ್ನಾಟಕ ಕೈಮಗ್ಗ ನಿಗಮವು ಬಟ್ಟೆಯನ್ನು, ಕರ್ನಾಟಕ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟವು ಹಾಲನ್ನು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮತ್ತು ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಒಕ್ಕೂಟವು ತಾಳೆ ಎಣ್ಣೆಯನ್ನು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು ಬಟ್ಟೆ ಖರೀದಿಸುವಾಗ ಮತ್ತು ಈ ರೀತಿಯ ಸಂಸ್ಥೆಗಳ ಇತರೆ ಯಾವುದಾದರೂ ಸರಕು ಸಾಧನವನ್ನು ನೇರ ಖರೀದಿಸುವಾಗ ಆ ಬಗ್ಗೆ ಸರ್ಕಾರ ಕಾಲಕಾಲಕ್ಕೆ ಪ್ರಕಟಣೆ ಹೊರಡಿಸಬೇಕಾಗಬಹುದು.

                                                     ಅಧ್ಯಾಯ -II

                                                  ಸಂಗ್ರಹಣೆ ನಿಯಮಾವಳಿ

೫. ಟೆಂಡರ್ ಘೋಷಣೆ ಇಲ್ಲದಿದ್ದರೆ ಸಂಗ್ರಹಣೆ ನಿಷಿದ್ಧ: ಈ ಕಾಯಿದೆ ಘೋಷಣೆಯಾದ ದಿನದಿಂದ ಇಂತಹ ಒಂದು ವ್ಯವಸ್ಥೆ ಅನುಷ್ಠಾನಗೊಂಡಿದೆ. ಟೆಂಡರ್ ಕರೆಯದೇ ಯಾವುದೇ ರೀತಿಯ ಸರಕು ಅಥವಾ ಸೇವೆ ಪಡೆಯುವ ಸಂಗ್ರಹಣೆ ಅಕ್ರಮ.

೬. ಸಂಗ್ರಹಣೆ ಬಾಧ್ಯಸ್ತದಾರರು ಅನುಸರಿಸಬೇಕಾದ ನಿಯಮಗಳು: ಈ ಕಾಯಿದೆ ಅನುಷ್ಠಾನ ದಿನದಿಂದ, ಸಂಗ್ರಹಣೆ ಪ್ರಕ್ರಿಯೆ ವೇಳೆ ಇದರ ನಿಯಮಾವಳಿ ಪರಿಪಾಲನೆ ಕಡ್ಡಾಯ. ನಿಯಮ ಪರಿಪಾಲನೆಯಾಗದಿದ್ದರೆ ಯಾವುದೇ ಟೆಂಡರ್ ಕರೆಯುವಂತಿಲ್ಲ, ಪರಿಶೀಲನೆ ಅಥವಾ ಅಂಗೀಕಾರ ಪ್ರಕ್ರಿಯೆ ನಡೆಸುವಂತಿಲ್ಲ. ಅನುಸರಿಸಬೇಕಾದ ಕಾಯಿದೆ ನಿಯಮಗಳು ಈ ಕೆಳಗಿನಂತಿವೆ:

೭. ಟೆಂಡರ್ ಬುಲೆಟಿನ್ ಅಧಿಕಾರಿಗಳು (೧) ಅಧಿಸೂಚನೆ ಮೂಲಕ ಸರ್ಕಾರ ಒಬ್ಬ ಅಧಿಕಾರಿಯನ್ನು ನೇಮಿಸಿಕೊಳ್ಳಬಹುದು. ಅವರ ಸ್ಥಾನಮಾನ ಯಾವುದೇ ಉಪಕಾರ್ಯದರ್ಶಿಗಿಂತ ಕಡಿಮೆ ಇರಬಾರದು. ರಾಜ್ಯ ಟೆಂಡರ್ ಬುಲೆಟಿನ್ ಅಧಿಕಾರಿಯ ಕಾರ್ಯವ್ಯಾಪ್ತಿ ಒಂದಕ್ಕಿಂತ ಹೆಚ್ಚು ಜಿಲ್ಲೆಗಳನ್ನು ಹೊಂದಿರಬೇಕು. (೨) ಜಿಲ್ಲಾ ಉಪ ಆಯುಕ್ತರೂ ಕೂಡ ಜಿಲ್ಲಾ ಬುಲೇಟಿನ್ ಅಧಿಕಾರಿಯನ್ನಾಗಿ ನೇಮಿಸಬಹುದು.
೮. ಟೆಂಡರ್ ಬುಲೆಟಿನ್ ಪ್ರಕಟಣೆ: (೧) ಟೆಂಡರ್ ಆಹ್ವಾನಿಸುವ ಪ್ರಾಧಿಕಾರ ಹೊರಡಿಸುವ ಟೆಂಡರ್ ಆಹ್ವಾನ ಸೂಚನೆ ಬಗ್ಗೆ ಅಥವಾ ಪರಿಚ್ಛೇದ ೧೩ರಡಿ ಟೆಂಡರ್ ಸಮಿತಿ ಹಾಗೂ ಪರಿಚ್ಛೇದ ೧೪ರಡಿ ನಡೆಯುವ ಟೆಂಡರ್ ನಿರಾಕರಣೆ ಪ್ರಕ್ರಿಯೆ ಬಗ್ಗೆ ರಾಜ್ಯ ಟೆಂಡರ್ ಬುಲೇಟಿನ್ ಅಧಿಕಾರಿ ಅಥವಾ ಜಿಲ್ಲಾ ಟೆಂಡರ್ ಬುಲೇಟಿನ್ ಅಧಿಕಾರಿ ಕೂಡ ಸಮಗ್ರ ಮಾಹಿತಿ ಹೊಂದಿರಬೇಕಾದದ್ದು ಅಗತ್ಯ. ನಿಗದಿತ ಕಾಲಮಿತಿಯೊಳಗೆ ರಾಜ್ಯ ಟೆಂಡರ್ ಬುಲೆಟಿನ್ ಅಥವಾ ಜಿಲ್ಲಾ ಟೆಂಡರ್ ಬುಲೆಟಿನ್ ಪ್ರಕಟಗೊಳ್ಳುವಂತೆ ನೋಡಿಕೊಳ್ಳಬೇಕು.

(೨) ಪ್ರಕಟಿತ ಟೆಂಡರ್ ಬುಲೆಟಿನ್ ಪ್ರತಿಗಳು ಟೆಂಡರ್ ಬುಲೇಟಿನ್ ಅಧಿಕಾರಿ ಕಚೇರಿಯಲ್ಲಿ ಮಾರಾಟಕ್ಕೆ ಲಭ್ಯ ಇರಬೇಕು. ಅಷ್ಟೆ ಅಲ್ಲ ಅಂತಹ ಇತರೆ ಸ್ಥಳಗಳಲ್ಲಿಯೂ ಪ್ರತಿಗಳು ಲಭಿಸುವಂತೆ ನೋಡಿಕೊಳ್ಳಬೇಕು.

೯. ಟೆಂಡರ್ ಆಹ್ವಾನ ಪ್ರಾಧಿಕಾರ ಮತ್ತು ಟೆಂಡರ್ ಸ್ವೀಕಾರ ಪ್ರಾಧಿಕಾರ:
(೧) ಆದೇಶ ಅಥವಾ ನೇಮಕಾತಿ ಮೂಲಕ ಸಂಗ್ರಹಣೆ

(i) ಒಬ್ಬ ಅಥವಾ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು ಅಥವಾ ಅಧಿಕಾರಿಗಳ ಸಮಿತಿಯು ಟೆಂಡರ್ ಆಹ್ವಾನ ಪ್ರಾಧಿಕಾರ ಎನಿಸಿಕೊಳ್ಳಬಲ್ಲದು. ಇದು ಒಂದು ನಿರ್ದಿಷ್ಟ ಪ್ರದೇಶ, ಅಥವಾ ನಿರ್ದಿಷ್ಟ ಸಂಗ್ರಹಣಾ ಅಥವಾ ನಿರ್ದಿಷ್ಟ ವರ್ಗದ ಸರಕು-ಸೇವೆಗಳಿಗೆ ಈ ಪ್ರಾಧಿಕಾರ ಟೆಂಡರ್ ಆಹ್ವಾನಿಸಬಹುದಾಗಿದೆ.

(ii) ನಿರ್ದಿಷ್ಟ ಪ್ರದೇಶ, ಅಥವಾ ನಿರ್ದಿಷ್ಟ ಸಂಗ್ರಹಣೆ ಅಥವಾ ನಿರ್ದಿಷ್ಟ ವರ್ಗದ ಸರಕು-ಸೇವೆಗಳಿಗಾಗಿ ಒಬ್ಬ ಅಥವಾ ಅದಕ್ಕೂ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು ಅಥವಾ ಅಧಿಕಾರಿಗಳ ಸಮಿತಿಯು ಟೆಂಡರ್ ಸಮ್ಮತಿಸುವ ಅಧಿಕಾರ ಹೊಂದಬಹುದಾಗಿದೆ.
ಬಹು ಸದಸ್ಯ ಸಮಿತಿಯು ಟೆಂಡರ್ ಸ್ವೀಕಾರ ಪ್ರಕ್ರಿಯೆ ನಿರ್ವಹಿಸಲು ಸಂಗ್ರಹಣಾಧಿಕಾರ ಸಮಿತಿಯನ್ನು ನೇಮಿಸಿದ್ದರೆ ಈ ಕಾಯ್ದೆ ಅಡಿಯಲ್ಲಿ ಅದಕ್ಕೆ ಟೆಂಡರ್ ಸಮ್ಮತಿ ಅಧಿಕಾರ ಪ್ರಾಪ್ತವಾಗಿರುತ್ತದೆ.

೧೦. ಟೆಂಡರ್ ಪರಿಷ್ಕರಣಾ ಸಮಿತಿ: ಟೆಂಡರ್ ಪರಿಷ್ಕರಣೆ ಜವಾಬ್ದಾರಿ ನಿರ್ವಹಿಸಲು ಸಮರ್ಥ ಸದಸ್ಯರ ಸಮಿತಿಯೊಂದನ್ನು ಟೆಂಡರ್ ಸ್ವೀಕಾರ ಸಮಿತಿ ರಚಿಸಬಹುದಾಗಿದೆ. ಆದರೆ, ಸಾರ್ವಜನಿಕ ಕಾಮಗಾರಿಗಳು, ನೀರಾವರಿ ಮತ್ತು ಸಣ್ಣ ನೀರಾವರಿ ಇಲಾಖೆಗಳಿಂದ ಬರುವ ೫ ಕೋಟಿ ರೂ. ಅಥವಾ ಅದಕ್ಕೂ ಹೆಚ್ಚಿನ ಮೊತ್ತದ ಟೆಂಡರ್‌ಗಳನ್ನು ಸಮರ್ಥ ರೀತಿಯಲ್ಲಿ ಪರಿಷ್ಕರಿಸುವ ಸಾಮರ್ಥ್ಯ ಅಂತಹ ಸಮಿತಿಗೆ ಇರಬೇಕು.

೧೧. ಟೆಂಡರ್‌ಗಳ ತೆರೆಯುವುದು: (೧) ಟೆಂಡರ್ ಆಹ್ವಾನ ಪ್ರಾಧಿಕಾರ ಅಥವಾ ಟೆಂಡರ್ ಸ್ವೀಕಾರ ಪ್ರಾಧಿಕಾರ ಅಥವಾ ಇತರೆ ಯಾವುದೇ ಅಧಿಕಾರಿ ಟೆಂಡರ್ ತೆರೆಯುವ ಅಧಿಕಾರವನ್ನು ಹೊಂದಿರುತ್ತಾನೆ.

(೨) ಸಬ್-ಸೆಕ್ಷನ್(೧)ರಲ್ಲಿ ಪ್ರಸ್ತಾಪಿಸಿದ ಪ್ರಕಾರ ಪ್ರಾಧಿಕಾರ ಅಥವಾ ಅಧಿಕಾರಿಯು ಟೆಂಡರ್ ತೆರೆಯಬಹುದಾಗಿದೆ. ಆ ಮೂಲಕ ಟೆಂಡರ್‌ಗೆ ಸ್ಪಂದಿಸಿದವರ ಪಟ್ಟಿ ಬಹಿರಂಗಪಡಿಸಬೇಕು. ಇಲ್ಲವಾದರೆ ಟೆಂಡರ್ ಸಲ್ಲಿಸಿದವರ ಪಟ್ಟಿ ಸಹಿತ ಅದನ್ನು ಟೆಂಡರ್ ಸ್ವೀಕಾರ ಪ್ರಾಧಿಕಾರಕ್ಕೆ ಕಳುಹಿಸಬೇಕು.

೧೨. ಟೆಂಡರ್ ಆಹ್ವಾನ ಪ್ರಾಧಿಕಾದ ಕರ್ತವ್ಯಗಳು:
೧. ಈ ಕೆಳಗೆ ಸೂಚಿಸಿದ ಅಂಶಗಳು ಪ್ರತಿಯೊಂದು ಟೆಂಡರ್ ಆಹ್ವಾನ ಪ್ರಾಧಿಕಾರ ನಿರ್ವಹಿಸಬೇಕಾದ ಕರ್ತವ್ಯ:

(ಎ) ಸೂಚಿಸಿದ ನಿಯಮವಳಿ ಪ್ರಕಾರ, ಸಂಗ್ರಹಣಾ ಕಾಯ್ದೆ ಪರವಾಗಿ ಟೆಂಡರ್ ಸೂಚನೆ ಹೊರಡಿಸಬೇಕಾಗುತ್ತದೆ;
(ಬಿ) ಟೆಂಡರ್ ಪ್ರಕಟಣೆ ಕುರಿತು ಸರಿಯಾದ ಮಾಹಿತಿ ರವಾನೆಯಾಗಬೇಕು. ಟೆಂಡರ್ ನೋಟಿಸ್ ಹೊರಟಿದ್ದ ತಕ್ಷಣ ಆ ಬಗ್ಗೆ ಸಂಬಂಧಪಟ್ಟ ಟೆಂಡರ್ ಬುಲೇಟಿನ್ ಅಧಿಕಾರಿ ಗಮನಕ್ಕೆ ತರಬೇಕು;

(ಸಿ) ಸೂಚಿತ ರೀತಿಯಲ್ಲಿಯೇ ಟೆಂಡರ್ ನೋಟಿಸ್ ಪ್ರಕಟಣೆ ಹೊರಡಿಸಬೇಕು.

(ಡಿ) ಟೆಂಡರ್ ಸಲ್ಲಿಸಲು ಇಚ್ಛಿಸುವ ಪ್ರತಿಯೊಬ್ಬರಿಗೆ ದರಗಳ ಷೆಡ್ಯೂಲ್ ಮತ್ತು ಟೆಂಡರ್ ದಾಖಲಾತಿಗಳನ್ನು ರವಾನಿಸಬೇಕು. ಆದರೆ, ಅಂತಹ ದಾಖಲಾತಿ ಪಡೆಯಬಯಸುವವರು ಅದಕ್ಕಾಗಿ ಅರ್ಜಿ ಸಲ್ಲಿಸಬೇಕು.

(೨) ಈ ಪರಿಚ್ಛೇದದಡಿಯಲ್ಲಿ ಟೆಂಡರ್ ಆಹ್ವಾನ ಪ್ರಾಧಿಕಾರವು ಅಗತ್ಯಾನುಸಾರ ಕಾಲಕಾಲಕ್ಕೆ ನೋಟಿಸ್‌ಗಳನ್ನು, ಮಾಹಿತಿಯನ್ನು ಹಾಗೂ ಪ್ರಕಟಣೆಗಳನ್ನು ಹೊರಡಿಸಲೇಬೇಕಾಗುತ್ತದೆ.

(೩) ಟೆಂಡರ್ ಆಹ್ವಾನ ಪ್ರಾಧಿಕಾರವು ಟೆಂಡರ್ ನೋಟಿಸಿಗೆ ಸ್ಪಂದಿಸಿ ಬರುವ ಎಲ್ಲ ಅಹವಾಲುಗಳನ್ನು ಸಂಗ್ರಹಿಸಬಹುದು. ಆದರೆ, ಅವನ್ನು ತೆರೆಯುವ ಹಾಗಿಲ್ಲ. ಸಂಗ್ರಹಿತ ಅಹವಾಲುಗಳನ್ನು ನಿಗದಿತ ದಿನಾಂಕದೊಳಗೆ ಟೆಂಡರ್ ತೆರೆಯುವ ಅಧಿಕಾರವುಳ್ಳ ಪ್ರಾಧಿಕಾರ ಅಥವಾ ಅಧಿಕಾರಿಗಳಿಗೆ ಕಳುಹಿಸಿಕೊಡಬೇಕು.

೧೩. ಟೆಂಡರ್ ಸ್ವೀಕಾರ: ಟೆಂಡರ್ ಸ್ವೀಕಾರ ಪ್ರಾಧಿಕಾರವು ಈ ಮುಂದೆ ಸೂಚಿಸುವ ನಿಯಮಾವಳಿಗಳನ್ನು ಪಾಲಿಸಬಹುದಾಗಿದೆ; ಟೆಂಡರ್ ಟೆಂಡರ್ ಅಂಗೀಕೃತವಾದ ಬಗ್ಗೆ ಆದೇಶ ಹೊರಡಿಸುವುದು ಹಾಗೂ ಅಂಗೀಕೃತಗೊಂಡಿದ್ದಕ್ಕೆ ಸಂಬಂಧಿಸಿದಂತೆ ತುಲನಾತ್ಮಕ ವಿಶ್ಲೇಷಣೆ ಮತ್ತು ಅಂಗೀಕೃತಗೊಂಡಿದ್ದಕ್ಕೆ ಕಾರಣಗಳನ್ನು ಪಟ್ಟಿ ಮಾಡಿ ಟೆಂಡರ್ ಬುಲೇಟಿನ್ ಅಧಿಕಾರಿ ಹಾಗೂ ಇದಕ್ಕೆ ಸಂಬಂಧಿತ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು;

ಟೆಂಡರ್ ಸ್ವೀಕಾರ ಪ್ರಾಧಿಕಾರ ಏಕ ಅಧಿಕಾರಿಯನ್ನು ಒಳಗೊಂಡಿದ್ದು ಆ ಅಧಿಕಾರಿ ಮುಂದಿನ ಆರು ತಿಂಗಳಲ್ಲಿ ನಿವೃತ್ತಿಗೊಳ್ಳುವಂತಿದ್ದರೆ, ಅಂತಹ ಸಂದರ್ಭದಲ್ಲಿ ಟೆಂಡರ್‌ನ್ನು ಸ್ವೀಕರಿಸಬೇಕಾದರೆ ಅದಕ್ಕೆ ಪೂರ್ವ ಸಂಗ್ರಹಣಾ ಬಾಧ್ಯಸ್ತದಾರರ ಅನುಮತಿ ಪಡೆಯುವುದು ಕಡ್ಡಾಯ; ಮುಂದುವರಿದು ಸರ್ಕಾರ ಕಾಲಕಾಲಕ್ಕೆ ಇಂತಹ ಸಾಮಾನ್ಯ ಅಥವಾ ವಿಶೇಷ ಆದೇಶವನ್ನು ಹೊರಡಿಸುತ್ತಲೇ ಇರಬೇಕು, ಟೆಂಡರ್ ಸ್ವೀಕಾರ ಪ್ರಾಧಿಕಾರವು ಒಪ್ಪಿಗೆ ಸೂಚಿಸುವ ಮುನ್ನ ಅತಿ ಕಡಿಮೆ ಟೆಂಡರ್ ಬಿಡ್ ಮಾಡಿದವರ ಜೊತೆ ಸಮಾಲೋಚನೆ ನಡೆಸಬೇಕು.

ಟಿಪ್ಪಣಿಗಳು:

ಟೆಂಡರ್ ಸ್ವೀಕಾರ ಅಥವಾ ನಿರಾಕರಣೆ ವಿಷಯದಲ್ಲಿ ಸರ್ಕಾರ ಸ್ವೇಚ್ಛೆಯಿಂದ ವರ್ತಿಸುವಂತಿಲ್ಲ. ಕಸ್ತೂರಿ ವರ್ಸಸ್ ಜೆ.ಆಂಡ್ ಕೆ., ಮತ್ತು ರಮಣ್ ವರ್ಸಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ. ಎಐಆರ್ ೧೯೭೮ ಎಸ್‌ಸಿ ೧೯೯೨ ಎಸ್‌ಸಿ ೧೬೨೮ ಸಂಬಂಧಿಸಿದ ಪ್ರಕರಣಗಳಲ್ಲಿ ಹೊರ ಬಿದ್ದ ಕೋರ್ಟ್ ತೀರ್ಪುಗಳು,ಸರ್ಕಾರ ನಡೆದುಕೊಳ್ಳಬೇಕಾದ ಶಿಸ್ತಿನ ಹಾದಿ ಯಾವುದೆಂದು ತೋರಿಸಿಕೊಟ್ಟಿವೆ.

ದರಗಳು ಸರ್ಕಾರದಿಂದ ನಿಗದಿಯಾಗಬೇಕು. ಆದರೆ, ಏಕಾಂಗಿಯಾಗಿ ಹಾಗೂ ಪದೇಪದೇ ಪರಿಷ್ಕರಣೆ ಮಾಡುವಂತಿಲ್ಲ. ಜಿ.ಎಸ್.ಫೆರ್ನಾಂಡಿಸ್ ವರ್ಸಸ್ ಕರ್ನಾಟಕ ಸರ್ಕಾರ, ಎಪಿಆರ್ ೧೯೯೦ ಎಸ್‌ಸಿ ೯೫೮ ಪ್ರಕರಣದಲ್ಲಿ ಪ್ರಕಟಗೊಂಡ ನ್ಯಾಯಾಲಯದ ತೀರ್ಪು ಅಂತಹುದೊಂದು ಶಿಸ್ತಿನ ಕಟ್ಟಳೆ ಹಾಕಿದೆ.

ಟೆಂಡರ್ ನೋಟಿಸ್, ಕಾಮಗಾರಿ ಕುರಿತು ಗುತ್ತಿಗೆದಾರರಿಗೆ ನೀಡುವ ಒಂದು ಆಹ್ವಾನ ಅಷ್ಟೇ. ಇದು ಹೊರತಾಗಿಯೂ ಗುತ್ತಿಗೆದಾರನಿಂದ ಬರುವ ಯಾವುದೇ ಪ್ರಸ್ತಾಪ ಒಪ್ಪಿಕೊಳ್ಳಬೇಕೆಂದಿಲ್ಲ. ಎನ್.ಪಿ.ಸಿಂಗ್‌ವರ್ಸಸ್ ಅರಣ್ಯಾಧಿಕಾರಿ, ಏಐಆರ್ ೧೯೬೨ ಮಣಿ ಪ್ರಕರಣದಲ್ಲಿನ ತೀರ್ಪು ಇದನ್ನು ಸ್ಪಷ್ಟಪಡಿಸಿದೆ.

ಟೆಂಡರ್ ಎಂದರೆ ಆಹ್ವಾನ. ಇದು ನಿರ್ದಿಷ್ಟ ಕಾಮಗಾರಿ ಗುತ್ತಿಗೆ ಬಿಡ್ ಒಪ್ಪಿಕೊಳ್ಳುವ ದಿಸೆಯಲ್ಲಿನ ಒಂದು ಆಹ್ವಾನ ಹಾಗೂ ಕೆಲವೊಂದಿಷ್ಟು ಮಾಹಿತಿಯನ್ನು ಒದಗಿಸುವಂತಹದ್ದಾಗಿದೆ. ಸಮರ್ಪಕ ಟೆಂಡರ್ ಈ ಮುಂದಿನ ಅಂಶಗಳನ್ನು ಒಳಗೊಂಡಿರಬೇಕು; ೧. ಅದು ಷರತ್ತು ರಹಿತವಾಗಿರಬೇಕು. ೨. ಸೂಕ್ರ ಸ್ಥಳದಲ್ಲಿ ಅದನ್ನು ರೂಪಿಸಬೇಕು. ೩. ಹೊಣೆಗಾರಿಕೆಯ ನಿಯಮಾವಳಿಗಳು ಸ್ಪಷ್ಟವಾಗಿರಬೇಕು. ೪. ಸೂಕ್ತ ಸಮಯದಲ್ಲಿ ಅದನ್ನು ರೂಪಿಸಬೇಕು. ೫. ಸೂಕ್ತ ಸ್ವರೂಪದಲ್ಲಿ ಅದನ್ನು ಸಿದ್ಧಪಡಿಸಬೇಕು. ೬. ಟೆಂಡರ್ ಗಿಟ್ಟಿಸಿಕೊಳ್ಳುವ ವ್ಯಕ್ತಿ ಹೊಣೆಗಾರಿಕೆ ನಿರ್ವಹಿಸುವ ಸಾಮರ್ಥ್ಯ ಇರುವವನಾಗಿರಬೇಕು. ೭. ತಪಾಸಣೆಗೆ ಸೂಕ್ತ ಅವಕಾಶ ಇರಬೇಕು. ೮. ಅದಕ್ಕೆ ಸೂಕ್ತ ವ್ಯಕ್ತಿಯನ್ನು ನಿಯೋಜಿಸಬೇಕು. ಈ ಅಂಶಗಳು ಸೆಲ್ಲರ್ ವರ್ಸಸ್ ಭಾರತ ಸರ್ಕಾರ, ಏಐಆರ್ ೧೯೯೬ ಎಸ್‌ಸಿ II ಪ್ರಕರಣದಲ್ಲಿ ಸ್ಪಷ್ಟಗೊಂಡಿದೆ.

೧೪. ಟೆಂಡರ್‌ನ ಸಾಮಾನ್ಯ ತಿರಸ್ಕಾರ:

(೧) ಸೆಕ್ಷನ್ ೧೩ರಡಿಯಲ್ಲಿ ಟೆಂಡರ್ ಸ್ವೀಕರಿಸುವ ಪೂರ್ವ ಯಾವುದೇ ಘಳಿಗೆ ಅದನ್ನು ತಿರಸ್ಕರಿಸಲೂಬಹುದು. ಸಂಗ್ರಹ ಸಾಧ್ಯತೆಗಳು ಬದಲಾದ ಸಂದರ್ಭ, ಮುಂಗಡ ಹಣ ಸಲ್ಲಿಕೆಯಲ್ಲಿ ವಿಫಲವಾದ ಪಕ್ಷ, ಅಪಗಾತ, ನೈಸರ್ಗಿಕ ವಿಕೋಪ ಅಥವಾ ಇಂತಹ ಇತರ ಪ್ರಕರಣಗಳ ಆಧಾರದ ಮೇಲೆ ಟೆಂಡರ್ ರದ್ದು ಮಾಡಬಹುದು. ಅಗತ್ಯ ಸಂದರ್ಭಗಳಲ್ಲಿ ಇದು ನಡೆಯಬೇಕು ಹಾಗೂ ಆ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರದಿ ನೀಡಬೇಕು.

(೨) ಬಳಿಕ ಸಂಗ್ರಹ ಬಾಧ್ಯಸ್ಥ ಸಂಸ್ಥೆ, ಟೆಂಡರ್ ರದ್ದುಪಡಿಸಿದ ಬಗ್ಗೆ ಸಂಬಂಧಿತ ಅರ್ಜಿದಾರರ ಗಮನಕ್ಕೆ ತರುವ ಹೊಣೆ ನಿಭಾಯಿಸಬೇಕು. ಜೊತೆ ಅದೇ ವಿಷಯವನ್ನು ಟೆಂಡರ್ ಬುಲೆಟಿನ್‌ನಲ್ಲಿ ಪ್ರಕಟಿಸಬೇಕು.

೧೫. ಮಾರ್ಗದರ್ಶನಗಳನ್ನು ನೀಡುವ ಅಧಿಕಾರ: ಆದ್ದರಿಂದ ಈ ಹಿನ್ನೆಲೆಯಲ್ಲಿ ಸಂಗ್ರಹಣಾ ಪ್ರಕ್ರಿಯೆಯ ಎಲ್ಲ ಹಂತಗಳಲ್ಲಿಯೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಮತ್ತು ಅದನ್ನು ನಿರ್ವಹಿಸಲು ಈ ಕಾಯ್ದೆಯಡಿಯಲ್ಲಿ ಸೂಕ್ತ ನಿರ್ದೇಶನಗಳನ್ನು ಸಂಗ್ರಹಣೆಯ ಸಂಸ್ಥೆಗಳಿಗೆ ನೀಡಲು ಸರ್ಕಾರ ಸಮರ್ಥವಾಗಿರುತ್ತದೆ ಮತ್ತು ಈ ನಿರ್ದೇಶನಗಳಿಗೆ ಬದ್ಧವಾಗಿರುವುದು ಅಂತಹ ಸಂಗ್ರಹಣಾ ಸಂಸ್ಥೆಗಳ ಅಥವಾ ಪ್ರಾಧಿಕಾರದ ಕರ್ತವ್ಯವಾಗಿರುತ್ತದೆ.

೧೬. ಮನವಿ: ೧) ಸರ್ಕಾರದ ಹೊರತಾಗಿ ಇತರ ಯಾವುದೇ ಟೆಂಡರ್ ಸ್ವಿಕರಣಾ ಪ್ರಾಧಿಕಾರ ಮಂಜೂರು ಮಾಡಿದ ಆದೇಶದಿಂದ ಯಾವುದೇ ಟೆಂಡರ್‌ದಾರ ಅಸಮಾಧಾನಗೊಂಡಲ್ಲಿ ೧೩ನೇ ಪರಿಚೇಧದಡಿಯಲ್ಲಿ ಆದೇಶ ಜಾರಿಯಾದ ೩೦ ದಿನಗಳೊಳಗಾಗಿ ನಿರ್ದಿಷ್ಟ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು. ಆದರೆ ಆ ಪ್ರಾಧಿಕಾರಕ್ಕೆ ೩೦ ದಿನಗಳಿಗೆ ಮೀರದಂತೆ ಸಮಯಾವಕಾಶ ನೀಡುವ ಮತ್ತು ಅರ್ಜಿದಾರನ ಮನವಿಯಲ್ಲಿ ಹುರುಳಿದೆ ಎಂಬುದನ್ನು ನಿರ್ಧರಿಸುವ ಅಧಿಕಾರ ವ್ಯಾಪ್ತಿ ಇರಬೇಕು.

೨) ನಿರ್ದಿಷ್ಟ ಪ್ರಾಧಿಕಾರವು ಎರಡೂ ಕಡೆಯ ಅಹವಾಲುಗಳನ್ನು ಹೇಳಿಕೊಳ್ಳುವ ಅವಕಾಶ ನೀಡಿದ ನಂತರ ಸೂಕ್ತವಾದ ಆದೇಶವೊಂದನ್ನು ನೀಡಿ ಅದೇ ಅಂತಿಮವಾಗಿರುವಂತೆ ನೋಡಿಕೊಳ್ಳಬಹುದು.

೩) ಅರ್ಜಿ ಸಲ್ಲಿಸಿದ ೩೦ ದಿನಗಳೊಳಗಾಗಿ ಸೂಚಿತ ಪ್ರಾಧಿಕಾರವು ಮನವಿಯನ್ನು ಯುಕ್ತ ರೀತಿಯಲ್ಲಿ ಮುನ್ನಡೆಸಬೇಕು ಮತ್ತು ಸಾಧ್ಯವಾದಷ್ಟು ಮಟ್ಟಿಗೆ ಇದನ್ನು ೩೦ ದಿನಗಳೊಳಗಾಗಿಯೇ ನಿರ್ವಹಿಸಬೇಕು.

೧೭. ಮಾಹಿತಿ ಪಡೆಯುವ ಅಧಿಕಾರ: ಈ ಕಾಯ್ದೆಯಲ್ಲಿರುವ ಅಂಶಗಳ ಹೊರತಾಗಿಯೂ ಅಥವಾ ಪ್ರಸ್ತುತ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಹೊರತಾಗಿಯೂ ಸರ್ಕಾರ ಸಂಗ್ರಹಣಾ ಪ್ರಕ್ರಿಯೆಗೆ ಸಂಬಂಧಿಸಿ ಪಾರದರ್ಶಕತೆಯನ್ನು ಸಾಬೀತುಪಡಿಸಲು ಈ ಕಾಯ್ದೆಯಡಿಯಲ್ಲಿ ಯಾವುದೇ ಪ್ರಾಧಿಕಾರದಿಂದ ಯಾವುದೇ ವಿಷಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಪಡೆಯಬಹುದಾಗಿದೆ.

೧೭. ದಾಖಲೆಗಳನ್ನು ಪಡೆಯುವ ಅಧಿಕಾರ: ಸರ್ಕಾರ ಯಾವುದೇ ಸಂದರ್ಭದಲ್ಲಿ, ಸಂಗ್ರಹಣಾ ಪ್ರಕ್ರಿಯೆಯಲ್ಲಿನ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಕಾಯ್ದೆಯಡಿಯಲ್ಲಿ ಯಾವುದೇ ಅಧಿಕಾರಿಯನ್ನು ಭೇಟಿಯಾಗಬಹುದು.

೧) ಆಹ್ವಾನ, ಟೆಂಡರ್‌ಗಳನ್ನು ಸ್ವೀಕರಿಸುವ ಮತ್ತು ಅವುಗಳನ್ನು ವಿಲೇವಾರಿ ಮಾಡುವ ದಾಖಲೆಗಳನ್ನು ಪ್ರಸ್ತುತಪಡಿಸುವಂತೆ

೨) ಟೆಂಡರ್ ದಾಲೆಗಳನ್ನು ಒದಗಿಸಲು, ಅಂದಾಜು, ಲೆಕ್ಕಪತ್ರ. ಪ್ರಕಟಣೆ ಅಥವಾ ಅಂತಹ ಟೆಂಡರ್‌ಗಳಿಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಒದಗಿಸಲು ಮತ್ತು

೩) ಸಂಗ್ರಹಕ್ಕೆ ಸಂಬಂಧಿಸಿ ಯಾವುದೇ ಹಂತದಲ್ಲಿ ನಿರ್ದಿಷ್ಟವಾದ ವರದಿ ಒಪ್ಪಿಸುವಂತೆ.

                                     ಅಧ್ಯಾಯ III

                                                     ಇತರೆ

೧೯. ಅಧಿಕಾರಿಗಳು ಸರ್ಕಾರಿ ನೌಕರರೆಂದು ಪರಿಗಣಿಸಬೇಕು: ಈ ಕಾಯ್ದೆಯ ಅವಕಾಶಗಳ ಅಡಿಯಲ್ಲಿ ಅಥವಾ ಈ ಮೂಲಕ ಮಾಡಲಾದ ನಿಯಮಗಳು, ಆದೇಶ ಅಥವಾ ಅಧಿಸೂಚನೆ ಅಡಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಅಧಿಕಾರಿಯೂ ೧೮೬೦ರ (೧೮೬೦ರ ಕೇಂದ್ರೀಯ ಕಾಯ್ದೆ ಎಕ್ಸ್‌ಎಲ್‌ವಿ) ಭಾರತೀಯ ದಂಡ ಸಂಹಿತೆಯ ೨೧ನೇ ವಿಧಿಯ ಅರ್ಥವ್ಯಾಪ್ತಿಯ ಪ್ರಕಾರ ಸರ್ಕಾರಿ ನೌಕರರೆಂದು ಪರಿಗಣಿಸಬೇಕು.

೨೦. ಸದುದ್ದೇಶದಿಂದ ಕೈಗೊಂಡ ಕ್ರಮಕ್ಕೆ ರಕ್ಷಣೆ: ಈ ಕಾಯ್ದೆಯ ಅಡಿಯಲ್ಲಿ ಘನ ಉದ್ದೇಶದೊಂದಿಗೆ ಕ್ರಮ ಕೈಗೊಂಡ ಪಕ್ಷದಲ್ಲಿ ಅಥವಾ ಈ ಕಾಯ್ದೆಯ ಸದುದ್ದೇಶಕ್ಕಾಗಿ ಚಲಾಯಿಸಿದ ಅಧಿಕಾರ ಅಥವಾ ನಿರ್ವಹಣೆ ತೋರಿದ ಸರ್ಕಾರ ಅಥವಾ ಯಾವುದೇ ಅಧಿಕಾರಿ ಅಥವಾ ಅಂತಹ ಅಧಿಕಾರ ಹೊಂದಿದ ಪ್ರಾಧಿಕಾರದ ವಿರುದ್ಧ ಯಾವುದೇ ದಾವೆ ಅಥವಾ ಕಾನೂನು ಕಲಾಪಗಳಿಗೆ ಅವಕಾಶವಿಲ್ಲ.

೨೧. ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯ ಮೇಲೆ ನಿರ್ಬಂಧ: ಈ ಕಾಯ್ದೆಯ ಅಡಿಯಲ್ಲಿ ಒದಗಿಸಲಾದ ರಕ್ಷಣೆಯ ಹೊರತಾಗಿಯೂ ಈ ಕಾಯ್ದೆಯ ವ್ಯಾಪ್ತಿಯಲ್ಲಿ ಯಾವುದೇ ಅಧಿಕಾರಿ ಅಥವಾ ಪ್ರಾಧಿಕಾರ ಮಾಡಿದ ಆದೇಶ ಅಥವಾ ಕೈಗೊಂಡ ಕ್ರಮವನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ, ಮತ್ತು ಈ ಕಾಯ್ದೆಯ ಅಡಿಯಲ್ಲಿ ಅಥವಾ ಅದರ ಮೂಲಕ ಯಾವುದೇ ಅಧಿಕಾರಿ ಅಥವಾ ಪ್ರಾಧಿಕಾರ ತನಗೆ ನೀಡಿದ ಅಧಿಕಾರವನ್ನು ಚಲಾಯಿಸುವ ಅಥವಾ ಚಲಾಯಿಸಿದ ಸಂದರ್ಭದಲ್ಲಿ ಅದಕ್ಕೆ ಯಾವುದೇ ಕೋರ್ಟ್ ಇಂಜೆಕ್ಷನ್ (ತಡೆಯಾಜ್ಞೆ) ನೀಡುವಂತಿಲ್ಲ.

೨೨. ಇತರ ಕಾನೂನುಗಳನ್ನು ಮೀರಿದ ಕಾಯ್ದೆ: ತತ್ಕಾಲಕ್ಕೆ ಜಾರಿಯಲ್ಲಿರುವ ಇತರ ಯಾವುದೇ ಕಾಯ್ದೆ ಅಥವಾ ಕೋರ್ಟಿನ ಅಥವಾ ನ್ಯಾಯಾಧಿಕರಣದ ಅಥವಾ ಇತರ ಪ್ರಾಧಿಕಾರದ ಯಾವುದೇ ಸಂಪ್ರದಾಯ ಅಥವಾ ಬಳಕೆ, ಒಪ್ಪಂದ, ಆದೇಶದಲ್ಲಿ ಇರಬಹುದಾದ ಯಾವುದೇ ಅಸಮಂಜಸ ಸಂಗತಿಗಳು ಈ ಕಾಯ್ದೆಯ ಅವಕಾಶಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

೨೩. ದಂಡ: ಈ ಕಾಯ್ದೆಯ ಅಡಿಯಲ್ಲಿ ಮಾಡಲಾದ ಅವಕಾಶಗಳು ಅಥವಾ ನಿಯಮಗಳನ್ನು ಉಲ್ಲಂಘಿಸಿದ ಯಾರೇ ಆಗಲಿ, ಅವರಿಗೆ ಮೂರು ವರ್ಷಗಳ ತನಕ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂಪಾಯಿ ತನಕ ದಂಡ ವಿಧಿಸಬಹುದಾಗಿದೆ.

೨೪. ಸಮಸ್ಯೆಗಳನ್ನು ನಿವಾರಿಸುವ ಅಧಿಕಾರ: ಈ ಕಾಯ್ದೆಯ ಅವಕಾಶಗಳಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳು ಉದ್ಭವವಾದರೆ, ಸರ್ಕಾರವು ಕಾಯ್ದೆಯ ಅವಕಾಶಗಳಲ್ಲಿನ ಸಮಸ್ಯೆಗಳನ್ನು ನಿವಾರಿಸುವ ಅಗತ್ಯವನ್ನು ಮನಗಂಡು ಅಸಹಜವಾಗಿರುವಂತಹ ಅವಕಾಶಗಳನ್ನು ಆದೇಶದ ಮೂಲಕ ಗಜೆಟ್‌ನಲ್ಲಿ ಪ್ರಕಟಿಸಬಹುದಾಗಿದೆ: ಆದರೆ, ಕಾಯ್ದೆ ಜಾರಿಗೆ ಬಂದ ದಿನಾಂಕದಿಂದ ಎರಡು ವರ್ಷಗಳ ಅವಧಿ ಮುಗಿಯುವ ಮುನ್ನವೇ ಈ ಆದೇಶ ಹೊರಡಿಸಬೇಕಾಗುತ್ತದೆ.

೨೫. ನಿಯಮಗಳನ್ನು ನಿರೂಪಿಸುವ ಅಧಿಕಾರ:
(೧) ಈ ಕಾಯ್ದೆಯ ಉದ್ದೇಶಗಳನ್ನು ಜಾರಿಗೆ ತರಲು ಅಗತ್ಯವಿರುವಂತಹ ನಿಯಮಗಳನ್ನು ಸರ್ಕಾರ ಅಧಿಸೂಚನೆಯ ಮೂಲಕ ಮಾಡಬಹುದಾಗಿದೆ.

(೨) ಈ ಕಾಯ್ದೆಯಡಿ ನಿರ್ಮಿಸಲಾದ ಪ್ರತಿಯೊಂದು ನಿಯಮ ಅಥವಾ ಅಧಿಸೂಚನೆ ಅಥವಾ ಹೊರಡಿಸಲಾದ ಆದೇಶ, ಅದು ಹೊರಡಿಸಿದ ಅಥವಾ ಅದು ನಿರೂಪಿಸಿದ ನಂತರ ಅದನ್ನು ಸಾಧ್ಯವಾದಷ್ಟು ಬೇಗ ರಾಜ್ಯ ವಿಧಾನಸಭೆಯು ಮುವತ್ತು ದಿನಗಳ ಅಧಿವೇಶನದಲ್ಲಿದ್ದಾಗ ಅದರ ಉಭಯ ಸದನಗಳಲ್ಲಿ ಮಂಡಿಸಬೇಕು, ಅದು ಒಂದು ಅಧಿವೇಶನ ಅಥವಾ ಎರಡು ಅಥವಾ ಅದಕ್ಕಿಂತ ಹೆಚ್ಚು ಸತತ ಅಧಿವೇಶನವನ್ನು ಒಳಗೊಂಡಿರಬಹುದಾಗಿದೆ ಮತ್ತು ಈ ಕಾಯ್ದೆಯನ್ನು ಮಂಡಿಸಲಾದ ಅಧಿವೇಶನದ ಅವಧಿ ಮುಗಿಯುವುದಕ್ಕೆ ಮುಂಚಿತವಾಗಿದ್ದರೆ ಅಥವಾ ಈ ನಿಯಮ, ಅಧಿಸೂಚನೆ ಅಥವಾ ಆದೇಶದಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡಲು ಉಭಯ ಸದನಗಳು ಒಪ್ಪಿದ್ದರೆ ಅಥವಾ ಉಭಯ ಸದನಗಳು ನಿಯಮ, ಅಧಿಸೂಚನೆ ಅಥವಾ ಆದೇಶವನ್ನು ಮಾಡಬಾರದೆಂದು ಒಪ್ಪಿದ್ದರೆ ಅವನ್ನು ತಕ್ಷಣ ಅನುಸರಿಸಬೇಕು, ನಿಯಮ, ಅಧಿಸೂಚನೆ ಅಥವಾ ಆದೇಶ ಮಾರ್ಪಾಡಾದ ರೂಪದಲ್ಲಿಯೇ ಜಾರಿಗೆ ಬರಬೇಕು ಅಥವಾ ಅದು ಯಾವುದೇ ರೀತಿಯಲ್ಲಿ ಜಾರಿಗೆ ಬರುವಂತಿಲ್ಲ; ಆದರೆ, ನಿಯಮ, ಅಧಿಸೂಚನೆ ಅಥವಾ ಆದೇಶದಲ್ಲಿನ ಈ ಹಿಂದಿನ ಮೌಲ್ಯಯುತ ಅಂಶಗಳನ್ನು ಯಾವುದೇ ರೀತಿಯ ಪೂರ್ವಗ್ರಹದಿಂದ ಮಾರ್ಪಾಡು ಅಥವಾ ರದ್ದು ಮಾಡುವಂತಿಲ್ಲ.

(೩) ಈ ಕಾಯ್ದೆ ಜಾರಿಗೆ ಬರುವುದಕ್ಕೆ ಮುನ್ನ ಮತ್ತು ಕಾಯ್ದೆ ಜಾರಿಗೆ ಬರುವ ದಿನಾಂಕದಂದು ಹೊರಡಿಸಲಾದ ಎಲ್ಲ ನಿಯಮಗಳು, ನಿಬಂಧನೆಗಳು, ಆದೇಶಗಳು, ಅಧಿಸೂಚನೆಗಳು, ಇಲಾಖಾ ಕೋಡ್‌ಗಳು, ಕೈಪಿಡಿಗಳು, ಉಪ-ಅಧಿನಿಯಮಗಳು, ಅಧಿಕೃತ ಮನವಿಪತ್ರ, ಸುತ್ತೋಲೆ ಅಥವಾ ಇನ್ನಿತರ ಯಾವುದೇ ಆದೇಶಗಳು ಜಾರಿಯಲ್ಲಿದ್ದರೆ ಅವು ಈ ಕಾಯ್ದೆಯ ಮುಂದುವರಿದ ಭಾಗವಾಗಿ ಜಾರಿಯಲ್ಲಿರುತ್ತವೆ; ಈ ಕಾಯ್ದೆಯ ಸಂವಾದಿ ಅವಕಾಶಗಳ ಅಡಿಯಲ್ಲಿ ಮಾಡಲಾಗಿದ್ದರೆ, ಈ ಕಾಯ್ದೆಯ ಅವಕಾಶಗಳ ಮಟ್ಟಿಗೆ ಅಸಹಜವೆನಿಸದಿದ್ದರೆ ಮತ್ತು ಈ ಕಾಯ್ದೆ ಅಡಿಯಲ್ಲಿ ಮಾಡಲಾದ ಯಾವುದೇ ಆದೇಶ, ಅಧಿಸೂಚನೆ ಅಥವಾ ಆದೇಶ ಅಥವಾ ಕೈಗೊಂಡ ಕ್ರಮವನ್ನು ರದ್ದು ಮಾಡಿರಬಾರದು.

೨೭. ರದ್ದುಪಡಿಸುವಿಕೆ ಮತ್ತು ಉಳಿತಾಯ:-
(೧) ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ ಅದ್ಯಾದೇಶ ೨೦೦೦ (ಕರ್ನಾಟಕ ಅದ್ಯಾದೇಶ ಸಂಖ್ಯೆ ೨೦೦೦ರಲ್ಲಿ ೮) ಈ ಮೂಲಕ ರದ್ದಾಗಿದೆ. (೨) ಆದಾಗ್ಯೂ, ಪ್ರಸ್ತಾಪಿತ ಅದ್ಯಾದೇಶದ ಮೂಲಕ ಮಾಡಲಾದ ತಿದ್ದುಪಡಿಯಂತೆ ಪ್ರಧಾನ ಕಾಯ್ದೆಯ ಕೈಗೊಳ್ಳಲಾದ ಯಾವುದೇ ಕ್ರಮ ಅಥವಾ ಏನಾದರೂ ರದ್ದುಪಡಿಸಿದ್ದರೆ ಅದನ್ನು ಈ ಕಾಯ್ದೆಯ ಅಡಿಯಲ್ಲಿ ಮಾಡಬೇಕಾಗುತ್ತದೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ನಿಯಮಗಳು, ೨೦೦೦

ಪೀಠಿಕೆ

ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ಪಾರದರ್ಶಕ ಆದೇಶ -೨೦೦೦ ಕಾಯ್ದೆಯ ೨೩ನೇ ಪರಿಚ್ಛೇದದ ಉಪವಿಭಾಗ(೧)ರಲ್ಲಿ ನೀಡಲಾದ ಅಧಿಕಾರಗಳ ಬಳಕೆಯಲ್ಲಿ ಕರ್ನಾಟಕ ಸರ್ಕಾರ ಈ ಮೂಲಕ ಈ ಕೆಳಗಿನ ನಿಯಮಗಳನ್ನು ರೂಪಿಸಿದೆ.

೧)ಸಣ್ಣಶೀರ್ಷಿಕೆಗಳು ಮತ್ತು ಅವುಗಳ ಆರಂಭ :
ಎ) ಈ ನಿಯಮಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ನಿಯಮಗಳು-೨೦೦೦ ಎಂದು ಕರೆಯಬಹುದು.

೨)ವ್ಯಾಖ್ಯೆ : ಈ ನಿಯಮಗಳಲ್ಲಿ ಪ್ರಕರಣದ ಹಿನ್ನೆಲೆಯು
ಎ)ಮುಂಗಡ ಹಣ ಠೇವಣಿಯನ್ನು ಬಯಸದೇ ಇದ್ದಲ್ಲಿ ಅಂದರೆ ಟೆಂಡರರ್ ಗುತ್ತಿಗೆಯನ್ನು ಜಾರಿಗೊಳಿಸಲು ಇಚ್ಛಿಸಿ ತಾನು ಸಲ್ಲಿಸಿದ ಟೆಂಡರ್ ಜೊತೆಗೆ ಠೇವಣಿಯಾಗಿ ನೀಡಬೇಕಾದ ಮೊತ್ತ ;
ಬಿ) ಪೂರ್ವ ಅರ್ಹತೆ : ಅಂದರೆ ಟೆಂಡರ್ ಸಲ್ಲಿಸಲು ಅವಕಾಶ ನೀಡುವ ಮುನ್ನ ಅವರು ಗುತ್ತಿಗೆಯನ್ನು ನಿರ್ವಹಿಸಬಲ್ಲ ಸಾಮರ್ಥ್ಯ ಮತ್ತು ಸಂಪನ್ಮೂಲವನ್ನು ಹೊಂದಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ನಡೆಸುವ ಪರಿಶೋಧನಾ ಪ್ರಕ್ರಿಯೆ

ಸಿ) ಎರಡು ಲಕೋಟೆಗಳ ಪದ್ಧತಿ : ಅಂದರೆ ಟೆಂಡರರ್ ಏಕ ಕಾಲದಲ್ಲಿ ಎರಡು ಲಕೋಟೆಗಳನ್ನು ಸಲ್ಲಿಸಬೇಕಾದ ಪ್ರಕ್ರಿಯೆ. ಒಂದರಲ್ಲಿ ಮುಂಗಡ ಠೇವಣಿಯ ಹಣ ಮತ್ತು ಟೆಂಡರ್ ವಹಿಸಿಕೊಳ್ಳಲು ಇರುವ ಸಾಮರ್ಥ್ಯದ ವಿವರಗಳನ್ನು ಉಲ್ಲೇಖಿಸಬೇಕು. ಇದೇ ಲಕೋಟೆಯನ್ನು ಮೊದಲು ಒಡೆಯಲಾಗುವುದು. ಮತ್ತೊಂದರಲ್ಲಿ (ಕೊಟೇಶನ್ ಮೊತ್ತವನ್ನು ಇರಿಸಬೇಕು. ಟೆಂಡರರ್ ಗುತ್ತಿಗೆಯನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾನೆ ಎಂಬ ಬಗ್ಗೆ ವಿಶ್ವಾಸ ಮೂಡಿದಲ್ಲಿ ಮಾತ್ರ ಈ ಲಕೋಟೆಯನ್ನು ತೆರೆಯಲಾಗುವುದು.

                                                      ಅಧ್ಯಾಯ ೨

                                                     ಪ್ರಧಾನ ಅಂಶ


೩) ಸಂಗ್ರಹಣೆಯ ವಿವಿಧ ವರ್ಗಗಳು :
೧) ಈ ನಿಯಮಗಳ ಅನ್ವಯಕ್ಕಾಗಿ ಸಂಗ್ರಹಣೆಯನ್ನು ಈ ಕೆಳಗಿನಂತ ವರ್ಗೀಕರಿಸಲಾಗಿದೆ.
ಎ) ನಿರ್ಮಾಣ, ಮತ್ತು
ಬಿ) ಸಾಮಗ್ರಿಗಳ ಪೂರೈಕೆ ಮತ್ತು ಸೇವೆ

                                                     ಅಧ್ಯಾಯ ೩

                                                         ಪ್ರಚಾರ

೪) ಟೆಂಡರ್ ಸೂಚನೆಯ ಪ್ರಕಟಣೆ : ೧)ಜಿಲ್ಲಾ ಟೆಂಡರ್ ಪ್ರಕಟಣೆಯನ್ನು ಜಿಲ್ಲಾ ಪ್ರಕಟಣಾ ಅಧಿಕಾರಿಗಳು ಕನಿಷ್ಠ ವಾರಕ್ಕೊಮ್ಮೆ ಪ್ರಕಟಿಸುತ್ತಾರೆ.

೨)ರಾಜ್ಯ ಟೆಂಡರ್ ಪ್ರಕಟಣೆಯನ್ನು ರಾಜ್ಯ ಟೆಂಡರ್ ಪ್ರಕಟಣಾ ಅಧಿಕಾರಿಗಳು ಕನಿಷ್ಠ ವಾರಕ್ಕೊಮ್ಮೆ ಪ್ರಕಟಿಸುತ್ತಾರೆ.

೩) ಟೆಂಡರ್ ಆಹ್ವಾನ ಪ್ರಕಟಿಸಲು, ಮತ್ತು ಟೆಂಡರ್ ಘೋಷಣೆಗೆ ೪೮ಗಂಟೆಗಳ ಅವಧಿಯ ವರೆಗೆ ಸ್ವೀಕಾರಗೊಂಡ ಟೆಂಡರ್ ಬಗ್ಗೆ ಮಾಹಿತಿ ನೀಡಲು, ಟೆಂಡರ್ ಪ್ರಕಟಣಾ ಅಧಿಕಾರಿಗಳೇ ಹೊಣೆಯಾಗಿರುತ್ತಾರೆ.

೪) ಒಂದು ವೇಳೆ ಟೆಂಡರ್ ಸ್ವೀಕರಣೆಗೆ ಸಂಬಂಧಿಸಿದ ಮಾಹಿತಿ ಅಥವಾ ಟೆಂಡರ್ ಆಹ್ವಾನಿಸುವ ನೋಟೀಸನ್ನು ತುರ್ತಾಗಿ ಪ್ರಕಟಿಸಬೇಕಾದಲ್ಲಿ, ರಾಜ್ಯ ಟೆಂಡರ್ ಬುಲೆಟಿನ್ ಪ್ರಕಟಣೆಗೆ ಸಂಬಂಧ ಪಟ್ಟ ಆಡಳಿತ ವಿಭಾಗದ ಸರ್ಕಾರೀ ಕಾರ್ಯದರ್ಶಿ, ಅಥವಾ ಜಿಲ್ಲಾ ಟೆಂಡರ್ ಬುಲೆಟಿನ್‌ಗಾದರೆ, ಉಪ ಆಯುಕ್ತರು ಬರಹರೂಪದಲ್ಲಿ ದಾಖಲಿಸಬೇಕಾಗುತ್ತದೆ ಮತ್ತು ಅಂತಹ ಟೆಂಡರ್ ಪ್ರಕಟಣೆಯನ್ನು ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ಪ್ರಕಟಿಸುವಂತೆ ಸಂಬಂಧಿಸಿದ ಟೆಂಡರ್‌ಪ್ರಕಟಣಾ ಅಧಿಕಾರಿಗಳಿಗೆ ನಿರ್ದೇಶಿಸುತ್ತಾರೆ.

೫) ಟೆಂಡರ್ ಪ್ರಕಟಣೆಗಳ ವಿತರಣೆ :

೧) ಟೆಂಡರ್ ಪ್ರಕಟಣಾ ಅಧಿಕಾರಿಯು, ಸ್ಥಳೀಯ ಕಾನೂನು ಅಧಿಕಾರ ಮಂಡಳಿ, ಸಾರ್ವಜನಿಕ ಉದ್ಯಮ, ಪೊಲೀಸ್ ವಿಭಾಗದಡಿಯಲ್ಲಿ ವಿಶ್ವವಿದ್ಯಾಲಯ ಅಥವಾ ಸಹಕಾರ ಸಂಸ್ಥೆಯಂತಹ ಸರ್ಕಾರೀ ಇಲಾಖೆಯಲ್ಲಿ ಟೆಂಡರ್ ಪ್ರಕಟಣೆ ಲಭ್ಯವಿರುವಂತೆ ಮಾಡುತ್ತಾರೆ.

೨) ಟೆಂಡರ್ ಪ್ರಕಟಣಾ ಅಧಿಕಾರಿಯು ಟೆಂಡರ್ ಆಹ್ವಾನಿಸುವ ಪ್ರಾಧಿಕಾರದಲ್ಲಿ ಟೆಂಡರ್ ಪ್ರಕಟಣೆಯ ಹೆಚ್ಚುವರಿ ಪ್ರತಿಗಳು ಲಭ್ಯವಿರುವಂತೆ ನೋಡಿಕೊಳ್ಳುತ್ತಾರೆ. ಈ ಪ್ರಾಧಿಕಾರವು ಟೆಂಡರ್ ಆಹ್ವಾನಿಸುವ ಮತ್ತು ಟೆಂಡರ್ ಸ್ವೀಕರಣೆಯ ಮಾಹಿತಿಗಳು ಈ ಪ್ರಕಟಣೆಯಲ್ಲಿ ಸೇರಿರುತ್ತವೆ.

೩)ಅರ್ಧ ವಾರ್ಷಿಕ, ತ್ರೈಮಾಸಿಕ ಅಥವಾ ವಾರ್ಷಿಕವಾಗಿ ನಿರ್ದಿಷ್ಟ ಮೊತ್ತ ನೀಡುವ ಮೂಲಕ ಟೆಂಡರ್ ಪ್ರಕಟಣೆಗೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಹೆಸರು ನೋಂದಾಯಿಸಿ ಚಂದಾದಾರನಾಗಬಹುದು.

೬) ಟೆಂಡರ್ ಪ್ರಕಟಣೆಯಲ್ಲಿ ಮಾಹಿತಿ ಮಾತ್ರ ಇರಬೇಕು:

೧. ಟೆಂಡರ್‌ಆಹ್ವಾನಿಸುವ ನೋಟೀಸಿನ ಮಾಹಿತಿಯನ್ನು ಮಾತ್ರ ಟೆಂಡರ್ ಪ್ರಕಟಣೆಯಲ್ಲಿ ಉಲ್ಲೇಖಿಸಬೇಕು.

೨. ಟೆಂಡರ್ ಸ್ವೀಕಾರದ ಮಾಹಿತಿಯೇ ಕಾನೂನಾತ್ಮಕ ಹಕ್ಕನ್ನು ಒದಗಿಸುವುದಿಲ್ಲ.

೩. ಟೆಂಡರ್ ಆಹ್ವಾನ ನೋಟೀಸು ಪತ್ರಿಕೆಗಳಲ್ಲಿ ಪ್ರಕಟವಾಗಿಲ್ಲ ಎಂಬ ಕಾರಣಕ್ಕೆ ಮೌಲ್ಯ ಕಳೆದುಕೊಳ್ಳುವುದಿಲ್ಲ.

೭)ರಾಜ್ಯ ಟೆಂಡರ್ ಬುಲೆಟಿನ್‌ನಲ್ಲಿ ಪ್ರಕಟಿಸಬೇಕಾದ ಮಾಹಿತಿಗಳು : ಈ ಕೆಳಗಿನ ಪ್ರಕರಣಗಳಲ್ಲಿ ಟೆಂಡರ್ ಆಹ್ವಾನಿಸುವ ನೋಟೀಸು ಮತ್ತು ಟೆಂಡರ್‌ಗಳ ಕುರಿತ ನಿರ್ಧಾರಗಳನ್ನು ರಾಜ್ಯ ಟೆಂಡರ್ ಪ್ರಕಟಣೆಯಲ್ಲಿ ಪ್ರಕಟಿಸಬಹುದು:

ಅಂತಹ ಸಂದರ್ಭಗಳೆಂದರೆ :

ಎ) ಟೆಂಡರ್ ಆಹ್ವಾನಿಸುವ ಅಧಿಕಾರಿ, ಸರ್ಕಾರೀ ಕಾರ್ಯದರ್ಶಿಯಾಗಿದ್ದರೆ, ಅಥವಾ ಸರ್ಕಾರೀ ಇಲಾಖೆಯ ಮುಖ್ಯಸ್ಥರಾಗಿದ್ದರೆ, ಅಥವಾ ಸಾರ್ವಜನಿಕ ಉದ್ಯಮದ ಮುಖ್ಯ ಕಾರ್ಯ ನಿರ್ವಾಹಕರಾಗಿದ್ದರೆ, ಕಾನೂನು ಸಂಸ್ಥೆಯಾಗಿದ್ದರೆ, ಪ್ರಮುಖ ಸಹಕಾರೀ ಸಂಸ್ಥೆಯಾಗಿದ್ದರೆ, ವಿಶ್ವವಿದ್ಯಾಲಯ ಅಥವಾ ಸರ್ಕಾರ ರಚಿಸಿದ ರಾಜ್ಯ ಮಟ್ಟದ ಸಂಘಟನೆಯಾಗಿದ್ದರೆ.

ಬಿ) ಸಂಗ್ರಹಣೆಯ ಮೌಲ್ಯ ಒಂದು ಕೋಟಿ ರೂಪಾಯಿ ಮತ್ತು ಅದಕ್ಕಿಂತಲೂ ಹೆಚ್ಚು.

೮) ಜಿಲ್ಲಾ ಮಟ್ಟದ ಟೆಂಡರ್ ಪ್ರಕಟಣೆಯಲ್ಲಿ ಪ್ರಕಟಿಸಬೇಕಾದ ಮಾಹಿತಿಗಳು : ನಿಯಮ ಹತ್ತರಲ್ಲಿ ಒದಗಿಸಲಾಗಿರುವ ಅವಕಾಶಕ್ಕೆ ಬದ್ಧವಾದಂತೆ, ಟೆಂಡರ್ ಆಹ್ವಾನಿಸುವ ನೋಟೀಸು ಮತ್ತು ಟೆಂಡರ್ ಬಗೆಗಿನ ನಿರ್ಧಾರಗಳನ್ನು ಜಿಲ್ಲಾ ಟೆಂಡರ್ ಆಹ್ವಾನಿಸುವ ಪ್ರಾಧಿಕಾರದ ಮುಖ್ಯಕಚೇರಿಯಲ್ಲಿ ಜಿಲ್ಲಾ ಟೆಂಡರ್ ಪ್ರಕಟಣೆಯಲ್ಲಿ ಪ್ರಕಟಿಸಲಾಗುವುದು. ಅಲ್ಲದೆ ಟೆಂಡರು ಮೊತ್ತ ಒಂದು ಕೋಟಿ ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚಾಗಿದ್ದರೆ ಅದನ್ನು ರಾಜ್ಯ ಟೆಂಡರು ಪ್ರಕಟಣೆಯಲ್ಲಿಯೂ ಪ್ರಕಟಿಸಬೇಕಾಗುತ್ತದೆ.

೯)ಟೆಂಡರು ಆಹ್ವಾನಿಸುವ ನೋಟೀಸಿನಲ್ಲಿ ಉಲ್ಲೇಖಿಸಬೇಕಾದ ವಿವರಗಳು :
ಟೆಂಡರು ಆಹ್ವಾನಿಸುವ ನೋಟೀಸಿನಲ್ಲಿ ಈ ಕೆಳಗಿನ ವಿವರಗಳು ಇರಬೇಕು.
ಎ)ಸಂಗ್ರಹಣಾ ಸಂಸ್ಥೆಯ ಹೆಸರು, ವಿಳಾಸ, ಮತ್ತು ಟೆಂಡರ್ ಆಹ್ವಾನಿಸುವ ಪ್ರಾಧಿಕಾರದ ಹೆಸರು ಮತ್ತು ವಿಳಾಸ.
ಬಿ) ಸಂಗ್ರಹಣೆಯನ್ನು ಬಳಸಿಕೊಳ್ಳಲಾಗುವ ಯೋಜನೆ, ಕಾರ್ಯಕ್ರಮ ಅಥವಾ ಕಾಮಗಾರಿಯ ಹೆಸರು,
ಸಿ) ಎಷ್ಟನೇ ದಿನಾಂಕದ ವರೆಗೆ ಮತ್ತು ಯಾವ ಪ್ರದೇಶದಿಂದ ಟೆಂಡರು ದಾಖಲೆಗಳನ್ನು ಪಡೆಯಬಹುದು ಎಂಬ ವಿವರ
ಡಿ) ಮುಂಗಡ ಹಣ ಠೇವಣಿಯ ಮೊತ್ತ
ಇ) ಟೆಂಡರ್ ಸ್ವೀಕಾರಕ್ಕೆ ನಿಗದಿಪಡಿಸಿದ ಕೊನೇ ದಿನಾಂಕ.
ಎಫ್) ಸ್ವೀಕೃತ ಟೆಂಡರನ್ನು ತೆರೆಯುವ ದಿನಾಂಕ, ಸ್ಥಳ ಮತ್ತು ಸಮಯ
ಜಿ) ಟೆಂಡರ್ ಆಹ್ವಾನಿಸುವ ಪ್ರಾಧಿಕಾರ ಅಗತ್ಯವೆಂದು ಭಾವಿಸುವ ಯಾವುದೇ ಇತರ ಪೂರಕ ಮಾಹಿತಿಗಳು

೧೦) ಟೆಂಡರ್ ಆಹ್ವಾನಿಸುವ ನೋಟೀಸನ್ನು ಪತ್ರಿಕೆಗಳಲ್ಲಿ ಪ್ರಕಟಿಸುವುದು

(೧) ಸಂಗ್ರಹಣೆಯ ಮೊತ್ತ ಹತ್ತು ಕೋಟಿ ರೂ ದಾಟುತ್ತದೆ ಎಂದಾದಲ್ಲಿ ಟೆಂಡರ್‌ಗಳನ್ನು ಆಹ್ವಾನಿಸುವ ನೋಟೀಸನ್ನು ಟೆಂಡರ್ ಆಹ್ವಾನಿಸುವ ಪ್ರಾಧಿಕಾರವು ಭಾರತೀಯ ವಾಣಿಜ್ಯಪತ್ರಿಕೆಗಳನ್ನು ಪ್ರಕಟಪಡಿಸುವುದು.

(೨) ಇಲಾಖೆಯ ನಿಯಮಗಳಿಗೆ ಅನುಗುಣವಾಗಿ ಮತ್ತು ಸಂಗ್ರಹಣೆ ಮೊತ್ತವನ್ನು ಆಧರಿಸಿ ಟೆಂಡರು ಆಹ್ವಾನಿಸುವ ನೋಟೀಸನ್ನು ಎಷ್ಟು ಪತ್ರಿಕೆಗಳಲ್ಲಿ, ಎಷ್ಟು ಆವೃತ್ತಿಗಳಲ್ಲಿ ಪ್ರಕಟಿಸಬೇಕು ಮತ್ತು ಯಾವ್ಯಾವ ಭಾಷೆಯ ಪತ್ರಿಕೆಗಳಲ್ಲಿ ಪ್ರಕಟಿಸಬೇಕು ಎಂಬುದನ್ನು ನಿರ್ಧರಿಸಲಾಗುವುದು.

(೩) ಒಂದುವೇಳೆ ಟೆಂಡರ್ ನೋಟೀಸುಗಳ ಜಿಲ್ಲಾವ್ಯಾಪ್ತಿಯಲ್ಲಿ ಪ್ರಸಾರ ಇರುವ ಪತ್ರಿಕೆಗಳಲ್ಲಿ ಮಾತ್ರ ಪ್ರಕಟಿಸಬೇಕಾದಲ್ಲಿ ಜಿಲ್ಲೆಯ ವಾರ್ತಾ ಮತ್ತುಪ್ರಚಾರ ಅಧಿಕಾರಿ ಅದನ್ನು ನಿರ್ವಹಿಸಲು ಸಮರ್ಥ ಅಧಿಕಾರಿಯಾಗಿರುತ್ತಾರೆ.

(೪) ಟೆಂಡರು ಆಹ್ವಾನಿಸುವ ಪ್ರಕಟಣೆಗೆ ದಿನಪತ್ರಿಕೆಗಳಲ್ಲಿ ಸಾಕಷ್ಟು ಪ್ರಚಾರ ನೀಡಲಾಗುವುದು ಮತ್ತು ಜಿಲ್ಲಾ ಕಚೇರಿಗಳ ನೋಟೀಸು ಬೋರ್ಡಿನಲ್ಲಿಯೂ ಪ್ರಕಟಿಸಲಾಗುವುದು. ಟೆಂಡರು ಕರೆಯುವ ಇಲಾಖೆಯ ಸೂಚನೆಯ ಪ್ರಕಾರ ವಾರ್ತಾ ಮತ್ತು ಪ್ರಚಾರ ನಿರ್ದೇಶಕರು ಟೆಂಡರು ಆಹ್ವಾನುಸವ ನೋಟೀಸನ್ನು ಪ್ರಕಟಿಸುತ್ತಾರೆ.

                                                    ಅಧ್ಯಾಯ ೪

          ಟೆಂಡರ್ ಆಹ್ವಾನಿಸುವ ನೋಟೀಸು ಮತ್ತು ಟೆಂಡರು ದಾಖಲೆಗಳು

೧೧. ಟೆಂಡರ್ ದಾಖಲೆಗಳಲ್ಲಿರುವ ತಾಂತ್ರಿಕ ಮುಖ್ಯಾಂಶಗಳು:

(೧) ಟೆಂಡರ್ ದಾಖಲೆಯಲ್ಲಿರುವ ತಾಂತ್ರಿಕ ಮುಖ್ಯಾಂಶಗಳಲ್ಲಿ ಸಂಗ್ರಹಣೆಗೆ ಸಂಬಂಧಿಸಿ ಸಂಪೂರ್ಣ ವಿವರಗಳಿರುತ್ತವೆ.

(೨) ಈ ಕೆಳಗಿನ ಸುರಕ್ಷಾ ಕ್ರಮಗಳನ್ನು ಗಮನಿಸಿಕೊಂಡು ಪಕ್ಷಪಾತವಿಲ್ಲದ ಟೆಂಡರು ಮುಖ್ಯಾಂಶಗಳನ್ನು ಸಿದ್ಧಪಡಿಸಲಾಗುತ್ತದೆ.

(ಎ) ಬ್ರಾಂಡ್ ಹೆಸರುಗಳು ಮತ್ತು ಅವುಗಳ ಯಾದಿಯ ಸಂಖ್ಯೆಯನ್ನು ಆದಷ್ಟು ದೂರವಿರಿಸಲಾಗುವುದು. ಹಾಗೆ ದೂರವಿರಿಸುವುದು ಸಾಧ್ಯವಾಗದೇ ಇದ್ದಲ್ಲಿ ಬ್ರಾಂಡ್‌ಹೆಸರಿನ ಜೊತೆಗೆ ಅದಕ್ಕೆ ಸಮಾನಂತರವಾದ ಶೈಲಿಯನ್ನು ಜೋಡಿಸಲಾಗುವುದು.

(ಬಿ) ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಸಂಖ್ಯೆಯ ಜೊತೆಗೆ ಭಾರತೀಯ ಗುಣಮಟ್ಟವನ್ನು ಅಳವಡಿಸಲಾಗುವುದು.

(ಸಿ) ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಟೆಂಡರ್‌ಗಳಲ್ಲಿ ಸಮರ್ಥ ತಾಂತ್ರಿಕ ಅಧಿಕಾರಿಗಳು ನಿರ್ಮಾಣಕ್ಕೆ ಸಂಬಂಧಿಸಿದ ವಿವರವಾದ ಅಂದಾಜು ಯೋಜನೆಯನ್ನು ಸೂಚಿತ ಕ್ರಮಕ್ಕೆ ಅನುಗುಣವಾಗಿ ಅಥವಾ ದರ ಮತ್ತು ಸಮಯಕ್ಕೆ ಸರಿಯಾಗಿ ನಿರ್ದಿಷ್ಟ ಮಾಹಿತಿಯನ್ನು ಆಧರಿಸಿ ರೂಪಿಸಬೇಕು.

೧೨) ವಾಣಿಜ್ಯ ಷರತ್ತುಗಳು :

(೧) ಎಲ್ಲಾ ಟೆಂಡರ್‌ಗಳು ಮುಂಗಡ ಠೇವಣಿ ಹಣವನ್ನು ಇಲಾಖೆಯ ನಿಯಮಗಳ ಪ್ರಮಾಣಕ್ಕೆ ಅನುಗುಣವಾಗಿ ಡಿಮಾಂಡ್ ಡ್ರಾಫ್ಟ್, ಬ್ಯಾಂಕರ್‍ಸ್ ಚೆಕ್, ಸೂಚಿತ ಉಳಿತಾಯ ಮಾದರಿಯಲ್ಲಿ ಅಥವಾ ಸಂಗ್ರಹಣಾ ಸಂಸ್ಥೆಗೆ ಯಾವುದು ಸೂಕ್ತವೆನಿಸುತ್ತದೆಯೋ ಆ ರೀತಿಯಲ್ಲಿಒದಗಿಸುವಂತೆ ಟೆಂಡರ್ ದಾಖಲೆಗಳು ಸೂಚಿಸುತ್ತವೆ. ಅಂದರೆ ಇಲಾಖೆಯು ಸೂಚಿಸಿದ ರೀತಿಯಲ್ಲಿ ರದ್ದುಗೊಳಿಸಲಾಗದ ಬ್ಯಾಂಕ್ ಖಾತರಿಯನ್ನು ನೀಡಬೇಕಾಗುತ್ತದೆ.

(೨) ಟೆಂಡರ್‌ನಲ್ಲಿ ಉಲ್ಲೇಖಿಸಿದ ಮೌಲ್ಯವು ಎಷ್ಟು ಅವಧಿಯ ವರೆಗೆ ಸಮ್ಮತವಾಗಿರುತ್ತದೆ ಎಂಬುದನ್ನು ಟೆಂಡರ್ ದಾಖಲೆಗಳು ಸೂಚಿಸಬೇಕು. ಆದರೆ ಆರಂಭಿಕ ಅವಧಿಯು ೯೦ ದಿನಗಳಿಗಿಂತ ಕಡಿಮೆಯಾಗಿರಬಾರದು

(೩) ಟೆಂಡರರ್ ಗುತ್ತಿಗೆ ನಿರ್ವಹಿಸುವ ಸಾಮರ್ಥ್ಯ, ಇಲಾಖೆಯ ನಿಯಮಗಳಿಗೆ ಅನುಗುಣವಾಗಿ ಸ್ವೀಕರಿಸುವ ಸುರಕ್ಷಾ ಠೇವಣಿಯ ಖಾತರಿಗಳು ಟೆಂಡರ್ ದಾಖಲೆಯಲ್ಲಿ ಸೇರಿರಬೇಕು.

(೪) ಟೆಂಡರ್ ದಾಖಲೆಗಳು ಮತ್ತು ಒಪ್ಪಂದದಲ್ಲಿ - ಒಂದುವೇಳೆ ಗುತ್ತಿಗೆಯನ್ನು ಪೂರೈಸುವ ವೇಳೆ ಯಾವುದಾದರೂ ಷರತ್ತನ್ನು ಪೂರೈಸದೇ ಇದ್ದಲ್ಲಿ ಟೆಂಡರರ್ ನಿರ್ವಹಣಾದಾರ ನೀಡಬೇಕಾದ ದಂಡ ಮತ್ತು ಸಮಾಪ್ತಿಗೊಂಡ ನಷ್ಟಗಳಿಗಾಗಿ ಹಣ ನೀಡುವ ಕುರಿತ ಹೇಳಿಕೆಯೂ ಇರಬೇಕು.

(೫) ಟೆಂಡರಿನಲ್ಲಿ ಆಗಬೇಕಾದ ಸಂಗ್ರಣೆಯ ಪ್ರಮಾಣವನ್ನು ಟೆಂಡರು ದಾಖಲೆ ಸೂಚಿಸಬೇಕು. ಮತ್ತು ಟೆಂಡರು ಸ್ವೀಕರಣಾ ಪ್ರಾಧಿಕಾರವು ಅಂತಿಮವಾಗಿ ಆದೇಶಿಸಲಾದ ಪ್ರಮಾಣದಲ್ಲಿನ ವ್ಯತ್ಯಯಕ್ಕೂ ಅವಕಾಶ ನೀಡುತ್ತದೆ. ಆದರೆ ಈ ಎರಡೂ ಕಡೆಗಳಿಗೆ ಅನ್ವಯವಾಗುವಂತೆ ವ್ಯತ್ಯಯ ಟೆಂಡರು ದಾಖಲೆಯಲ್ಲಿ ಸೂಚಿಸಿದ ಮೊತ್ತದ ಶೇ ೨೫ರಷ್ಟರವೆಗೆ ಮಾತ್ರ ಇರಬೇಕು.

೧೩) ಟೆಂಡರ್ ದಾಖಲೆಗಳ ಪೂರೈಕೆ :

(೧) ಟೆಂಡರ್ ಆಹ್ವಾನಿಸುವ ನೋಟೀಸಿನಲ್ಲಿ ಉಲ್ಲೇಖಿಸಲಾದ ದಿನಾಂಕದಿಂದ ಟೆಂಡರ್ ದಾಖಲೆಗಳು ಲಭ್ಯವಿರುವಂತೆ ಟೆಂಡರ್ ಆಹ್ವಾನಿಸುವ ಪ್ರಾಧಿಕಾರ ನೋಡಿಕೊಳ್ಳುತ್ತದೆ.

(೨) ಟೆಂಡರ್ ದಾಖಲೆಗಳ ಶುಲ್ಕವನ್ನು ಭರಿಸಲು ಸಿದ್ಧರಿರುವ ಯಾವುದೇ ವ್ಯಕ್ತಿಗೆ ಟೆಂಡರ್ ದಾಖಲೆಗಳು ಲಭ್ಯವಿರುವಂತೆ ಟೆಂಡರ್ ಆಹ್ವಾನ ಪ್ರಾಧಿಕಾರ ಮಾಡುತ್ತದೆ. ಆದರೆ ಸಂಗ್ರಹಣಾ ಸಂಸ್ಥೆಯು ಗುತ್ತಿಗೆದಾರರನ್ನು ನೋಂದಾಯಿಸುವ ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ ಸರಿಯಾದ ಮಾದರಿಯಲ್ಲಿ ಟೆಂಡರ್ ದಾಖಲೆಗಳನ್ನು ನೋಂದಾಯಿತ ಗುತ್ತಿಗೆದಾರರಿಗೇ ಪೂರೈಸಲಾಗುವುದು.

(೩) ಟೆಂಡರ್ ದಾಖಲೆಗಳನ್ನು ಕೊರಿಯರ್ ಅಥವಾ ರಿಜಿಸ್ಟರ್‍ಡ್ ಪೋಸ್ಟ್ ಮುಖಾಂತರವೂ ಕಳುಹಿಸಲಾಗುವುದು. ಆದರೆ ಆಸಕ್ತ ವ್ಯಕ್ತಿ ದಾಖಲೆಯ ಶುಲ್ಕದೊಂದಿಗೆ ಅಂಚೆ ವೆಚ್ಚವನ್ನು ಭರಿಸಿ ತಮ್ಮ ಜವಾಬ್ದಾರಿಯಡಿ ಇದನ್ನು ಸ್ವೀಕರಿಸಲು ಸಿದ್ಧರಿರಬೇಕು.

೧೪) ಟೆಂಡರ್ ದಾಖಲೆಗಳಿಗೆ ಸ್ಪಷ್ಟೀಕರಣ :
ಟೆಂಡರ್ ದಾಖಲೆಯನ್ನು ಪ್ರಕಟಿಸಿದ ನಂತರ ಯಾವುದೇ ಸಮಯದಲ್ಲಾದರೂ ಮತ್ತು ಟೆಂಡರ್‌ಗಳನ್ನು ತೆರೆಯುವ ಮುನ್ನ ಟೆಂಡರ್ ಆಹ್ವಾನ ಪ್ರಾಧಿಕಾರ, ಟೆಂಡರ್ ದಾಖಲೆಗಳಲ್ಲಿ ಯಾವುದೇ ಬದಲಾವಣೆ, ತಿದ್ದುಪಡಿ, ಮಾರ್ಪಾಟನ್ನು ಮಾಡಬಹುದು. ಮತ್ತು ಆ ಬಗ್ಗೆ ಮೂಲ ಟೆಂಡರ್ ಖರೀದಿಸಿದ ಎಲ್ಲ ಗ್ರಾಹಕರಿಗೂ ಬದಲಾವಣೆಯ ಕುರಿತು ಮಾಹಿತಿ ನೀಡಬೇಕಾಗುತ್ತದೆ.

                                                   ಅಧ್ಯಾಯ ೫

                               ಟೆಂಡರು ಸ್ವೀಕಾರ ಮತ್ತು ಟೆಂಡರು ತೆರೆಯುವಿಕೆ

೧೫) ಟೆಂಡರು ಸ್ವೀಕರಿಸುವ ಸ್ಥಳ ಮತ್ತು ಸಮಯ :

(೧) ಸೂಚಿಸಲಾದ ನಿಗದಿತ ಸ್ಥಳದಲ್ಲಿ ಟೆಂಡರು ಆಹ್ವಾನಿಸುವ ಪ್ರಾಧಿಕಾರವು ಟೆಂಡರು ಸ್ವೀಕಾರಕ್ಕೆಮತ್ತು ಟೆಂಡರಿನ ಸುರಕ್ಷವಾಗಿ ಇರಿಸಲು ಬೇಕಾದ ಸೂಕ್ತ ವ್ಯವಸ್ಥೆಯನ್ನು ಮಾಡುತ್ತದೆ.

(೨) ಅಂಚೆ ಅಥವಾ ಕೊರಿಯರ್ ಮುಖಾಂತರ ಟೆಂಡರ್‌ಗಳನ್ನು ಸಲ್ಲಿಸಲು ಟೆಂಡರು ಆಹ್ವಾನ ಪ್ರಾಧಿಕಾರ ಅನುಮತಿ ನೀಡುತ್ತದೆ. ಆದರೆ ಟೆಂಡರು ಸೂಕ್ತ ಸಮಯಕ್ಕೆ ತಲುಪದೇ ಇದ್ದಲ್ಲಿ ಅದಕ್ಕೆ ಟೆಂಡರು ಆಹ್ವಾನ ಪ್ರಾಧಿಕಾರ ಜವಾಬ್ದಾರನಾಗಿರುವುದಿಲ್ಲ.

(೩) ಕೆಲ ಸಂದರ್ಭಗಳಲ್ಲಿ ಟೆಂಡರು ಆಹ್ವಾನ ಪ್ರಾಧಿಕಾರವು ಟೆಂಡರು ಸ್ವೀಕಾರದ ಕೊನೆ ದಿನವನ್ನು ವಿಸ್ತರಿಸಬಹುದು. ಆದರೆ ಟೆಂಡರು ಸಲ್ಲಿಸಲು ಇಚ್ಚಿಸುವವರಿಗೆ ಸಾಕಷ್ಟು ಮುಂಚಿತವಾಗಿ ತಿಳಿಸಬೇಕಾಗುತ್ತದೆ. ಅಂತಹ ಸಂದರ್ಭಗಳೆಂದರೆ :

(ಎ)ಟೆಂಡರು ನೋಟೀಸಿನ ಪ್ರಕಟಣೆಯಲ್ಲಿ ವಿಳಂಬವಾದಾಗ

(ಬಿ) ನಿಯಮ ೧೪ರಡಿಯಲ್ಲಿ ಟೆಂಡರು ದಾಖಲೆಗಳಲ್ಲಿ ಬದಲಾವಣೆಗಳಾದಾಗ ಅವುಗಳ ಸಂವಹನಕ್ಕಾಗಿ,

(ಸಿ)ಇತರ ಯಾವುದೇ ಸಕಾರಣದ ಆಧಾರದ ಮೇಲೆ ದಿನಾಂಕವನ್ನು ವಿಸ್ತರಿಸಬಹುದು. ಆದರೆ ಈ ಬದಲಾವಣೆಗಳನ್ನು ಟೆಂಡರು ಆಹ್ವಾನ ಪ್ರಾಧಿಕಾರ ಲಿಖಿತ ರೂಪದಲ್ಲಿ ದಾಖಲಿಸಬೇಕಾಗುತ್ತದೆ.

(೧೬)ಸಲ್ಲಿಸಲಾದ ಟೆಂಡರುಗಳ ಲಕೋಟೆಗಳಲ್ಲಿ ಗುರುತು ಹಾಕುವುದು :

ಟೆಂಡರು ಲಕೋಟೆಯನ್ನು ಭದ್ರವಾಗಿ ಮುಚ್ಚುವ ಜವಾಬ್ದಾರಿ ಟೆಂಡರುದಾರನದ್ದು. ಟೆಂಡರು ಒಡೆಯಲು ನಿಗದಿ ಪಡಿಸಿದ ದಿನಾಂಕ ಮತ್ತು ಸಮಯಕ್ಕಿಂತ ಮುಂಚೆ ಅಕಸ್ಮಿಕವಾಗಿ ಸರಿಯಾಗಿ ಭದ್ರಪಡಿಸದೇ ಇರುವ ಟೆಂಡರು ಒಡೆಯಲ್ಪಟ್ಟಲ್ಲಿ ಅದಕ್ಕೆ ಟೆಂಡರು ಆಹ್ವಾನ ಪ್ರಾಧಿಕಾರ ಜವಾಬ್ದಾರನಾಗಿರುವುದಿಲ್ಲ.

೧೭) ಟೆಂಡರು ಸಲ್ಲಿಸಲು ಕನಿಷ್ಠ ಸಮಯಾವಕಾಶ :

(೧) ಟೆಂಡರು ಸಲ್ಲಿಸುವುದಕ್ಕೆ ಸಾಕಷ್ಟು ಸಮಯ ನೀಡಲಾಗಿದೆಯೇ ಎಂಬ ಬಗ್ಗೆ ಟೆಂಡರು ಆಹ್ವಾನ ಪ್ರಾಧಿಕಾರ ಗಮನವಹಿಸುತ್ತದೆ. ಮತ್ತು ಟೆಂಡರು ಪ್ರಕಟಣೆಯಲ್ಲಿ, ಟೆಂಡರು ಪ್ರಕಟಿಸಿದ ದಿನ ಮತ್ತು ಟೆಂಡರು ಸಲ್ಲಿಸುವ ಕೊನೆ ದಿನಾಂಕದ ನಡುವೆ ಕನಿಷ್ಠ ನಿರ್ದಿಷ್ಟ ಸಮಯಾವಕಾಶ ನೀಡಲಾಗಿದಯೇ ಎಂಬುದನ್ನೂ ಖಚಿತಪಡಿಸಿಕೊಳ್ಳುತ್ತದೆ. ಈ ಕನಿಷ್ಠ ಅವಧಿಯು ಹೀಗಿರುತ್ತದೆ :

(ಎ) ಎರಡು ಕೋಟಿ ರೂ ಮೌಲ್ಯದ ಟೆಂಡರಿಗೆ ಕನಿಷ್ಠ ೩೦ ದಿನಗಳು,

(ಬಿ) ಎರಡು ಕೋಟಿ ರೂಗಳಿಗಿಂತ ಮೇಲ್ಪಟ್ಟ ಮೌಲ್ಯದ ಟೆಂಡರುಗಳಿಗೆ ೬೦ ದಇನಗಳು
ಅಧಿನಿಯಮ (೧)ರ ಪ್ರಕಾರ ಈ ಅವಧಿ ಕಡಿಮೆಯಾದಲ್ಲಿ ಆ ಬಗ್ಗೆ ಟೆಂಡರು ಆಹ್ವಾನ ಪ್ರಾಧಿಕಾರಕ್ಕಿಂತ ಹಿರಿಯ ಅಧಿಕಾರವುಳ್ಳ ಅಧಿಕಾರಿಗಳು ಸಮರ್ಥ ಕಾರಣಗಳನ್ನು ಲಿಖಿತ ರೂಪದಲ್ಲಿ ನೀಡಬೇಕಾಗುತ್ತದೆ.

೧೮) ಟೆಂಡರು ತೆರೆಯುವುದು :

(೧) ಟೆಂಡರು ಆಹ್ವಾನ ಪ್ರಾಧಿಕಾರ ಸ್ವೀಕರಿಸಿದ ಎಲ್ಲಾ ಟೆಂಡರುಗಳನ್ನು, ಟೆಂಡರು ಆಹ್ವಾನಿಸುವ ವೇಳೆ ನೀಡಲಾದ ನೋಟೀಸಿನಲ್ಲಿ ಉಲ್ಲೇಖಿಸಲಾದ ಸ್ಥಳದಲ್ಲಿ ಮತ್ತು ಅದೇ ಸಮಯದಲ್ಲಿ ಎಲ್ಲಾ ಟೆಂಡರುಗಳನ್ನು ತೆರೆಯಲಾಗುವುದು ಮತ್ತು ಒಂದು ವೇಳೆ ಅಧಿನಿಯಮ(೩)ಮತ್ತು ೧೫ಕ್ಕೆ ಅನುಗುಣವಾಗಿ ಟೆಂಡರು ಪ್ರಕಟಣೆ ನೋಟೀಸಿನಲ್ಲಿ ನೀಡಲಾದ ಕೊನೇ ದಿನಾಂಕವನ್ನು ವಿಸ್ತರಿಸಿ ಪ್ರಕಟಣೆ ಹೊರಡಿಸಿದ್ದಲ್ಲಿ, ವಿಸ್ತೃತ ದಿನಾಂಕ ಮತ್ತು ಸಮಯದಲ್ಲಿ ಟೆಂಡರುಗಳನ್ನು ತೆರೆಯಲಾಗುವುದು.

(೨) ಟೆಂಡರುಗಳನ್ನು ಟೆಂಡರುದಾರರ ಉಪಸ್ಥಿತಿಯಲ್ಲಿ ಅಥವಾ ಟೆಂಡರುದಾರನೇ ಕಳುಹಿಸಿದ ಆತನ ಪ್ರತಿನಿಧಿಯ ಉಪಸ್ಥಿತಿಯಲ್ಲಿ ತೆರೆಯಲಾಗುವುದು.

೧೯)ಟೆಂಡರು ತೆರೆಯುವ ವೇಳೆ ಅನುಸರಿಸಬೇಕಾದ ಕ್ರಮಗಳು : ಟೆಂಡರು ತೆರೆಯುವ ವೇಳೆ ಈ ಕೆಳಗಿನ ನಿಯಮಗಳನ್ನು ಅನುಸರಿಸಬೇಕು.

ಎ) ಟೆಂಡರುಗಳನ್ನೊಳಗೊಂಡಿರುವ ಎಲ್ಲಾ ಲಕೋಟೆಗಳನ್ನು ಲೆಕ್ಕ ಮಾಡಬೇಕು.

ಬಿ) ಸೂಕ್ತ ಸಮಯದೊಳಗೆ ಸ್ವೀಕೃತಗೊಂಡ ಎಲ್ಲ ಟೆಂಡರುಗಳನ್ನು ತೆರೆಯಲಾಗುವುದು.

ಸಿ) ಬಿಡ್‌ಗಳನ್ನು ತೆರೆಯುವ ವೇಳೆ ಗಮನಿಸಲಾದ ಬದಲಾವಣೆಗಳ ದಾಖಲಿಸಿಕೊಳ್ಳಲಾಗುವುದು.
 
ಡಿ) ಟೆಂಡರುದಾರನ ಹೆಸರು ಮತ್ತುಆತ ಘೋಷಿಸಿದ ಮೊತ್ತವನ್ನು ಸ್ಥಳದಲ್ಲಿ ಘೋಷಣೆ ಮಾಡಲಾಗುವುದು.

ಇ) ಅಲ್ಲದೆ ಮುಂಗಡ ಹಣದ ಠೇವಣಿಯನ್ನು ನೀಡಲಾಗಿದೆಯೇ ಮತ್ತು ಇತರ ಅವಶ್ಯ ದಾಖಲೆಗಳನ್ನು ಸಲ್ಲಿಸಲಾಗಿದೆಯೇ ಎಂಬುದನ್ನು ಸೂಚಿಸಬಹುದು. ಆದರೆ ಇದು ಟೆಂಡರು ದಾಖಲೆಗಳ ಪರಿಶೀಲನೆಯೇ ಹೊರತು ಮೌಲ್ಯಮಾಪನವಲ್ಲ.

ಎಫ್) ಟೆಂಡರ್ ತೆರೆಯವ ವೇಳೆಯ ಎಲ್ಲ ಪ್ರಕ್ರಿಯೆ(ಮಿನಿಟ್)ಗಳನ್ನು ದಾಖಲಿಸಲಾಗುವುದು. ಮತ್ತು ಈ ಮಿನಿಟ್ ದಾಖಲೆಯಲ್ಲಿ, ಉಪಸ್ಥಿತರಿರುವ ಟೆಂಡರುದಾರ ಅಥವಾ ಅವರ ಪ್ರತಿನಿಧಿ ನಿರಾಕರಿಸದೇ ಇದ್ದಲ್ಲಿ, ಅವರ ಸಹಿಯನ್ನೂ ಪಡೆದುಕೊಳ್ಳಲಾಗುವುದು.

೨೦) ಟೆಂಡರು ತಪಾಸಣಾ ಸಮಿತಿ :

(೧)ಟೆಂಡರು ಸ್ವೀಕರಣಾ ಪ್ರಾಧಿಕಾರದಲ್ಲಿ ಟೆಂಡರು ತಪಾಸಣಾ ಸಮಿತಿಯೂ ಸೇರಿರುತ್ತದೆ. ಈ ಸಮಿತಿಯಲ್ಲಿ ಟೆಂಡರು ತಪಾಸಣೆ ನಡೆಸಲು, ಟೆಂಡರು ತೆರೆಯುವ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ನಡೆಸಲು, ಪ್ರಾಥಮಿಕ ಪರಿಶೀಲನೆ ನಡೆಸಲು ಮತ್ತುಸ್ವೀಕೃತ ಟೆಂಡರಿನ ವಿವರವಾದ ಮೌಲ್ಯಮಾಪನ ನಡೆಸಲು ಹಾಗೂ ಸಮರ್ಥರಿರುವ ಅಧಿಕಾರಿಗಳಿರುತ್ತಾರೆ. ಮತ್ತು ಈ ಅಧಿಕಾರಿಗಳು ಟೆಂಡರು ಸ್ವೀಕರಣಾ ಪ್ರಾಧಿಕಾರದ ಪರಿಶೀಲನೆಗಾಗಿ ಮೌಲ್ಯಮಾಪನ ವರದಿಯೊಂದನ್ನು ಸಿದ್ಧಪಡಿಸುತ್ತಾರೆ.

(೨)ಸಾರ್ವಜನಿಕ ಕಾಮಗಾರಿ, ನೀರಾವರಿ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಟೆಂಡರಿನ ಮೌಲ್ಯ ಐದು ಕೋಟಿ ರೂಪಾಯಿ ಮೀರಿದಲ್ಲಿ ಮತ್ತು ಇತರ ಇಲಾಖೆಯ ಕಾಮಗಾರಿಗಳಲ್ಲಿ ಟೆಂಡರು ಮೌಲ್ಯ ಒಂದು ಕೋಟಿ ರೂಪಾಯಿ ಮೀರಿದಲ್ಲಿ ಟೆಂಡರು ಸ್ವೀಕರಣಾ ಪ್ರಾಧಿಕಾರವು ಟೆಂಡರು ತಪಾಸಣಾ ಸಮಿತಿಯನ್ನು ನೇಮಿಸಬೇಕಾಗುತ್ತದೆ.

                                                  ಅಧ್ಯಾಯ ೬

                                               ಟೆಂಡರು ಮೌಲ್ಯ ಮಾಪನ

೨೧ ) ಮೌಲ್ಯಮಾಪನದ ಮಾನದಂಡವನ್ನು ಆಧರಿಸಿ ಟೆಂಡರು ಮೌಲ್ಯಮಾಪನ ಮಾಡಬೇಕು : ಟೆಂಡರು ದಾಖಲೆಗಳಲ್ಲಿ ಉಲ್ಲೇಖಿಸಿದಂತೆ ಮೌಲ್ಯಮಾಪನದ ಅಳತೆಗೋಲನ್ನು ಆಧರಿಸಿಯೇ ಎಲ್ಲ ಟೆಂಡರುಗಳನ್ನು ಟೆಂಡರು ಸ್ವೀಕರಣಾ ಪ್ರಾಧಿಕಾರ ಮೌಲ್ಯಮಾಪನ ಮಾಡಬೇಕಾಗುತ್ತದೆ.
ಮೌಲ್ಯಮಾಪನಕ್ಕೆ ತಗುಲುವ ಅವಧಿ ಮತ್ತು ಟೆಂಡರ್ ಸಿಂಧುತ್ವದ ಅವಧಿ ವಿಸ್ತರಣೆ :

(೧) ಟೆಂಡರ್‌ಗಳ ಸಿಂಧುತ್ವ ಯಾವ ದಿನಾಂಕದವರೆಗೆ ಅಸ್ತಿತ್ವದಲ್ಲಿ ಇರುತ್ತದೆಯೋ ಆ ದಿನಾಂಕದೊಳಗೇ ಟೆಂಡರುಗಳ ಮೌಲ್ಯ ಮಾಪನ ಮಾಡಿ ಸಮರ್ಥ ಟೆಂಡರುದಾರರಿಗೆ ಗುತ್ತಿಗೆ ನೀಡಬೇಕು.

(೨) ಒಂದು ವೇಳೆ ಟೆಂಡರ್ ಮೌಲ್ಯಮಾಪನವು ಟೆಂಡರ್ ಸಿಂಧುತ್ವದ ಅವಧಿಯೊಳಗೆ ಮುಗಿಯದೇ ಇದ್ದಲ್ಲಿ ಮೌಲ್ಯಮಾಪನವನ್ನು ಮುಗಿಸುವ ಸಲುವಾಗಿ ಟೆಂಡರ್ ಸ್ವೀಕರಣಾ ಪ್ರಾಧಿಕಾರವು ಟೆಂಡರ್‌ದಾರರಿಂದ ಟೆಂಡರಿನ ಸಿಂಧುತ್ವದ ಅವಧಿಯನ್ನು ವಿಸ್ತರಿಸುವಂತೆ ಕೋರಬಹುದು.

(೩) ವಿಸ್ತೃತ ಅವಧಿಯೊಳಗೆ ಟೆಂಡರು ಮೌಲ್ಯಮಾಪನ ಮತ್ತು ಗುತ್ತಿಗೆ ನೀಡಿಕೆ ಪ್ರಕ್ರಿಯೆ ಮುಗಿಯದೇ ಇದ್ದಲ್ಲಿ ಎಲ್ಲಾ ಟೆಂಡರ್‌ಗಳೂ ಅಸಿಂಧು ಎನಿಸಿಕೊಳ್ಳುತ್ತವೆ. ಮತ್ತು ಹೊಸ ಟೆಂಡರ್‌ಗಳನ್ನು ಆಹ್ವಾನಿಸಬೇಕಾಗುತ್ತದೆ.
 

೨೩) ಗುತ್ತಿಗೆಯನ್ನು ಪ್ರಕಟಿಸುವವರೆಗೆ ಟೆಂಡರ್ ಮೌಲ್ಯಮಾಪನ ಪ್ರಕ್ರಿಯೆಯನ್ನು ರಹಸ್ಯವಾಗಿ ಇಡಬೇಕು.

(೧) ಟೆಂಡರಿನ ಮೇಲೆ ಆದೇಶಗಳು ಮಂಜೂರಾಗುವವರೆಗೆ ಟೆಂಡರು ಮೌಲ್ಯಮಾಪನದ ಪ್ರಕ್ರಿಯೆಯನ್ನು ಟೆಂಡರು ಆಹ್ವಾನ ಪ್ರಾಧಿಕಾರವು ರಹಸ್ಯವಾಗಿಡಬೇಕು.

(೨) ಟೆಂಡರು ತೆರೆದ ನಂತರ ಮತ್ತು ಟೆಂಡರು ಅಧಿಸೂಚನೆಯನ್ನು ಪ್ರಕಟಿಸುವ ಮುನ್ನ ಟೆಂಡರು ಸ್ವೀಕಾರ ಪ್ರಾಧಿಕಾರ, ಟೆಂಡರು ಆಹ್ವಾನ ಪ್ರಾಧಿಕಾರ, ಟೆಂಡರು ತಪಾಸಣಾ ಸಮಿತಿಯೊಂದಿಗೆ ಟೆಂಡರುದಾರ ಅನಧಿಕೃತ ಅಥವಾ ಅನಗತ್ಯ ಸಂಬಂಧವನ್ನು ಹೊಂದಿರಬಾರದು. ಒಂದು ವೇಳೆ ಟೆಂಡರು ಸ್ವೀಕರಣಾ ಪ್ರಾಧಿಕಾರದ ಮೇಲೆ ಹೆಚ್ಚುವರಿ ಒತ್ತಡ ತಂದಲ್ಲಿ ಅಂತಹ ಟೆಂಡರುದಾರನನ್ನು ಅನರ್ಹಗೊಳಿಸಲು ಇದುವೇ ಸಕಾರಣವಾಗಿರುತ್ತದೆ.

೨೪) ಸಮರ್ಥ ಜವಾಬ್ದಾರಿಯನ್ನು ನಿರ್ಧರಿಸಲು ಆರಂಭಿಕ ಪರಿಶೀಲನೆ:

(೧) ಟೆಂಡರು ಗುತ್ತಿಗೆಯನ್ನು ಸಮರ್ಥವಾಗಿ ನಿರ್ವಹಿಸಬಲ್ಲರೇ ಎಂಬುದನ್ನು ನಿರ್ಧರಿಸಲು ಸಲ್ಲಿಸಲಾದ ಟೆಂಡರುಗಳನ್ನು ಆರಂಭಿಕ ಪರಿಶೀಲನೆಯನ್ನು ಟೆಂಡರು ಆಹ್ವಾನ ಪ್ರಾಧಿಕಾರ ನಡೆಸುತ್ತದೆ.

(೨) ಆರಂಭಿಕ ಪರಿಶೀಲನೆಯ ವೇಳೆ ಈ ಕೆಳಗಿನ ಅಂಶಗಳನ್ನು ಪರಿಗಣಿಸಲಾಗುತ್ತದೆ. ಅವುಗಳೆಂದರೆ :

(ಎ) ಟೆಂಡರು ದಾಖಲೆ ಬಯಸುವ ಅರ್ಹತೆಯ ಅಂಶಗಳು ಟೆಂಡರುದಾರನಲ್ಲಿವೆಯೇ

(ಬಿ) ಪ್ರಮುಖ ದಾಖಲೆಗಳಿಗೆ ಸಂಬಂಧಪಟ್ಟವರ ಸಹಿ ಹಾಕಲಾಗಿದೆಯೇ ?

(ಸಿ) ಅಗತ್ಯವಿರುವ ಮುಂಗಡ ಠೇವಣಿ ಹಣ ಒದಗಿಸಲಾಗಿದೆಯೇ

(ಡಿ) ಬಿಡ್ಡಿಂಗ್ ದಾಖಲೆಗಳಲ್ಲಿ ಸೂಚಿಸಲಾಗಿರುವ ತಾಂತ್ರಿಕ ಸಾಮರ್ಥ್ಯಗಳು ಟೆಂಡರುದಾರನಲ್ಲಿವೆಯೇ ಮತ್ತು ಉಲ್ಲೇಖಿತ ಮಾದರಿ ಪರೀಕ್ಷೆಗಳಿಗೆ ಆತ ಸಿದ್ಧನಾಗಿದ್ದಾನೆಯೇ ?

(೩) ಉಪನಿಯಮ ಯಮ (೨)ರಡಿಯ ಯಾವುದೇ ಕಲಮಿನ ಪ್ರಕಾರ ಆರಂಭಿಕ ಪರಿಶೀಲನೆಯ ವೇಳೆ ಯಾವುದೇ ಟೆಂಡರು ನೀಡಲಾಗುವ ಜವಾಬ್ದಾರಿಯನ್ನು ಸಮರ್ಥವಾಗಿ ಪೂರೈಸಲಾಗದು ಎಂಬುದು ಗಮನಕ್ಕೆ ಬಂದಲ್ಲಿ ಟೆಂಡರು ಸ್ವೀಕರಣಾ ಪ್ರಾಧಿಕಾರ ಅಂತಹ ಟೆಂಡರನ್ನು ನಿರಾಕರಿಸಬಹುದು.

೨೫) ಕನಿಷ್ಠ ಮೊತ್ತನಿಗದಿ ಪಡಿಸಿದ ಟೆಂಡರಿನ ನಿಗದಿ :

(೧) ಆರಂಭಿಕ ಪರಿಶೀಲನೆ ನಡದ ಬಳಿಕ ಸಮರ್ಥವೆನಿಸಿದ ಟೆಂಡರುಗಳ ಅತ್ಯಂತ ಕನಿಷ್ಠ ಮೊತ್ತ ಬಿಡ್ಡಿಂಗ್ ಘೋಷಿಸಿದ ಟೆಂಡರರ್ ಮೌಲ್ಯಮಾಪನದ ವೇಳೆ ನಿರ್ಣಾಯಕವೆನಿಸಿದಲ್ಲಿ ಅಥವಾ ಟೆಂಡರರ್ ಮೌಲ್ಯಮಾಪನದ ವೇಳೆ ಸೂಚಿತ ಅಂಶಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದಲ್ಲಿ ಅಂತಹ ಟೆಂಡರನ್ನು ಆಯ್ಕೆ ಮಾಡಬಹುದು.

(೨) ಆದರೆ ಕನಿಷ್ಠ ಮೌಲ್ಯದ ಟೆಂಡರನ್ನು ನಿಗದಿಗೊಳಿಸುವಾಗ ಈ ಕೆಳಗಿನ ಅಂಶಗಳನ್ನು ಪರಿಗಣಿಸಬೇಕು. ಅವುಗಳೆಂದರೆ :

(ಎ) ಘೋಷಿತ ಮೌಲ್ಯದಲ್ಲಿ ಅಂಕಿಸಂಖ್ಯೆಯ ದೋಷಗಳಿರಬಾರದು.

(ಬಿ)ಘೋಷಿತ ಮೌಲ್ಯದ ಅಂಕಿಗಳು ಮತ್ತು ಅಕ್ಷರಗಳಲ್ಲಿ ಸೂಚಿಸಲಾದ ಮೌಲ್ಯದ ನಡುವೆ ವೆತ್ಯಾಸಗಳು ಕಂಡು ಬಂದಲ್ಲಿ ಅವುಗಳಲ್ಲಿ ಯಾವುದು ಅತೀ ಕಡಿಮೆಯೋ ಅದನ್ನು ಪರಿಗಣಿಸಬೇಕಾಗುತ್ತದೆ.

(ಸಿ) ವಾಣಿಜ್ಯ ವಿಚಾರಗಳಲ್ಲಿ ಏರುಪೇರುಗಳಾದಲ್ಲಿ ಘೋಷಿತ ಟೆಂಡರು ಮೌಲ್ಯದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಕಾಮಗಾರಿ ಮುಕ್ತಾಯಗೊಳಿಸುವ ಅವಧಿ ಸಣ್ಣ ಪ್ರಮಾಣದಲ್ಲಿ ಹಣಸಂದಾಯದಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳಬಹುದು. ಆದರೆ ನಿರ್ದಿಷ್ಟ ಟೆಂಡರಿ ಹಿನ್ನಲೆಯಲ್ಲಿ ಇದನ್ನು ನಗಣ್ಯವೆಂದು ಪರಿಗಣಿಸುವಂತಿರಬೇಕು.

(ಡಿ) ಮೌಲ್ಯೀಕರಣವು ಕೇಂದ್ರ ಅಬಕಾರಿ ಸುಂಕ,ಸೀಮಾ ಸುಂಕ ಮತ್ತು ಸ್ಥಳೀಯ ಶುಲ್ಕಗಳು ಪ್ರಧಾನ ಶುಲ್ಕದಲ್ಲಿ ಸೇರಿರುತ್ತವೆ.

(ಇ) ಸಲಕರಣೆಗಳ ಖರೀದಿ, ನಿರ್ವಹಣೆ ಮತ್ತು ಬಳಕೆ, ಹಾಗೂ ನಿರ್ದಿಷ್ಟ ಅವಧಿಗೆ ಬಿಡಿಭಾಗಗಳ ವೆಚ್ಚವನ್ನು ಬಿಡ್ ದಾಖಲೆಯಲ್ಲಿ ಸೂಚಿಸಿದ್ದರೆ ಅದನ್ನು ಗಣನೆಗೆ ತೆಗೆದುಕೊಳ್ಳಬಹುದು. (ಆದರೆ ಕನಿಷ್ಠ ಮೌಲ್ಯದ ಟೆಂಡರು ನಿಗದಿ ಮಾಡುವ ವೇಳೆ, ೨೦೦೧ರ ಏಪ್ರಿಲ್‌ನಿಂದ ಐದು ವರ್ಷಗಳ ಅವಧಿಗೆ, ಸರ್ಕಾರೀ ಆದೇಶ ಸಂಖ್ಯೆ ಸಿಐ೧೬೭ ಎಸ್‌ಪಿಐ ೨೦೦೧, ದಿನಾಂಕ ೩೦ ಜೂನ್, ೨೦೦೧ರ ಪ್ರಕಾರ ಹೊಸ ಕೈಗಾರಿಕಾ ನೀತಿ-೨೦೦೧-೨೦೦೬ರಡಿ ರಾಜ್ಯ ಸಣ್ಣ ಕೈಗಾರಿಕೆಗಳಿಗೆ ಶೇ ೧೫ರಷ್ಟನ್ನು ನೀಡಬೇಕಾಗುತ್ತದೆ.

ವಿವರಣೆ: ಈ ಅವಕಾಶದ ಉದ್ದೇಶಕ್ಕಾಗಿ ಸಣ್ಣಕೈಗಾರಿಕೆಗಳೆಂದರೆ ಅದು ಒಂದು ಉದ್ಯಮವಾಗಿದ್ದು ಆ ಕೈಗಾರಿಕೆ ಮತ್ತು ಯಂತ್ರೋಪಕರಣಗಳಲ್ಲಿ ಅದರ ಬಂಡವಾಳವು ಸ್ಥಿರ ಆಸ್ತಿಯಾಗಿರಬೇಕು, ಇದು ಮಾಲೀಕತ್ವದ ಷರತ್ತಿನ ಮೇಲೆ ಅಥವಾ ಗುತ್ತಿಗೆಯ ಆಧಾರದ ಮೇಲೆ ಅಥವಾ ಬಾಡಿಗೆ ಆಧಾರದ ಮೇಲೆ ನೂರು ಲಕ್ಷ ರೂಪಾಯಿಗಳನ್ನು ಮೀರಿರಬಾರದು.

ಮೌಲ್ಯಮಾಪನದ ವರದಿ ತಯಾರಿಕೆ ಮತ್ತು ಟೆಂಡರುಗಳ ನೀಡಿಕೆ :

(೪) ಟೆಂಡರು ತಪಾಸಣಾ ಸಮಿತಿ ಅಥವಾ ಟೆಂಡರು ಆಹ್ವಾನಿಸುವ ಅಧಿಕಾರಿ ಟೆಂಡರು ಮೌಲ್ಯಮಾಪನ ವರದಿಯನ್ನು ಸಿದ್ಧಪಡಿಸುತ್ತಾರೆ. ಟೆಂಡರು ಸೀಕರಣಾ ಪ್ರಾಧಿಕಾರವು ಈ ವರದಿಯನ್ನು ಪರಿಗಣಿಸಿಕೊಂಡು ಟೆಂಡರುಗಳನ್ನು ಅಂತಿಮಗೊಳಿಸುತ್ತದೆ.

(೫) ಗುತ್ತಿಗೆಯನ್ನು ವಹಿಸಿಕೊಳ್ಳುವ ಟೆಂಡರನ್ನು ನಿರ್ಧರಿಸಿದ ಕೂಡಲೇ ಪರಿಚ್ಛೇದ೧೩ರ ಪ್ರಕಾರ ಟೆಂಡರು ಸ್ವೀಕರಣಾ ಪ್ರಾಧಿಕಾರವು ಟೆಂಡರು ಸ್ವೀಕರಿಸಿದ ಆದೇಶವನ್ನು ಹೊರಡಿಸುತ್ತದೆ ಮತ್ತು ಆ ಆದೇಶದ ವಿಷಯ ಸಂಬಂಧ ಪಟ್ಟ ಯಶಸ್ವಿ ಟೆಂಡರುದಾರರಿಗೆ ತಲುಪುವಂತೆ ನೋಡಿಕೊಳ್ಳುತ್ತಾರೆ. ಟೆಂಡರು ಸ್ವೀಕರಣಾ ಪ್ರಾಧಿಕಾರ ಟೆಂಡರು ಮೌಲ್ಯಮಾಪನ ಕುರಿತ ವರದಿಯೊಂದನ್ನು ಹಾಗೂ ಟೆಂಡರು ಸ್ವೀಕರಿಸಿದ ವರದಿ ಮತ್ತು ಅಂತಿಮ ನಿರ್ಣಯವನ್ನು ಪ್ರಕಟಣೆಗಾಗಿ ಟೆಂಡರು ಪ್ರಕಟಣಾ ಅಧಿಕಾರಿಗಳಿಗೆ ಕಳುಹಿಸಬೇಕಾಗುತ್ತದೆ.

(೬) ಟೆಂಡರು ದಾಖಲೆಯಲ್ಲಿ ಉಲ್ಲೇಖಿಸಿದಂತೆ ನಿರ್ದಿಷ್ಟ ಅವಧಿಯೊಳಗೆ ಯಾರ ಟೆಂಡರು ಯಶಸ್ವಿಯಾಗಿ ಸ್ವೀಕೃತಗೊಂಡಿದೆಯೋ ಅಂತಹವರು ಗುತ್ತಿಗೆ ಒಪ್ಪಂದವೊಂದನ್ನು ನಿರ್ದಿಷ್ಟ ನಮೂನೆಯಲ್ಲಿ ರೂಪಿಸಿಕೊಳ್ಳಬೇಕಾಗುತ್ತದೆ.

(೭) ಉಪನಿಯಮ (೩)ರಡಿಯಲ್ಲಿ ಯಶಸ್ವಿ ಟೆಂಡರುದಾರ ಗುತ್ತಿಗೆ ಒಪ್ಪಂದವನ್ನು ಮಾಡಿಕೊಳ್ಳುವಲ್ಲಿ ವಿಫಲನಾದರೆ, ಮುಂಗಡ ಠೇವಣಿ ಹಣವನ್ನು ಕೈಬಿಡಲಾಗುವುದು ಮತ್ತು ಟೆಂಡರನ್ನು ಅಸಮರ್ಥವೆಂದು ಪರಿಗಣಿಸಲಾಗುವುದು.

೨೭) ಪೂರ್ವಾರ್ಹತೆಯ ಪ್ರಕ್ರಿಯೆಗಳು :

(೧) ಟೆಂಡರು ಸ್ವೀಕರಣಾ ಪ್ರಾಧಿಕಾರವು ಎಲ್ಲ ವ್ಯವಹಾರಗಳನ್ನು ಲಿಖಿತ ರೂಪದಲ್ಲಿ ದಾಖಲಿಸಿ ಟೆಂಡರುದಾರನ ಪೂರ್ವ ಅರ್ಹತೆಯನ್ನು ಈ ಕೆಳಗಿನ ಅಂಶಗಳನ್ನು ಆಧರಿಸಿ ನೀಡಬೇಕು. ಅವುಗಳೆಂದರೆ :

(ಎ) ಇದೇ ಮಾದರಿಯ ಗುತ್ತಿಗೆಯನ್ನು ಈ ಹಿಂದೆ ನಿರ್ವಹಿಸಿದ ಅನುಭವ,

(ಬಿ) ಸಿಬ್ಬಂದಿ, ಸಲಕರಣೆಗಳು ಮತ್ತು ನಿರ್ಮಾಣ ಅಥವಾ ನಿರ್ಮಾಣ ಸೌಕರ್ಯಗಳಿಗೆ ಸಂಬಂಧಿಸಿದಂತೆ ಟೆಂಡರುದಾರನ ಸಾಮರ್ಥ್ಯಗಳು

(ಸಿ) ಆರ್ಥಿಕ ಸ್ಥಿತಿಗತಿ ಮತ್ತು ಸಾಮರ್ಥ್ಯ

(೨)ಪೂರ್ವ ಅರ್ಹತೆ ಇರುವ ಟೆಂಡರುದಾರರನ್ನು ಮಾತ್ರ ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದು.

ಆದರೆ ಈ ನಿಯಮಗಳಿಗೆ ವಿರುದ್ಧವಾಗಿ ಇರದ, ಮತ್ತು ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ನಿರ್ದೇಶನಾಲಯದಡಿ ದಾಖಲೆಗೊಂಡ ಪೂರ್ವಾರ್ಹತೆ ಇರುವ ಟೆಂಡರುದಾರರ ಪಟ್ಟಿಯನ್ನು ಟೆಂಡರು ಆಹ್ವಾನ ಪ್ರಾಧಿಕಾರವು ಒಪ್ಪಿಕೊಳ್ಳಬಹುದು. ಕಂಪ್ಯೂಟರ್ ಮತ್ತು ಬಾಹ್ಯ ಉಪಕರಣಗಳು ಮತ್ತು ಸಂಬಂಧಿಸಿದ ಇತರ ಸೇವೆಗಳನ್ನು ಪಡಿಗಣಿಸಿ ದಾಖಲೆ ಮಾಡಲಾಗುವುದು. ಇಂತಹ ಪೂರ್ವ ಅರ್ಹತೆ ಇರುವ ಟೆಂಡರುದಾರರಿಂದ ಹರಾಜು ದರವನ್ನು ಆಹ್ವಾನಿಸುತ್ತದೆ ಮತ್ತು ಪೂರ್ವ ಅರ್ಹತೆ ಇರುವ ಟೆಂಡರುದಾರರಿಂದ ಬಂದ ಹರಾಜು ದರವನ್ನು ಟೆಂಡರು ಸ್ವೀಕರಣಾ ಮಂಡಳಿಯು ಮೌಲ್ಯಮಾಪನಕ್ಕೆ ಪರಿಗಣಿಸುತ್ತದೆ.

೨೮) ಎರಡು ಲಕೋಟೆಗಳ ಟೆಂಡರು:

(೧) ನಿರ್ಮಾಣ, ಪೂರೈಕೆ ಅಥವಾ ಯಾವುದೇ ಉಪಕರಣಗಳ ಅಳವಡಿಕೆಯ ಪ್ರಕರಣದಲ್ಲಿ ಐವತ್ತು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಟೆಂಡರುಗಳ ವಿಚಾರದಲ್ಲಿ ಪೂರ್ವ ಅರ್ಹತೆಯ ಪ್ರಕ್ರಿಯೆಯನ್ನಾಗಲೀ, ಟರ್ನ್ ಕೀ ಟಂಡರ್ ವ್ಯವಸ್ಥೆಯನ್ನಾಗಲೀ ಟೆಂಡರು ಆಹ್ವಾನ ಪ್ರಾಧಿಕಾರ ಅನುಸರಿಸುವುದಿಲ್ಲ. ಬಲದಾಗಿ ಪ್ರಾಧಿಕಾರವು ಎರಡು ಲಕೋಟೆಗಳ ಕ್ರಮವನ್ನು ಅನುಸರಿಸುತ್ತದೆ.
 
(೨) ಮೊದಲನೇ ಲಕೋಟೆಯಲ್ಲಿ ಟೆಂಡರು ಕುರಿತ ಈ ಕೆಳಗಿನ ಮಾಹಿತಿಗಳನ್ನು ಲಗತ್ತಿಸಲಾಗಿರುತ್ತದೆ.

(ಎ) ಇದೇ ಮಾದರಿಯ ಗುತ್ತಿಗೆಯನ್ನು ಈ ಹಿಂದೆ ನಿರ್ವಹಸಿರುವ ಬಗ್ಗೆ ಅನುಭವ,

(ಬಿ) ಸಿಬ್ಬಂದಿ, ಸಲಕರಣೆ, ನಿರ್ಮಾಣ ಅಥವಾ ನಿರ್ಮಾಣ ಸೌಕರ್ಯಗಳ ಸಾಮರ್ಥ್ಯಗಳು

(ಸಿ) ಆರ್ಥಿಕ ಸ್ಥಿತಿಗತಿ ಮತ್ತು ಸಾಮರ್ಥ್ಯ

(ಡಿ) ಸೂಕ್ತವೆನಿಸುವ ಇತರ ಯಾವುದೇ ಮಾಹಿತಿಗಳು

೩) ಎರಡನೇ ಲಕೋಟೆಯಲ್ಲಿ ಟೆಂಡರುದಾರ ಘೋಷಿಸಿದ ಹರಾಜುದರವನ್ನು ಸೂಚಿಸಿರಲಾಗುತ್ತದೆ.

೪) ಟೆಂಡರು ಆಹ್ವಾನ ಪ್ರಾಧಿಕಾರವು ಮೊದಲನೇ ಲಕೋಟೆಯನ್ನು ಮೊದಲು ಓದಲಿದೆ ಮತ್ತು ಟೆಂಡರುದಾರನ ಸಾಮರ್ಥ್ಯವನ್ನು ಟಂಡರು ದಾಖಲೆಯನ್ನು ಆಧರಿಸಿಕೊಂಡು ನಿರ್ಧರಿಸುತ್ತದೆ ಮತ್ತು ಇದರ ಆಧಾರದ ಮೇಲೆ ಅರ್ಹ ಟೆಂಡರುದಾರರ ಪಟ್ಟಿಯನ್ನೂ ತಯಾರಿಸುತ್ತದೆ.

೫) ಉನಿಯಮ(೪)ರಡಿಯಲ್ಲಿ ಅರ್ಹವೆನಿಸಿದ ಟೆಂಡರುದಾರರ ಎರಡನೇ ಲಕೋಟೆಯನ್ನು ಟೆಂಡರು ಆಹ್ವಾನ ಪ್ರಾಧಿಕಾರ ತೆರೆಯುತ್ತದೆ. ಈ ಲಕೋಟೆಯಲ್ಲಿ ಆತ ಘೋಷಿಸಿದ ಮೊತ್ತವನ್ನೂ ಉಲ್ಲೇಖಿಸಲಾಗುವುದು. ನಿಯಮ ೨೫ ಮತ್ತು ೨೬ರಲ್ಲಿ ರಲ್ಲಿ ಸೂಚಿಸಲಾದ ಪದ್ಧತಿಯನ್ನು ಟೆಂಡರು ಆಹ್ವಾನ ಪ್ರಾಧಿಕಾರ ಅನುಸರಿಸುವುದು.

                                                 ಅಧ್ಯಾಯ ಏಳು
                                                   ಮನವಿಗಳು

೨೯) ಮನವಿಗಳು :- ಪರಿಚ್ಛೇದ ೧೬ರಡಿಯಲ್ಲಿ ಸಲ್ಲಿಸುವ ಈ ಕೆಳಗಿನ ರೀತಿಯಲ್ಲಿ ಮನವಿಗಳನ್ನು ಸಲ್ಲಿಸಬೇಕು:

(ಎ) ಟಂಡರು ಸ್ವೀಕರಣಾ ಪ್ರಾಧಿಕಾರ ವಿಭಾಗೀಯ ಮುಖ್ಯಕಚೇರಿಗೆ ಅಧೀನವಾಗಿದ್ದರೆ, ವಿಭಾಗೀಯ ಮುಖ್ಯಕಚೇರಿಗೆ ಸಲ್ಲಿಸಬೇಕು,

(ಬಿ) ಟೆಂಡರು ಸ್ವೀಕರಣಾ ಪ್ರಾಧಿಕಾರವು ಮುಖ್ಯಕಚೇರಿ, ಸ್ಥಳೀಯ ಪ್ರಾಧಿಕಾರ, ರಾಜ್ಯಸರ್ಕಾರದ ಉದ್ದಿಮೆ ಅಥವಾ ಮಂಡಳಿ, ನಿಗಮದ ಸಂಸ್ಥೆಯಾಗಿದ್ದಲ್ಲಿ ಅಥವಾ ಸರ್ಕಾರ ನಡೆಸುವ ಯಾ ನಿಯಂತ್ರಿಸುವ ಯಾವುದೇ ಪ್ರಾಧಿಕಾರವಾಗಿದ್ದಲ್ಲಿ ಸರ್ಕಾರಕ್ಕೇ ಮನವಿ ಸಲ್ಲಿಸಬೇಕು.

                ಕರ್ನಾಟಕ ಸಾರ್ವಜನಿಕ ಪಾರದರ್ಶಕ ಸಂಗ್ರಹಣೆ (ತಿದ್ದುಪಡಿ)
                                       ನಿಯಮಗಳು, ೨೦೦೧

                                           ಅಧಿಸೂಚನೆ
               (ನಂ. ಪಿಡಬ್ಲ್ಯುಡಿ/೨೨/ಎಫ್‌ಸಿ-೩/೨೦೦೧ ಬೆಂಗಳೂರು-೧-೩-೨೦೦೧)


ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕ ಕಾಯ್ದೆ ೧೯೯೯(ಕರ್ನಾಟಕ ಕಾಯ್ದೆ ೨೦, ೨೦೦೦)ರ ೨೫ನೇ ಪರಿಚ್ಛೇಧದಲ್ಲಿ ನೀಡಲಾದ ಅಧಿಕಾರದಡಿಯಲ್ಲಿ ಕರ್ನಾಟಕ ಸರ್ಕಾರ ಈ ಮೂಲಕ ಕರ್ನಾಟಕ ಪಾರದರ್ಶಕ ಸಂಗ್ರಹಣೆಯ ನಿಯಮ(೨೦೦೦)ಗಳನ್ನು ಮಾಡಿದೆ. ಅವುಗಳೆಂದರೆ :

೧) ಚಿಕ್ಕ ಶೀರ್ಷಿಕೆಗಳು ಮತ್ತು ಅವುಗಳ ಉಪಕ್ರಮ :
ಈ ನಿಯಮಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕ (ತಿದ್ದುಪಡಿ)ನಿಯಮಗಳು, ೨೦೦೧ ಎಂದು ಹೇಳಬಹುದು.

ಅಧಿಕೃತ ಗೆಝೆಟ್ ಪ್ರಕಟಣೆಯಲ್ಲಿ ಪ್ರಕಟಗೊಂಡ ದಿನದಿಂದ ಇವು ಜಾರಿಗೆ ಬರುತ್ತವೆ.
೨) ನಿಯಮ ೨೭ರ ತಿದ್ದುಪಡಿ :- ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕ ನಿಯಮಗಳು,೨೦೦೦ದ ನಿಯಮ ೨೭ರಡಿಯಲ್ಲಿ ಉಪನಿಯಮ ೨ರ ನಂತರ ಈ ಕೆಳಗಿನ ಅವಕಾಶಗಳನ್ನು ನೀಡಲಾಗಿದೆ. ಅವುಗಳೆಂದರೆ : ಈ ನಿಯಮಗಳ ಪ್ರಕಾರ,
ಈ ನಿಯಮಗಳಿಗೆ ಯಾವುದೇ ರೀತಿಯಲ್ಲಿ ವಿರುದ್ಧವಾಗಿಲ್ಲದೇ ಇದ್ದ ಪಕ್ಷದಲ್ಲಿ ಕರ್ನಾಟಕ ಸರ್ಕಾರದ ಮಾಹಿತಿ ನಿರ್ದೇಶನಾಲಯದಡಿ ದಾಖಲೆಗೊಂಡಿರುವ ಪೂರ್ವ ಅರ್ಹತೆ ಹೊಂದಿರುವ ಟೆಂಡರುದಾರರನ್ನು ಟೆಂಡರು ಆಹ್ವಾನ ಪ್ರಾಧಿಕಾರವು ಅಂಗೀಜಕರಿಸಬಹುದು. ಇದು ಕಂಪ್ಯೂಟರ್ ಮತ್ತು ಬಾಹ್ಯ ಉಪಕರಣಗಳು ಹಾಗೂ ಸಂಬಂಧಿಸಿದ ಇತರ ಸೇವೆಗಳಿಗೆ ಸಂಬಂಧಿಸಿ ಮತ್ತು ಇಂತಹ ಪೂರ್ವ ಅರ್ಹತೆ ಉಳ್ಳ ಟೆಂಡರುದಾರರಿಂದ ಹರಾಜುದರವನ್ನು ಆಹ್ವಾನಿಸುತ್ತದೆ. ಪೂರ್ವ ಅರ್ಹತೆ ಇರುವ ಟೆಂಡರುದಾರರಿಂದ ಸ್ವೀಕಾರಗೊಂಡ ಹರಾಜುದರವನ್ನು ಟೆಂಡರು ಸ್ವೀಕಾರ ಪ್ರಾಧಿಕಾರ ಮೌಲ್ಯಮಾಪನಕ್ಕೆ ಪರಿಗಣಿಸುತ್ತದೆ.
ಕರ್ನಾಟಕ ರಾಜ್ಯಪಾಲರ ಪರವಾಗಿ ಮತ್ತು ಈ ಮೂಲಕ ಆದೇಶಿಸಲಾಗುತ್ತದೆ,

                                                                                                ಕೆ. ಆರ್. ಬಡಿಗೇರ
                                                                               ಸರ್ಕಾರದ ಅಧೀನ ಕಾರ್ಯದರ್ಶಿ
                                                     ಲೋಕೋಪಯೋಗಿ ಇಲಾಖೆ (ಹಣಕಾಸು ಘಟಕ)


                                    ಲೋಕೋಪಯೋಗಿ ಸಚಿವಾಲಯ ಕಚೇರಿ
(ಅಧಿಸೂಚನೆ ಸಂಖ್ಯೆ ಪಿಡಬ್ಲ್ಯುಡಿ ೧೫೪ಎಫ್‌ಸಿ-೩/೨೦೦೧(ಭಾಗ-೧), ಬೆಂಗಳೂರು, ದಿನಾಂಕ ೨ನೇ ಏಪ್ರಿಲ್ ೨೦೦೧)

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯ್ದೆ, ೧೯೯೯ (ಕರ್ನಾಟಕ ಕಾಯ್ದೆ ೨೯, ೨೦೦೦) ರ ಪರಿಚ್ಛೇದ ೨೫ರಡಿಯಲ್ಲಿ ನೀಡಲಾದ ಅಧಿಕಾರದ ಪ್ರಕಾರ ಕರ್ನಾಟಕ ಸರ್ಕಾರವು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ನಿಯಮ-೨೦೦೦ಕ್ಕೆ ಇನ್ನೂ ತಿದ್ದುಪಡಿ ತರಲು ಈ ಕೆಳಗಿನ ನಿಯಮಗಳನ್ನು ರೂಪಿಸುತ್ತದೆ. ಅವುಗಳೆಂದರೆ:
೧. ಶೀರ್ಷಿಕೆ ಮತ್ತು ಉಪಕ್ರಮ : ಈ ನಿಯಮಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕ (ತಿದ್ದುಪಡಿ)ನಿಯಮಗಳು, ೨೦೦೧ ಎಂದು ಹೇಳಬಹುದು.
ಅಧಿಕೃತ ಗೆಝೆಟ್ ಪ್ರಕಟಣೆಯಲ್ಲಿ ಪ್ರಕಟಗೊಂಡ ದಿನದಿಂದ ಇವು ಜಾರಿಗೆ ಬರುತ್ತವೆ.
೨. ನಿಯಮ ೨೬ರ ತಿದ್ದುಪಡಿ : ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕ ನಿಯಮ-೨೦೦೦ರ ೨೬ನೇ ನಿಯಮದ (ಮೇಲೆ ತಿಳಿಸಿದ ಮಾದರಿಯಲ್ಲಿ ಈ ನಿಯಮವನ್ನು ಉಲ್ಲೇಖಿಸಬಹುದು) ಉಪನಿಯಮ ೨ರಡಿಯಲ್ಲಿ ಅಂಕಿಗಳು ಮತ್ತು ಅಕ್ಷರಗಳ ಉಲ್ಲೇಖಕ್ಕೆ ಸಂಬಂಧಿಸಿ ಪರಿಚ್ಛೇಧ ೧೨ ಮತ್ತು ಸಂಖ್ಯೆಗಳಿಗಾಗಿ ಪರಿಚ್ಛೇಧ ೧೩ನ್ನು ಬದಲಿಯಾಗಿ ಅಳವಡಿಸಿಕೊಳ್ಳಬಹುದು.
೩. ನಿಯಮ ೨೯ರ ತಿದ್ದುಪಡಿ: ಮೇಲೆ ಹೇಳಿದ ನಿಯಮಗಳಡಿ ಬರುವ ೨೯ನೇನಿಯಮದಲ್ಲಿ ಅಕ್ಷರ ಮತ್ತು ಸಂಖ್ಯೆಗಳಿಗಾಗಿ ಪರಿಚ್ಛೇಧ ೧೫ ಮತ್ತು ಅಕ್ಷರ ಮತ್ತು ಸಂಖ್ಯೆಗಳಿಗಾಗಿ ಪರಿಚ್ಛೇಧ ೧೬ನ್ನು ಬದಲಿಯಾಗಿ ಅಳವಡಿಸಿಕೊಳ್ಳಬಹುದು.

ಕರ್ನಾಟಕ ರಾಜ್ಯಪಾಲರ ಪರವಾಗಿ ಮತ್ತು ಈ ಮೂಲಕ ಆದೇಶಿಸಲಾಗುತ್ತದೆ,
                                                                                                ಕೆ. ಆರ್. ಬಡಿಗೇರ
                                                                               ಸರ್ಕಾರದ ಅಧೀನ ಕಾರ್ಯದರ್ಶಿ
                                                     ಲೋಕೋಪಯೋಗಿ ಇಲಾಖೆ (ಹಣಕಾಸು ಘಟಕ)(ಅಧಿಸೂಚನೆ ಸಂಖ್ಯೆ ಪಿಡಬ್ಲ್ಯುಡಿ೩೮೯ಎಫ್‌ಸಿ-೩/೨೦೦೧ ಬೆಂಗಳೂರು, ದಿನಾಂಕ ೩೦ ಆಗಸ್ಟ್ ೨೦೦೧)

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯ್ದೆ, ೧೯೯೯ (ಕರ್ನಾಟಕ ಕಾಯ್ದೆ ೨೯, ೨೦೦೦) ರ ಪರಿಚ್ಛೇದ ೨೫ರಡಿಯಲ್ಲಿ ನೀಡಲಾದ ಅಧಿಕಾರದ ಪ್ರಕಾರ ಕರ್ನಾಟಕ ಸರ್ಕಾರವು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ನಿಯಮ-೨೦೦೦ಕ್ಕೆ ಇನ್ನೂ ತಿದ್ದುಪಡಿ ತರಲು ಈ ಕೆಳಗಿನ ನಿಯಮಗಳನ್ನು ರೂಪಿಸುತ್ತದೆ. ಅವುಗಳೆಂದರೆ :

೧) ಶೀರ್ಷಿಕೆ ಮತ್ತು ಉಪಕ್ರಮ : ಈ ನಿಯಮಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕ (೩ನೇ ತಿದ್ದುಪಡಿ) ನಿಯಮಗಳು, ೨೦೦೧ಎಂದು ಹೇಳಬಹುದು.
ಅಧಿಕೃತ ಗೆಝೆಟ್ ಪ್ರಕಟಣೆಯಲ್ಲಿ ಪ್ರಕಟಗೊಂಡ ದಿನದಿಂದ ಇವು ಜಾರಿಗೆ ಬರುತ್ತವೆ.

೨) ನಿಯಮ ೨೫ರ ತಿದ್ದುಪಡಿ:  ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕ ನಿಯಮ-೨೦೦೦ದ ನಿಯಮ ೨೫ರಡಿ ಬರುವ ಉಪ ನಿಯಮ ೨ರ ಪ್ರಕಾರ ಈ ಕೆಳಗಿನ ಅವಕಾಶಗಳನ್ನು ಸೇರಿಸಬಹುದು. ಅವುಗಳೆಂದರೆ : ೨೦೦೧ರ ಏಪ್ರಿಲ್ ೧ರಿಂದ ಐದು ವರ್ಷದ ಅವಧಿಗೆ ಅನುಗುಣವಾಗಿ ಸಣ್ಣ ಕೈಗಾರಿಕೆಗಳಿಗೆ ಶೇ ೧೫ರಷ್ಟು ಆದ್ಯತಾ ದರ ನೀಡಲಾಗುತ್ತದೆ. ಇದು ಅತೀ ಕನಿಷ್ಠ ಮೌಲ್ಯವನ್ನು ನಿಗದಿಗೊಳಿಸುವ ವೇಳೆ ೨೦೦೧ ಜೂನ್ ೩೦ನೇ ದಿನಾಂಕದಂದು ಹೊರಡಿಸಲಾದ ಸರ್ಕಾರೀ ಆದೇಶ ಸಂಖ್ಯೆ ಸಿಐ೧೬೭ಎಸ್‌ಪಿಐ ಸೂಚಿಸುವ ಹೊಸ ಉದ್ಯಮ ನೀತಿ-೨೦೦೧-೨೦೦೬ರಕ್ಕೆ ಅನುಗುಣವಾಗಿರುತ್ತದೆ.

ವಿವರಣೆ: ಈ ಅವಕಾಶದ ಉದ್ದೇಶಕ್ಕಾಗಿ ಸಣ್ಣಕೈಗಾರಿಕೆಗಳೆಂದರೆ ಅದು ಒಂದು ಉದ್ಯಮವಾಗಿದ್ದು ಆ ಕೈಗಾರಿಕೆ ಮತ್ತು ಯಂತ್ರೋಪಕರಣಗಳಲ್ಲಿ ಅದರ ಬಂಡವಾಳವು ಸ್ಥಿರ ಆಸ್ತಿಯಾಗಿರಬೇಕು, ಇದು ಮಾಲೀಕತ್ವದ ಷರತ್ತಿನ ಮೇಲೆ ಅಥವಾ ಗುತ್ತಿಗೆಯ ಆಧಾರದ ಮೇಲೆ ಅಥವಾ ಬಾಡಿಗೆ ಆಧಾರದ ಮೇಲೆ ನೂರು ಲಕ್ಷ ರೂಪಾಯಿಗಳನ್ನು ಮೀರಿರಬಾರದು.

ಈ ಮೂಲಕ ಕರ್ನಾಟಕ ಸರ್ಕಾರದ ಪರವಾಗಿ ಆದೇಶಿಸಲಾಗುತ್ತದೆ,

                                                                                               ಕೆ. ಆರ್. ಬಡಿಗೇರ್,

                                                                        ಸರ್ಕಾರದ ಅಧೀನ ಕಾರ್ಯದರ್ಶಿ,
                                              ಲೋಕೋಪಯೋಗಿ ಇಲಾಖೆ (ಹಣಕಾಸು ಘಟಕ)


                                              ಸುತ್ತೋಲೆ ಮತ್ತು ಸ್ಪಷ್ಟೀಕರಣ

                                              ಲೋಕೋಪಯೋಗಿ ಇಲಾಖೆ
                                                          ತಿದ್ದೋಲೆ
ಸಂಖ್ಯೆ ಪಿಡಬ್ಲ್ಯುಡಿ ೧೫೪ಎಫ್‌ಸಿ-೩/೨೦೦೦(ಭಾಗ-೧) ಬೆಂಗಳೂರು, ದಿನಾಂಕ ೧೭ ಜನವರಿ ೨೦೦೧


ವಿಷಯ : ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕ ನಿಯಮ-೨೦೦೦
ಉಲ್ಲೇಖ: ಅಧಿಸೂಚನೆ ಸಂಖ್ಯೆ ಡಿಡಬ್ಲ್ಯುಡಿ ೧೫೪ಎಫ್‌ಸಿ-೩/೨೦೦೦ ದಿನಾಂಕ ೨೪-೧೦-೨೦೦೦, ದಿನಾಂಕ ೨೫-೧೦-೨೦೦೦ದ ಕರ್ನಾಟಕ ವಿಶೇಷ ಗೆಜೆಟ್‌ನಲ್ಲಿ ಪ್ರಕಟಿತ,
ಅಧಿಸೂಚನೆ ಸಂಖ್ಯೆ ಡಿಡಬ್ಲ್ಯುಡಿ ೧೫೪ಎಫ್‌ಸಿ-೩/೨೦೦೦ ದಿನಾಂಕ ೨೪-೧೦-೨೦೦೦, ದಿನಾಂಕ ೨೫-೧೦-೨೦೦೦ದ ಕರ್ನಾಟಕ ವಿಶೇಷ ಗೆಜೆಟ್‌ನ ೪-ಎ ವಿಭಾಗದಲ್ಲಿ ಪ್ರಕಟವಾದ ಅಧಿಸೂಚನೆಯಲ್ಲಿ ಈ ಕೆಳಗಿನ ತಿದ್ದುಪಡಿಯನ್ನು ಗಮನಿಸಬೇಕಾಗುತ್ತದೆ. ಅವುಗಳೆಂದರೆ:

 

ಕ್ರಮ ಸಂಖ್ಯೆ ಪುಟ ಸಂಖ್ಯೆ ಸಾಲು ಸೂಚಿತ ಸಂಖ್ಯೆ  ಬದಲಿ ಸಂಖ್ಯೆ
1 7 19 30 days 60 days

ಈ ಮೂಲಕ ಕರ್ನಾಟಕ ಸರ್ಕಾರದ ಪರವಾಗಿ ಆದೇಶಿಸಲಾಗುತ್ತದೆ
ಕೆ. ಆರ್. ಬಡಿಗೇರ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಲೋಕೋಪಯೋಗಿ ಇಲಾಖೆ (ಹಣಕಾಸು ಘಟಕ)CIRCULAR

No. PWD/33/FC-III/2001 Bangalore, Dated:21st March 2001

                                                        ಸುತ್ತೋಲೆ

               ನಂ. pwd/33/fc-iii /೨೦೦೧/ ಬೆಂಗಳೂರು. ದಿ. ೨೧ ಮಾರ್ಚ್ ೨೦೦೧

ವಿಷಯ:
ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ಪಾರದರ್ಶಕ ಕಾಯ್ದೆ ೧೯೯೯ ಮತ್ತು ನಿಯಮಗಳು ೨೦೦೦ ಕುರಿತಂತೆ ಸ್ಪಷ್ಟೀಕರಣ ಕೆಟಿಪಿಪಿ ಕಾಯ್ದೆ ೧೯೯೯ ಮತ್ತು ನಿಯಮಾವಳಿಗಳು ೨೦೦೦ದ ಕುರಿತಂತೆ ಎಲ್ಲಾ ಸರಕಾರಿ ಇಲಾಖೆಗಳಿಗೂ ಈಗಾಗಲೇ ಮಾಹಿತಿಯಿದ್ದು ಈ ಕುರಿತಾದ ಕೆಲವು ವಿಚಾರಗಳ ಬಗ್ಗೆ ಕೆಲ ಜಿಲ್ಲಾಕಾರಿಗಳು, ಉಪ ಆಯುಕ್ತರು ಮತ್ತು ಇಲಾಖೆಗಳು ಸ್ಪಷ್ಟೀಕರಣ ಕೋರಿದ್ದಾರೆ. ಇದಕ್ಕೆ ಅನ್ವಯವಾಗುವಂತೆ ಕೆಲವು ಸ್ಪಷ್ಟೀಕರಣಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗುತ್ತಿದೆ.

೧. ಟೆಂಡರ್ ಪ್ರಕಟಣೆ ವಿವರಗಳನ್ನೊಳಗೊಂಡ ಪುಸ್ತಿಕೆ ಮುದ್ರಣ ಕುರಿತಂತೆ: ಟೆಂಡರ್‌ಗಳನ್ನು ಪುಸ್ತಿಕೆಯ ರೂಪದಲ್ಲಿ ಪ್ರಕಟಿಸಬೇಕು. ನಿಯಮ ೭ ಮತ್ತು ೮ರ ಅನ್ವಯ ಎಲ್ಲ ಮಾಹಿತಿಗಳನ್ನು ಈ ಪುಸ್ತಿಕೆ ಹೊಂದಿರಬೇಕು. ನಿಯಮ ೫ ಕ್ಕೆ ಅನುಗುಣವಾಗಿ ಪುಸ್ತಿಕೆಯನ್ನು ವಿತರಿಸಬೇಕು. ವೃತ್ತಪತ್ರಿಕೆ ಅಥವಾ ಗಜೆಟ್‌ನಲ್ಲಿ ಈ ಟೆಂಡರ್ ಪ್ರಕಟಿಸಬೇಕೆಂದಿಲ್ಲ. ಟೆಂಡರ್ ಪ್ರಕ್ರಿಯೆ ನಡೆಸುವ ಅಧಿಕಾರಿ ಟೆಂಡರ್ ಪುಸ್ತಿಕೆಗಳನ್ನು ಸರಕಾರಿ ಮುದ್ರಣಾಲಯ ಅಥವಾ ನಿಯಮಗಳಿಗೆ ಅನ್ವಯವಾಗುವಂತೆ ಖಾಸಗಿ ಮುದ್ರಣಾಲಯದಲ್ಲಿ ಮುದ್ರಿಸಬಹುದು.

೨. ಟೆಂಡರ್ ಪುಸ್ತಿಕೆ ಪ್ರಕಟಣೆ: ಕನಿಷ್ಟ ಪ್ರತಿ ವಾರಕ್ಕೊಂದು ಟೆಂಡರ್ ಪುಸ್ತಿಕೆ ಪ್ರಕಟಿಸಬೇಕು. ತುರ್ತು ಸಂಧರ್ಭಗಳಲ್ಲಿ ನಿಯಮ ೪ರ ಉಪನಿಯಮ (೪) ರಂತೆ ವಿಶೇಷ ಪುಸ್ತಿಕೆ ಪ್ರಕಟಿಸಬಹುದು. ಒಂದೊಮ್ಮೆ ಯಾವುದೇ ಟೆಂಡರ್ ಇಲ್ಲದೇ ಹೋದಲ್ಲಿ ಶೂನ್ಯ ವರದಿಯನ್ನು ಪ್ರಕಟಿಸಿ ವಿತರಿಸಬೇಕು.

೩ ಟೆಂಡರ್ ಪುಸ್ತಿಕೆಯಲ್ಲಿನ ವಿಷಯಗಳ ಕುರಿತು: ನಿಯಮ ೯ ರ ಪ್ರಕಾರ ಟೆಂಡರ್ ಕರೆಯುವ ಯಾವುದೇ ಅಧಿಕಾರಿ ಅಥವಾ ಪ್ರಾಧಿಕಾರ ವಿವರಗಳನ್ನು ಯಥಾವತ್ತಾಗಿ ಪ್ರಕಟಿಸಬೇಕು. ಕೆಟಿಪಿಪಿ ಕಾಯ್ದೆಯ ನಿಯಮ ೮ ರ ಸೆಕ್ಷನ್ ೮ ರ ಅನ್ವಯ ಟೆಂಡರ್ ಕರೆದಿರುವ ಅಧಿಕಾರಿ ಮತ್ತು ಟೆಂಡರ್ ಸ್ವೀಕರಿಸುವ ಅಧಿಕಾರಿಯ ವಿವರಗಳಿರಬೇಕು. ಸೆಕ್ಷನ್ ೧೩ ರ ಅನ್ವಯ ಟೆಂಡರ್ ಸ್ವೀಕರಿಸುವ ಅಥವಾ ಸೆಕ್ಷನ್ ೧೩ ರ ಅನ್ವಯ ಟೆಂಡರ್ ತಿರಸ್ಕರಿಸುವ ವಿವರಗಳನ್ನು ಟೆಂಡರ್ ಪುಸ್ತಿಕೆಯಲ್ಲಿ ಪ್ರಕಟಿಸಬೇಕು. ಟೆಂಡರ್ ಪುಸ್ತಿಕೆಯ ಮೊದಲ ಭಾಗ ‘ಎ’ನಲ್ಲಿ ಟೆಂಡರ್ ಕರೆದಿರುವ ಕುರಿತಾದ ವಿವರಗಳು, ‘ಬಿ‘ ವಿಭಾಗದಲ್ಲಿ ಟೆಂಡರ್ ಸ್ವೀಕರಿಸಿದ ವಿವರಗಳು ಮತ್ತು ಭಾಗ ‘ಸಿ‘ ಯಲ್ಲಿ ತಿರಸ್ಕೃತಗೊಂಡ ಟೆಂಡರ್‌ಗಳ ವಿವರಗಳಿರಬೇಕು.

೪. ಟೆಂಡರ್ ಪುಸ್ತಿಕೆ ಮುದ್ರಣ ಮತ್ತು ಅದರ ಖರ್ಚು ವೆಚ್ಚ ನಿರ್ಧಾರ: ಟೆಂಡರ್ ಪುಸ್ತಿಕೆಯ ಮುದ್ರಣ ಮತ್ತು ಇತರ ಖರ್ಚು ವೆಚ್ಚಗಳಿಗೆ ಸರಕಾರ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುತ್ತದೆ. ಪುಸ್ತಿಕೆಯ ಪ್ರತಿಯೊಂದು ಪುಟಕ್ಕೂ ೧ ರೂಪಾಯಿಯಂತೆ ಪುಸ್ತಕದಲ್ಲಿರುವ ಒಟ್ಟು ಪುಟಗಳಿಗ ಅನುಗುಣವಗಿ ಬೆಲೆ ನಿಗದಿಪಡಿಸಲಾಗುತ್ತದೆ.

೫. ಸರಕಾರೀ ಇಲಾಖೆಗಳಿಂದ ೫ ಲಕ್ಷಕ್ಕಿಂತ ಕಡಿಮೆ ಮೊತ್ತದ ಖರೀದಿ, ನೀರಾವರಿ ಸರಬರಾಜು, ಶಾಲಾ ಕಟ್ಟಡ ಇತರ ೨ ಲಕ್ಷಕ್ಕಿಂತ ಕಡಿಮೆ ಮೊತ್ತದ ಕಾಮಗಾರಿಗಳಿಗಾಗಿ, ಸ್ಥಳೀಯ ಸಂಸ್ಥೆಗಳಿಂದ ೧ ಲಕ್ಷಕ್ಕಿಂತ ಕಡಿಮೆ ಮೊತ್ತದ ಖರೀದಿಗಾಗಿ: ಸರಕಾರೀ ಇಲಾಖೆಗಳಿಂದ ೫ ಲಕ್ಷಕ್ಕಿಂತ ಕಡಿಮೆ ಮೊತ್ತದ ಖರೀದಿ, ನೀರಾವರಿ ಸರಬರಾಜು, ಶಾಲಾ ಕಟ್ಟಡ ಇತರ ೨ ಲಕ್ಷಕ್ಕಿಂತ ಕಡಿಮೆ ಮೊತ್ತದ ಕಾಮಗಾರಿಗಳಿಗಾಗಿ, ಸ್ಥಳೀಯ ಸಂಸ್ಥೆಗಳಿಂದ ೧ ಲಕ್ಷಕ್ಕಿಂತ ಕಡಿಮೆ ಮೊತ್ತದ ಖರೀದಿಗಳಿಗೆ ಈಗ ಅಸ್ತಿತ್ವದಲ್ಲಿರುವ ಕಾಯ್ದೆಯ ಸೆಕ್ಷನ್ ೨೬ಕ್ಕೆ ಅನ್ವಯವಾಗುವ ನಿಯಮ/ಪದ್ಧತಿ/ನಡವಳಿಕೆಯನ್ನೇ ಅನುಸರಿಸಬೇಕು. ಮೇಲ್ಕಾಣಿಸಿದ ಮೊತ್ತಕ್ಕಿಂತ ಕಡಿಮೆ ಮೊತ್ತದ ಯಾವುದೇ ಸಂಗ್ರಹಣೆ/ ಖರೀದಿಗೂ ಈ ನಿಯಮಾವಳಿಗಳ ನಿರ್ಬಂಧ ಅನ್ವಯವಾಗುವುದಿಲ್ಲ.

೬. ಸರಕಾರಿ ಇಲಾಖೆಗಳು, ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳು, ನಿಗಮ ಮಂಡಳಿಗಳಿಂದ ಯಾವುದೇ ವಸ್ತು ಅಥವಾ ಸೇವೆಗಳ ಖರೀದಿ: ಕೆಟಿಪಿಪಿ ಕಾಯ್ದೆಯ ಸೆಕ್ಷನ್ ೪(ಡಿ)ರ ಅನ್ವಯ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳ ಮುಖಾಂತರ ಮಾಡುವ ಯಾವುದೇ ಸಂಗ್ರಹಣೆ, ಖರೀದಿಗೆ ಈ ಕಾಯ್ದೆ ಪ್ರಕಟವಾದ ನಂತರ ಎರಡು ವರ್ಷಗಳ ವರೆಗೆ ವಿನಾಯಿತಿ ನೀಡಲಾಗಿದೆ. ಅದರೆ ಈ ಉದ್ದಿಮೆಗಳು ತಮ್ಮ ಉತ್ಪಾದನೆಗಳನ್ನು ಅಥವಾ ಸೇವೆಗಳನ್ನು ಬೇರಾವ ಸಂಸ್ಥೆಗೂ ಗುತ್ತಿಗೆಗೆ ನೀಡದೇ ಸ್ವತ: ನಿರ್ವಹಿಸುವುದನ್ನು ಖಾತರಿ ಪಡಿಸಬೇಕು.

ಉದಾಹರಣೆಗೆ: ಕೆಎಸ್‌ಐಎಂಸಿಗೆ ಉತ್ಪಾದನಾ ಸಾಮರ್ಥ್ಯವಿಲ್ಲ. ಹೀಗಾಗಿ ಈ ಸಮಸ್ಥೆಗೆ ಯಾವುದೇ ವಿನಾಯಿತಿ ಇರುವುದಿಲ್ಲ. ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳೆಂದರೆ ಕೇವಲ ರಾಜ್ಯ ಸರಕಾರಗಳಿಗೆ ಮಾತ್ರವಲ್ಲ. ಕೇಂದ್ರ ಸರಕಾರಗಳಿಗೂ ಇದು ಅನ್ವಯವಾಗುತ್ತದೆ.
೭. ಡಿಜಿಎಸ್‌ಡಿ ಸಂಸ್ಥೆಗಳಿಂದ ಸರಕು ಖರೀದಿ ಮತ್ತು ಎಸ್‌ಪಿಡಿ ನಿಗದಿಪಡಿಸಿರುವ ಗುತ್ತಿಗೆದರ: ಸೆಕ್ಷನ್ ೪(ಎಫ್) ಅನ್ವಯ ವಿನಾಯಿತಿ ಸೌಲಭ್ಯವಿದ್ದು ಡಿಜಿಎಸ್‌ಡಿ ಸಂಸ್ಥೆಗಳಿಂದ ಎಸ್‌ಪಿಡಿ ನಿಗದಿಪಡಿಸಿದ ಗುತ್ತಿಗೆ ದರದ ಅನ್ವಯ ಸರಕು ಮಾತ್ರ ವಿನಾಯಿತಿಗೆ ಅವಕಾಶವಿರುತ್ತದೆ.

೮. ಎಂಪಿಎಲ್‌ಎಡಿ ಯೋಜನೆ ಪ್ರಕಾರ ಕೆಟಿಪಿಪಿ ಕಾಯ್ದೆಯ ಅನ್ವಯ: ಎಂಪಿಎಲ್‌ಎಡಿ ನಿರ್ದೇಶನದ ಅನ್ವಯ ರಾಜ್ಯದಲ್ಲಿ ಜಾರಿ ಇರುವ ಪ್ರಸ್ತುತ ಕಾಯ್ದೆಯ ನಿಯಮಾವಳಿಗಳನ್ನು ಅನುಸರಿಸಬೇಕು. ಹೀಗಾಗಿ ಯಾವುದೇ ಸರಕಾರೀ ಇಲಾಖೆಗಳು ೫ ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿ/ಸಂಗ್ರಹಣೆ/ಸೇವೆ ಪಡೆಯಬೇಕಾದಲ್ಲಿ ಅಥವಾ ಇತರ ಕಾಮಗಾರಿಗಳು ಒಂದು ಲಕ್ಷಕ್ಕಿಂತ ಕಡಿಮೆ ಮೊತ್ತದ್ದಾಗಿದ್ದಲ್ಲಿ ಮುಂದಿನ ಬದಲಾವಣೆವರೆಗೆ ಇದೇ ನಿಯಮಗಳು ಅನ್ವಯವಾಗುತ್ತದೆ. ನೀರು ಸರಬರಾಜು ಅಥವಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಶಾಲಾ ಕಟ್ಟಡಗಳಿಗೆ ಈ ಪರಿಮಿತಿ ೨ ಲಕ್ಷಗಳಾಗಿದ್ದು ಸದ್ಯ ಜಾರಿ ಇರುವ ಕಾಯ್ದೆಯೇ ಅನ್ವಯವಾಗುತ್ತದೆ.

೯. ಕೇಂದ್ರ ಪ್ರಾಯೋಜಿತ ಸ್ವರ್ಣ ಜಯಂತಿ, ಶಹರೀ ರೋಜ್‌ಗಾರ್, ಉದ್ಯೋಗ ಭರವಸೆ ಮುಂತಾದ ಯೋಜನೆಗಳಿಗೆ ಕೆಟಿಪಿಪಿ ಕಾಯ್ದೆ/ನಿಯಮಗಳ ಅನ್ವಯ: ಗುತ್ತಿಗೆದಾರರಿಗೆ ಕಾಮಗಾರಿ/ಸೇವೆ ನೀಡುವುದನ್ನು ಈ ವಿಶೇಷ ಯೋಜನೆಗಳಡಿಯಲ್ಲಿ ನಿರ್ಬಂಧಿಸಲಾಗಿದ್ದಲ್ಲಿ ಕೆಟಿಪಿಪಿ ಕಾಯ್ದೆ ಅನ್ವಯವಾಗುವುದಿಲ್ಲ. ಒಂದೊಮ್ಮೆ ಕೇಂದ್ರ ಪ್ರಾಯೋಜಿತ ಯೋಜನೆಗಳ ನಿರ್ದೇಶನದ ಅನ್ವಯ ಈ ನಿರ್ಬಂಧ ಇಲ್ಲದೆ ಹೋದಲ್ಲಿ ಕೆಟಿಪಿಪಿ ಕಾಯ್ದೆ, ನಿಯಮಗಳೇ ಅನ್ವಯಿಸುತ್ತದೆ.

೧೦. ತುರ್ತು ಸಂಧರ್ಭಗಳಲ್ಲಿ ವಿಶೇಷ ಟೆಂಡರ್ ಪ್ರಕಟಣೆ: ತುರ್ತು ಅವಶ್ಯಕತೆಗಳು ಉಂಟಾದಲ್ಲಿ ಜಿಲ್ಲಾಧಿಕಾರಿ ವಿಶೇಷ ಟೆಂಡರ್ ಕರೆಯುವ ಅವಕಾಶವನ್ನು ನಿಯಮ ೪ರ ಉಪನಿಯಮ (೪)ರ ಅಡಿಯಲ್ಲಿ ನೀಡಲಾಗಿದೆ. ಒಂದೊಮ್ಮೆ ರಾಜ್ಯಮಟ್ಟದ ಟೆಂಡರ್ ಆಗಿದ್ದಲ್ಲಿ ಸರಕಾರದ ಸಂಭಂಧಪಟ್ಟ ಇಲಾಖಾ ಕಾರ್ಯದರ್ಶಿಯ ಅನುಮತಿ ಅಗತ್ಯ.

ಸರಕಾರದ ಎಲ್ಲ ಕಾರ್ಯದರ್ಶಿಗಳು ಮತ್ತು ಇಲಾಖೆಗಳ ಮುಖ್ಯಸ್ಥರು ತಮ್ಮ ವ್ಯಾಪ್ತಿಗೆ ಬರುವ ಎಲ್ಲ ಸಂಗ್ರಹಣೆ/ಖರೀದಿ/ಸೇವೆಗಳನ್ನು ೧೯೯೯ ರ ಕೆಟಿಪಿಪಿ ಕಾಯ್ದೆ ಮತ್ತು ೨೦೦೦ದ ನಿಯಮಗಳಿಗೆ ಅನ್ವಯವಾಗುವಂತೆ ನಿರ್ವಹಿಸಲು ಈ ಮೂಲಕ ವಿನಂತಿಸಲಾಗಿದೆ. ಯಾರೇ ಆದರೂ ಈ ಕಾಯ್ದೆಯನ್ನು ಉಲ್ಲಂಘಿಸಿದಲ್ಲಿ ಕಾಯ್ದೆಯ ಸೆಕ್ಷನ್ ೨೩ ರ ಅನ್ವಯ ದಂಡ ತೆರಲು ಬದ್ಧರಾಗಿರುತ್ತಾರೆ.

ಸಿ.ಗೋಪಾಲ ರೆಡ್ಡಿ
ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆ

ಅಧಿಸೂಚನೆ

No. PWD 513 FC –III ಬೆಂಗಳೂರು, ದಿ. ೨೯ ಅಕ್ಟೋಬರ್೨೦೦೧

ವಿಷಯ;
ಕೆಟಿಪಿಪಿ ಕಾಯ್ದೆ ೧೯೯೯ ಮತ್ತು ಕೆಟಿಪಿಪಿ ನಿಯಮಾವಳಿ ೨೦೦೦ ಕಾಯ್ದೆಯ ಹೊಸ ತಿದ್ದುಪಡಿಗಳ ಕುರಿತು ಸ್ಪಷ್ಟೀಕರಣ
ಉಲ್ಲೇಖ: ಸುತ್ತೊಲೆ ಸಂಖ್ಯೆ ಪಿಡಬ್ಲೂಡಿ ೩೩ಎಫ್‌ಸಿ-ಐಡಬ್ಲು ೨೦೦೧ ದಿ.೨೧.೦೩.೨೦೦೧
ಕರ್ನಾಟಕ ಸಾರ್ವಜನಿಕ ಸಂಗ್ರಹಣ ಪಾರದರ್ಶಕ ಕಾಯ್ದೆ ೧೯೯೯ ಅಕ್ಟೋಬರ್ ೪ ೨೦೦೦ ದಿಂದ ಜಾರಿಯಲ್ಲಿದ್ದು ಸರಕಾರಿ ಇಲಾಖೆಗಳು, ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಈ ಕುರಿತು ಮಾಹಿತಿ ಇದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣ ಪಾರದರ್ಶಕ ಕಾಯ್ದೆ ೧೯೯೯ ನ್ನು ಕರ್ನಾಟಕ ಗಜೆಟ್‌ನಲ್ಲಿ (ವಿಭಾಗ - IV-A) ದಿ.೨೪.೧೦.೨೦೦೦ ದಂದು ಪ್ರಕಟಿಸಲಾಗಿದ್ದು ಸುತ್ತೊಲೆ ಸಂಖ್ಯೆ ಪಿಡಬ್ಲೂಡಿ ೩೩ಎಫ್‌ಸಿ-ಐಡಬ್ಲು ೨೦೦೧ ದಿ.೨೧.೦೩.೨೦೦೧ರ ಮೂಲಕ ಹಣಕಾಸು ಇಲಾಖೆ ಕೆಲವು ಸ್ಪಷ್ಟೀಕರಣಗಳನ್ನು ನೀಡಿದೆ.
೨. ಕೆಟಿಪಿಪಿ ಕಾಯ್ದೆ ೧೯೯೯ಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡಲಾಗಿದ್ದು ಕೆಟಿಪಿಪಿ (ತಿದ್ದುಪಡಿ) ಕಾಯ್ದೆ ೨೦೦೧, ಅಧಿಸೂಚನೆ ಸಂಖ್ಯೆ ೨೦೦೧. ದಿ೨೫.೦೮.೨೦೦೧ ವಿಶೇಷ ಗಜೆಟ್ ದಿ.೨೫-೦೮-೨೦೦೧ರಲ್ಲಿ ಪ್ರಕಟವಾಗಿರುತ್ತದೆ. ಈ ತಿದ್ದುಪಡಿ ಕಾಯ್ದೆಯಲ್ಲಿ ಸೆಕ್ಷನ್ ೪ರ ಉಪವಾಕ್ಯ (ಈ)ಯನ್ನು ಹೊಸ ಉಪವಾಕ್ಯ (ಈ) ಮತ್ತು (ಈಈ) ಎಂದು ಬದಲಾಯಿಸಲಾಗಿದೆ. ಈ ತಿದ್ದುಪಡಿ ಕುರಿತು ಸಂಗ್ರಹಣಾ ಪ್ರಾಧಿಕಾರಗಳಿಗೆ ಸೂಚನೆ ನೀಡಲಾಗಿದೆ.

೩. ಸೆಕ್ಷನ್ ೪ರ ಹೊಸ ನಿಯಮ (ಈ) ಕೆಳಕಂಡ ಸಂಧರ್ಭಗಳಲ್ಲಿ ಅನ್ವಯವಾಗುವುದಿಲ್ಲ.
ಸರಕಾರೀ ಇಲಾಖೆ, ರಾಜ್ಯ ಸರಕಾರೀ ಅಧೀನ ಸಂಸ್ಥೆಗಳಾದ ನಿಗಮ, ಮಂಡಳಿ, ಕಾರ್ಪರೇಷನ್ ಅಥವಾ ಸರಕಾರ- ಜಿಲ್ಲಾ ಪಂಚಾಯತ್-ನಗರಸಭೆ, ಪುರಸಭೆ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಮತ್ತು ಬಯಲುಸೀಮೆ ಅಭಿವೃದ್ಧಿ ಮಂಡಳಿಗಳು ಮಾಡುವ ಖರೀದಿ, ಸಂಗ್ರಹಣೆ, ೧) ೫ ಲಕ್ಷಕ್ಕೂ ಮೀರದ ಯಾವುದೇ ನಿರ್ಮಣ ಕಾಮಗಾರಿ ೨) ವಸ್ತು/ಸೇವೆ, ಕಟ್ಟಡ ಕಾಮಗಾರಿಗೆ ಹೊರತಾಗಿ ಒಟ್ಟು ಕಾಮಗಾರಿ ಮೊತ್ತ ೧ ಲಕ್ಷಕ್ಕಿಂತ ಮೀರದೇ ಹೋದಲ್ಲಿ
೪. ಸೆಕ್ಷನ್ ೪ರ ನಿಯಮ (ಈಈ) ಕೆಳಕಂಡ ಸಂಧರ್ಭಗಳಲ್ಲಿ ಅನ್ವಯವಾಗುವುದಿಲ್ಲ
ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಪಟ್ಟಣ ಪಂಚಾಯತ್ ಅಥವಾ ಪುರಸಭೆ, ಅಥವಾ ನಗರಸಭೆ ೧. ಕಿರು ನೀರು ಸರಬರಾಜು ಯೋಜನೆ ಅಥವಾ ಶಾಲೆಗಳ ನಿರ್ಮಾಣ. ಈ ಕಾಮಗಾರಿಗಳ ಖರೀದಿ/ಸಂಗ್ರಹಣಾ ಮೊತ್ತ ೨ ಲಕ್ಷ ಮೀರದಲ್ಲಿ, ಈ ಉದ್ದೇಶದ ಸಂಗ್ರಹಣೆ/ಖರೀದಿ ೧ ಲಕ್ಷಕ್ಕಿಂತ ಮೀರದಲ್ಲಿ.
ತಿದ್ದುಪಡಿಯ ಬಳಿಕ ಕೆಲವು ಸರಕಾರೀ ಇಲಾಖೆಗಳು/ಏಜೆನ್ಸಿಗಳು ಕೆಳಕಂಡಂತೆ ಕೆಲವು ಸಷ್ಟೀಕರಣಗಳನ್ನು ಕೋರಿದ್ದವು.

೧. ತಿದ್ದುಪಡಿ ಮಾಡಲಾದ ಕಾಯ್ದೆಯಡಿಯಲ್ಲಿ ಕೆಲವು ಸಣ್ಣ ಪುಟ್ಟ ಕಾಮಗಾರಿ ಕೈಗೊಳ್ಳಬಹುದೇ?

೨. ತಿದ್ದುಪಡಿ ಮಾಡಲಾದ ಕಾಯ್ದೆಯಲ್ಲಿ ನಮೂದಿಸಲಾದ ವೆಚ್ಚದ ಮಿತಿಗನುಗುಣವಾಗಿ ಕೆಲವು ಇಲಾಖಾ ಕಾಮಗಾರಿಗಳನ್ನು ಕೈಗೊಳ್ಳಬಹುದೇ?

೩. ಮೇಲ್ಕಂಡ ಮಿತಿಗೆ ಅನುಗುಣವಾಗಿ ಖರೀದಿ/ಸಂಗ್ರಹಣೆ ಮಾಡಬೇಕಿದ್ದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಬೇಕೆ? ಕೆಟಿಪಿಪಿ ಕಾಯ್ದೆ ಪ್ರಕಾರ ಟೆಂಡರ್ ಪ್ರಕಟಣೆ ಮತ್ತಿತರ ಪ್ರಕ್ರಿಯೆಗೆ ವಿನಾಯಿತಿ ನೀಡಲಾಗಿದೆಯೇ?
೪. ಕಾಯ್ದೆಯಲ್ಲಿ ಸೂಚಿಸಿರುವಂತೆ ೫ಲಕ್ಷ, ಎರಡು ಲಕ್ಷಕ್ಕಿಂತ ಕಡಿಮೆ ಮೊತ್ತದ ಕಾಮಗಾರಿಗಳಿಗೆ, ಸಂಗ್ರಹಣೆ/ಖರೀದಿಗೆ ಅನುಸರಿಸಬೇಕಾದ ನಿಯಮಗಳೇನು?

ಮಂಡಳಿಗಳು ಮಾಡುವ ಖರೀದಿ, ಸಂಗ್ರಹಣೆ, ೧. ೫ ಲಕ್ಷಕ್ಕೂ ಮೀರದ ಯಾವುದೇ ನಿರ್ಮಣ ಕಾಮಗಾರಿ ೨. ವಸ್ತು/ಸೇವೆ, ಕಟ್ಟಡ ಕಾಮಗಾರಿಗೆ ಹೊರತಾಗಿ ಒಟ್ಟು ಕಾಮಗಾರಿ ಮೊತ್ತ ೧ ಲಕ್ಷಕ್ಕಿಂತ ಮೀರದೇ ಹೋದಲ್ಲಿ

೪. ಸೆಕ್ಷನ್ ೪ರ ನಿಯಮ (ಈಈ) ಕೆಳಕಂಡ ಸಂದಭಗಳಲ್ಲಿ ಅನ್ವಯವಾಗುವುದಿಲ್ಲ
ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಪಟ್ಟಣ ಪಂಚಾಯತ್ ಅಥವಾ ಪುರಸಭೆ ಅಥವಾ ನಗರಸಭೆ ೧. ಕಿರು ನೀರು ಸರಬರಾಜು ಯೋಜನೆ ಅಥವಾ ಶಾಲೆಗಳ ನಿರ್ಮಾಣ. ಈ ಕಾಮಗಾರಿಗಳ ಖರೀದಿ/ಸಂಗ್ರಹಣಾ ಮೊತ್ತ ೨ ಲಕ್ಷ ಮೀರದಲ್ಲಿ, ಈ ಉದ್ದೇಶದ ಸಂಗ್ರಹಣೆ/ಖರೀದಿ ೧ ಲಕ್ಷಕ್ಕಿಂತ ಮೀರದಲ್ಲಿ.

೫. ತಿದ್ದುಪಡಿಯ ಬಳಿಕ ಕೆಲವು ಸರಕಾರೀ ಇಲಾಖೆಗಳು/ಏಜೆನ್ಸಿಗಳು ಕೆಳಕಂಡಂತೆ ಕೆಲವು ಸ್ಪಷ್ಟೀಕರಣಗಳನ್ನು ಕೋರಿದ್ದವು.

೧. ತಿದ್ದುಪಡಿ ಮಾಡಲಾದ ಕಾಯ್ದೆಯಡಿಯಲ್ಲಿ ಕೆಲವು ಸಣ್ಣ ಪುಟ್ಟ ಕಾಮಗಾರಿ ಕೈಗೊಳ್ಳಬಹುದೇ?

೨. ತಿದ್ದುಪಡಿ ಮಾಡಲಾದ ಕಾಯ್ದೆಯಲ್ಲಿ ನಮೂದಿಸಲಾದ ವೆಚ್ಚದ ಮಿತಿಗನುಗುಣವಾಗಿ ಕೆಲವು ಇಲಾಖಾ ಕಾಮಗಾರಿಗಳನ್ನು ಕೈಗೊಳ್ಳಬಹುದೇ?

೩. ಮೇಲ್ಕಂಡ ಮಿತಿಗೆ ಅನುಗುಣವಾಗಿ ಖರೀದಿ/ಸಂಗ್ರಹಣೆ ಮಾಡಬೇಕಿದ್ದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಬೇಕೆ? ಕೆಟಿಪಿಪಿ ಕಾಯ್ದೆ ಪ್ರಕಾರ ಟೆಂಡರ್ ಪ್ರಕಟಣೆ ಮತ್ತಿತರ ಪ್ರಕ್ರಿಯೆಗೆ ವಿನಾಯಿತಿ ನೀಡಲಾಗಿದೆಯೇ?

೪. ಕಾಯ್ದೆಯಲ್ಲಿ ಸೂಚಿಸಿರುವಂತೆ ೫ಲಕ್ಷ ರೂ., ಎರಡು ಲಕ್ಷಕ್ಕಿಂತ ಕಡಿಮೆ ಮೊತ್ತದ ಕಾಮಗಾರಿಗಳಿಗೆ, ಸಂಗ್ರಹಣೆ/ಖರೀದಿಗೆ ಅನುಸರಿಸಬೇಕಾದ ನಿಯಮಗಳೇನು?

೬. ಮೇಲ್ಕಂಡ ಅಂಶಗಳನ್ನು ಪರಿಶೀಲಿಸಲಾಯಿತು ಮತ್ತು ಈ ಸ್ಪಷ್ಟೀಕರಣಗಳನ್ನು ನೀಡಲಾಯಿತು.

೧. ಕೆಟಿಪಿಪಿ ಕಾಯ್ದೆಯ ೧೯೯೯ ಎಸ್೨೬ರ ಅಂಶಗಳು ಈ ಕೆಳಗಿನಂತಿವೆ.
“ಈ ಕಾಯ್ದೆಯ ಅನುಷ್ಠಾನಕ್ಕೆ ಮುನ್ನ ಜಾರಿಯಲ್ಲಿದ್ದ ಎಲ್ಲ ನಿಯಮಾವಳಿಗಳು, ನಿರ್ಬಂಧಗಳು, ಕಛೇರಿ ಅಧಿಸೂಚನೆಗಳು, ಬೈಲಾಗಳು, ಅಧಿಕೃತ ಟಿಪ್ಪಣಿಗಳು, ಆದೇಶಗಳು, ಸುತ್ತೋಲೆಗಳು ಈ ಕಾಯ್ದೆ ಅನುಷ್ಠಾನಕ್ಕೆ ಬಂದರೂ ಜಾರಿಯಲ್ಲಿರುತ್ತವೆ. ಹೊಸ ಕಾಯ್ದೆಯ ಕೆಲ ಅಂಶಗಳು ಈ ಹಿಂದಿನ ಮೇಲ್ಕಾಣಿಸಿದ ವಿಷಯಗಳಿಗೆ ಸಂಬಂಧಿಸಿದ್ದರೂ ಕೂಡ ಈ ಹಿಂದಿನ ನಿಯಮಾವಳಿಗಳು, ಆದೇಶಗಳು, ಸುತ್ತೋಲೆ, ಟಿಪ್ಪಣಿಗಳ ಅಂಶಗಳು ಕೂಡ ಜಾರಿಯಲ್ಲಿದ್ದು ಅನ್ವಯವಾಗುತ್ತವೆ. ಒಂದೊಮ್ಮೆ ಈ ಕಾಯ್ದೆಯಲ್ಲಿ ಮೇಲ್ಕಂಡ ವಿಷಯಗಳಲ್ಲಿ ಅಥವಾ ಷರತ್ತುಗಳಲ್ಲಿ ಯಾವುದೇ ಬದಲಾವಣೆ ಅಥವಾ ತಿದ್ದುಪಡಿ ಮಾಡಿದ್ದಲ್ಲಿ, ಇದೀಗ ಜಾರಿಗೆ ಬಂದಿರುವ ಕಾಯ್ದೆಗೆ ಈ ಹಿಂದಿನ ವಿಷಯಗಳು ಅಸಂಗತವೆನಿಸಿದಲ್ಲಿ ಅಥವಾ ಹೊಂದಾಣಿಕೆಯಾಗದೇ ಹೋದಲ್ಲಿ ಅಥವಾ ಈ ಕಾಯ್ದೆಯ ಅನ್ವಯ ಆ ವಿಷಯಗಳುನ್ನು ರದ್ದುಪಡಿಸದೇ ಹೋದಲ್ಲಿ ಅಥವಾ ಈ ಕಾಯ್ದೆಯಲ್ಲಿ ಆ ಅಂಶಗಳಿಗೆ ತಿದ್ದುಪಡಿ ಮಾಡಿದಲ್ಲಿ, ಈ ಕಾಯ್ದೆಯ ಯಾವುದೇ ನಿಯಮಾವಳಿಗಳ ಪ್ರಕಾರ ಕ್ರಮ ಕೈಗೊಳ್ಳದೇ ಹೋದಲ್ಲಿ, ಈ ಕಾಯ್ದೆಯ ಅನ್ವಯ ಅಧಿಸೂಚನೆ, ಆದೇಶ, ನಿಯಮಗಳನ್ನು ಹೊರಡಿಸದೇ ಹೋದಲ್ಲಿ ಈ ಹಿಂದಿನ ಕಾಯ್ದೆಯ ನಿಯಮಗಳೇ ಜಾರಿಯಲ್ಲಿರುತ್ತವೆ.”
ಕೆಟಿಪಿಪಿ ಕಾಯ್ದೆ ಅನ್ವಯವಾಗದ ಸಂದರ್ಭಗಳಲ್ಲಿ ಈ ಕಾಯ್ದೆ ಜಾರಿಗೆ ಬರುವ ಮುನ್ನ ಜಾರಿಯಲ್ಲಿರುವ ನಿಯಮಗಳು ಅಥವಾ ಪ್ರಕ್ರಿಯೆಗಳು ಅನ್ವಯವಾಗುತ್ತವೆ.ಹೀಗಾಗಿ ೫ಲಕ್ಷಕ್ಕಿಂತ ಕಡಿಮೆ ಅಥವಾ ೨ಲಕ್ಷಕ್ಕಿಂತ ಕಡಿಮೆ ಮೊತ್ತದ ಕಾಮಗಾರಿಗಳ ಸಂದರ್ಭಗಳಲ್ಲಿ ಈ ಮೊದಲಿಗೆ ಜಾರಿಯಲ್ಲಿದ್ದ ಕ್ರಮಗಳನ್ನೇ ಅಂದರೆ ಈ ಕಾಯ್ದೆ ಜಾರಿ ಬರುವ ಮುನ್ನ ಅನ್ವಯವಾಗುತ್ತಿದ್ದ ಕ್ರಮಗಳನ್ನೆ ಅನುಸರಿಸಬೇಕು. ಪಿಡಬ್ಲೂಡಿ ಸಂಹಿತೆ ಮತ್ತು ಸ.ಆ.ಸಂ. ಪಿಡಬ್ಲೂಡಿ ೧ ಎಫ್‌ಸಿಆರ್ ೯೩,ದಿ.೧೫-೧೨-೧೯೯೪ ರಲ್ಲಿ ನಮೂದಿಸಿರುವಂತೆ ಒಂದು ಲಕ್ಷಕ್ಕಿಂತ ಕಡಿಮೆ ಮೊತ್ತದ ಬಿಡಿ ಕಾಮಗಾರಿಗಳಿಗೆ ಮಾತ್ರ ಅವಕಾಶವಿರುತ್ತದೆ. ಹೀಗಿದ್ದರೂ ೫ ಅಥವಾ ೨ಲಕ್ಷಕ್ಕಿಂತ ಕಡಿಮೆ ಮೊತ್ತದ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಬೇಕಾದಲ್ಲಿ, ೧ ಲಕ್ಷಕ್ಕಿಂತ ಕಡಿಮೆ ಮೊತ್ತದ ಸರಕು ಸಂಗ್ರಹಣೆ ಅಥವಾ ಸೇವೆ ಪಡೆಯಬೇಕಾದಲ್ಲಿ ಸಾಮಾನ್ಯ ಟೆಂಡರ್ ಪ್ರಕ್ರಿಯೆಯನ್ನು ಅನುಸರಿಸಬೇಕು.

೧೧. ಯಾವುದೇ ನಿರ್ಬಂಧ ಇಲ್ಲದೇ ಹೋದಲ್ಲಿ ಸಂಬಂಧಪಟ್ಟ ಇಲಾಖೆಗಳು, ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳು, ಸ್ಥಳೀಯ ಸಂಸ್ಥೆಗಳು ೫ಲಕ್ಷ ಅಥವಾ ೨ ಲಕ್ಷದ ವರೆಗಿನ ಇಲಾಖಾವಾರು ನಿರ್ಮಾಣ ಕಾಮಗಾರಿ ಕೈಗೊಳ್ಳಬಹುದು. ಉದಾಹರಣೆಗೆ ಜಲ ಸಂನ್ಮೂಲ ಇಲಾಖೆ ಇಲಾಖಾವಾರು ಕಾಮಗಾರಿಗಳನ್ನು ನಿಷೇಧಿಸಿದಲ್ಲಿ.

೧೧೧. ಕೆ.ಟಿ.ಪಿ.ಪಿ.ಯ ಕೆಲವು ಸೌಲಭ್ಯಗಳಿಂದ ಮಾತ್ರ ತಿದ್ದುಪಡಿ ಕಾಯ್ದೆ ರಿಯಾಯಿತಿ ನೀಡುತ್ತದೆ .ಆ ರಿಯಾಯಿತಿಗಳ ವಿವರ ಈ ಕೆಳಗಿನಂತಿದೆ.

೧. ೫ಲಕ್ಷದವರೆಗಿನ ಕಾಮಗಾರಿ (ಇಲಾಖೆಗಳು, ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳು, ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಮೇಲ್ಕಾಣಿಸಿದ ಪ್ಯಾರಾ ೩ ರಲ್ಲಿ ನ ಏಜೆನ್ಸೀಸ್)

೨. ಕಿರು ನೀರು ಸರಬರಾಜು ಯೋಜನೆಗಳು, ೨ ಲಕ್ಷದವರೆಗಿನ ಶಾಲಾ ಕಟ್ಟಡ ಕಾಮಗಾರಿ. (ಮೇಲ್ಕಾಣಿಸಿದ ಪ್ಯಾರಾ ೪ರಲ್ಲಿ ಕಾಣಿಸಿದ ಸ್ಥಳಿಯಾಡಳಿತ ಸಂಸ್ಥೆಗಳು)

೩.೧ ಲಕ್ಷದ ವರೆಗಿನ ಸರಕು ಅಥವಾ ಸೇವೆ ಸಂಗ್ರಹಣೆ. (ಸರಕಾರೀ ಇಲಾಖೆಗಳು, ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳು, ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಮೇಲ್ಕಾಣಿಸಿದ ಪ್ಯಾರಾ ೩ ಮತ್ತು ೪ ರಲ್ಲಿ ಕಾಣಿಸಿದ ಸಂಸ್ಥೆಗಳು). ಕೆಟಿಪಿಪಿ ಕಾಯ್ದೆ/ನಿಯಮಗಳನ್ನು ಅನುಸರಿಸದೇ ಸರಕಾರೀ ಇಲಾಖೆಗಳು ಮತ್ತು ಇತರ ಸಂಸ್ಥೆಗಳು ೧ಲಕ್ಷದವರೆಗಿನ ಮೊತ್ತದ ವಸ್ತುಗಳನ್ನು ಖರೀದಿಸಬಹುದು.

ಕೆಟಿಪಿಪಿ ಕಾಯ್ದೆ ೧೯೯೯ರ ಸೆಕ್ಷನ್ ೪ (ಈ) ಮತ್ತು ೪ (ಈಈ) ಮತ್ತು ಕೆಟಿಪಿಪಿ (ತಿದ್ದುಪಡಿ) ಕಾಯ್ದೆ ೨೦೦೧ ರ ಅನ್ವಯ ಷರತ್ತುಗಳನ್ನು ಲಗತ್ತಿಸಲಾಗಿದೆ.
ಮೇಲ್ಕಂಡ ಸಂದರ್ಭಗಳಲ್ಲಿ ಸರಕಾರೀ ಇಲಾಖೆಗಳು, ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳು, ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಮೇಲ್ಕಾಣಿಸಿದ ಇತರ ಸಂಸ್ಥೆಗಳು ಕೆಟಿಪಿಪಿ ಜಾರಿಗೆ ಮುನ್ನ ಇದ್ದ ಸಾಮಾನ್ಯ ನಿಯಮಗಳು ಮತ್ತು ಟೆಂಡರ್ ಪ್ರಕ್ರಿಯೆಯನ್ನು /ಖರೀದಿ ಕ್ರಮವನ್ನು ಅನುಸರಿಸಬೇಕು. ಆದರೆ ಕೆಟಿಪಿಪಿ ಕಾಯ್ದೆ/ನಿಯಮದ ಕೆಳಕಾಣಿಸಿದ ಷರತ್ತಿನಿಂದ ಮಾತ್ರ ವಿನಾಯಿತಿ ನೀಡಲಾಗಿದೆ.
೪. ಮೇಲ್ಕಾಣಿಸಿದ ಸಂದರ್ಭಗಳಲ್ಲಿ ((iii)ರ ೧.೨.೩ ಕೆಟಿಪಿಪಿ ಕಾಯ್ದೆ/ನಿಯಮಾವಳಿಗಳ ಷರತ್ತುಗಳು ಮಾತ್ರ ಅನ್ವಯವಾಗುವುದಿಲ್ಲ. ಆದರೆ ಕೆಟಿಪಿಪಿ ಕಾಯ್ದೆ/ನಿಯಮ ಆರಂಭಕ್ಕೆ ಮುನ್ನ ಸಾಮಾನ್ಯ ಇಲಾಖಾ ನಿಯಮಗಳು, ನೀತಿ ಸಂಹಿತೆ-ಷರತ್ತು, ಸಾಮಾನ್ಯ ಟೆಂಡರ್ ಪ್ರಕ್ರಿಯೆಯನ್ನೇ ಅನುಸರಿಸಬೇಕು.

ಸಿ. ಗೋಪಾಲ ರೆಡ್ಡಿ
ಎಸಿಎಸ್ ಮತ್ತು ಮುಖ್ಯ ಕಾರ್ಯದರ್ಶಿ , ಹಣಕಾಸು ಇಲಾಖೆ
ಹಣಕಾಸು ಇಲಾಖೆ.


.

೧೯೯೯ರ ಕೆಪಿಟಿಸಿಎಲ್ ಕಾಯ್ದೆಯ ೪(ಇ)ನೇ ವಿಧಿ ಮತ್ತು ಹಾಗೂ ೨೦೦೧ರ ಕೆಟಿಪಿಪಿ (ತಿದ್ದುಪಡಿ) ಕಾಯ್ದೆಯ ಸೆಕ್ಷನ್ ೪ (ಇ)ಮತ್ತು ೪ (ಇಇ) ಅಡಿಯಲ್ಲಿ ಇರುವ ಅವಕಾಶಗಳಿಗೆ ಸಂಬಂಧಿಸಿದ ತುಲನಾತ್ಮಕ ನಕ್ಷೆ

ಸಂಗ್ರಹಣಾ ಸಂಸ್ಥೆಗಳು

೧೯೯೯ ಕೆಟಿಪಿಪಿ ಕಾಯ್ದೆಯ ೪(೨)ನೇ ಅಡಿ ಇರುವ ಅವಕಾಶ ೨೦೦೧ರ ಕೆಟಿಟಿಪಿ (ತಿದ್ದುಪಡಿ) ಕಾಯ್ದೆಯ ಸೆಕ್ಷನ್೪ (ಇ) ಮತ್ತು ೪ (ಇಇ) ಅನ್ವಯ ಇರುವ ಅವಕಾಶ
  ಸಿವಿಲ್ ನಿರ್ಮಾಣ ಕಾಮಗಾ ಸರಕು ಸಂಗ್ರಹಣೆ ಸಿವಿಲ್ ನಿರ್ಮಾಣ ಕಾಮಗಾ ಸರಕು ಸಂಗ್ರಹಣೆ
ಸರ್ಕಾರಿ ಇಲಾಖೆ ೧ ಲಕ್ಷ ರೂ. ತನಕ ೧ ಲಕ್ಷ ರೂ. ತನಕ ೧ ಲಕ್ಷ ರೂ. ತನಕ ೧ ಲಕ್ಷ ರೂ. ತನಕ

ರಾಜ್ಯ ಪಿಎಸ್‌ಎಸ್‌ಯು, ಮಂಡಳಿ, ನಿಗಮ

Nil Nil ೫ ಲಕ್ಷ ರೂ. ತನಕ ೧ ಲಕ್ಷ ರೂ. ತನಕ

ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ನಗರಸಭೆಗಳು, ಎಚ್‌ಕೆಡಿಬಿ,ಎಂಎಡಿಬಿ, ಬಿಎಸ್‌ಡಿಬಿ

೨ ಲಕ್ಷ ರೂ. ತನಕ (ಕಿರು ನೀರು ಪೂರೈಕೆ ಯೋಜನೆ ಮತ್ತು ಶಾಲಾ ಕಟ್ಟಡಗಳಿಗೆ) ಇತರ ಕಾಮಗಾರಿಗೆ ೧ಲಕ್ಷ ರೂ. ತನಕ ೧ ಲಕ್ಷ ರೂ. ತನಕ ೫ ಲಕ್ಷ ರೂ. ತನಕ ೧ ಲಕ್ಷ ರೂ. ತನಕ
(ಗ್ರಾಮಪಂಚಾಯತ್, ತಾಲೂಕು ಪಂ, ಪಟ್ಟಣ ಪಂ, ಪುರಸಭೆಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳು ೨ ಲಕ್ಷ ರೂ. ತನಕ (ಕಿರು ನೀರು ಪೂರೈಕೆ ಯೋಜನೆ ಮತ್ತು ಶಾಲಾ ಕಟ್ಟಡಗಳಿಗೆ) ಇತರ ಕಾಮಗಾರಿಗೆ ೧ಲಕ್ಷ ರೂ. ತನಕ ೧ ಲಕ್ಷ ರೂ. ತನಕ ೫ ಲಕ್ಷ ರೂ. ತನಕ (ಕಿರು ನೀರು ಪೂರೈಕೆ ಯೋಜನೆ ಮತ್ತು ಶಾಲಾ ಕಟ್ಟಡಗಳಿಗೆ) ಇತರ ಕಾಮಗಾರಿಗೆ ೧ಲಕ್ಷ ರೂ. ತನಕ ೨ ಲಕ್ಷ ರೂ. ತನಕ


ಅಧಿಸೂಚನೆ

ನಂ.ಪಿಡಬ್ಲೂಡಿ ೫೧೩ ಎಫ್‌ಸಿ-೧೧೧/೨೦೦೧ ಬೆಂಗಳೂರು, ದಿನಾಂಕ ೨೯ ಅಕ್ಟೋಬರ್ ೨೦೦೧
 

ವಿಷಯ: ಕೆಟಿಪಿಪಿ ಕಾಯ್ದೆ ೧೯೯೯ ಮತ್ತು ಕೆಟಿಪಿಪಿ ನಿಯಮಗಳು ೨೦೦೦, ಹೊಸ ತಿದ್ದುಪಡಿಗಳ ಕುರಿತು ಸ್ಪಷ್ಟೀಕರಣ.
ಉಲ್ಲೇಖ: ಸುತ್ತೋಲೆ ಸಂ.ಪಿ.ಡಬ್ಲ್ಯುಡಿ೩೩ಎಫ್‌ಸಿ-೧೧ಯು೨೦೦೧. ದಿ.೨೧. ೦೩. ೨೦೦೧
ಸರಕಾರಿ ಇಲಾಖೆಗಳು, ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳು. ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ೪ ಅಕ್ಟೋಬರ್ ೨೦೦೦ದಿಂದ ಜಾರಿಗೆ ಬಂದಿರುವ ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ಪಾರದರ್ಶಕ ಕಾಯ್ದೆ ೧೯೯೯ರ ಬಗ್ಗೆ ಅರಿವು ಇದೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಣ ಪಾರದರ್ಶಕ ಕಾಯ್ದೆ ೧೯೯೯ನ್ನು ಕರ್ನಾಟಕ ಗಜೆಟ್‌ನಲ್ಲಿ ಭಾಗ -೪-ಎ) ದಿ.೨೪.೧೦.೨೦೦೦ ದಂದು ಪ್ರಕಟಿಸಲಾಗಿದ್ದು ಸುತ್ತೊಲೆ ಸಂಖ್ಯೆ ಪಿಡಬ್ಲೂಡಿ ೩೩ಎಫ್‌ಸಿ-೧೧೧/೨೦೦೧ ದಿ.೨೧.೦೩.೨೦೦೧ ರ ಮೂಲಕ ಹಣಕಾಸು ಇಲಾಖೆ ಕೆಲವು ಸ್ಪಷ್ಟೀಕರಣಗಳನ್ನು ನೀಡಿದೆ.
೨. ಕೆಟಿಪಿಪಿ ಕಾಯ್ದೆ ೧೯೯೯ಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡಲಾಗಿದ್ದು ಕೆಟಿಪಿಪಿ (ತಿದ್ದುಪಡಿ) ಕಾಯ್ದೆ ೨೦೦೧, ಅಧಿಸೂಚನೆ ಸಂಖ್ಯೆ ೨೦೦೧.ದಿ ೨೫.೦೮.೨೦೦೧ ವಿಶೇಷ ಗಜೆಟ್ ದಿ. ೨೫-೦೮-೨೦೦೧ರಲ್ಲಿ ಪ್ರಕಟವಾಗಿರುತ್ತದೆ. ಈ ತಿದ್ದುಪಡಿ ಕಾಯ್ದೆಯಲ್ಲಿ ಸೆಕ್ಷನ್ ೪ರ
ಉಪವಾಕ್ಯ(ಈ)ಯನ್ನು ಹೊಸ ಉಪವಾಕ್ಯ (ಈ) ಮತ್ತು (ಈಈ) ಎಂದು ಬದಲಾಯಿಸಲಾಗಿದೆ.
೩. ಸೆಕ್ಷನ್ ೪ರ ಹೊಸ ನಿಯಮ (ಈ) ಕೆಳಕಂಡ ಸಂದರ್ಭಗಳಲ್ಲಿ ಅನ್ವಯವಾಗುವುದಿಲ್ಲ. ಸರಕಾರೀ ಇಲಾಖೆ, ರಾಜ್ಯಸರಕಾರೀ ಅಧೀನ ಸಂಸ್ಥೆಗಳಾದ ನಿಗಮ, ಮಂಡಳಿ, ಕಾರ್ಪೊರೇಷನ್ ಅಥವಾ ಸರಕಾರ- ಜಿಲ್ಲಾ ಪಂಚಾಯತ್-ನಗರಸಭೆ, ಪುರಸಭೆ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಮತ್ತು ಬಯಲುಸೀಮೆ ಅಭಿವೃದ್ಧಿ ಮಂಡಳಿಗಳು ಮಾಡಿಕೊಳ್ಳುವ ಸಂಗ್ರಹಣೆ/ಖರೀದಿಗೆ.

                                                ಅಧಿಸೂಚನೆ
ನಂ. PWD 33 FC-III /೨೦೦೧ ಬೆಂಗಳೂರು, ದಿನಾಂಕ ೧೦ ಡಿಸೆಂಬರ್ ೨೦೦೧

                                                ಸುತ್ತೋಲೆ


ವಿಷಯ: ಕೆಟಿಪಿಪಿ ಕಾಯ್ದೆ ೧೯೯೯ ಮತ್ತು ಕೆಟಿಪಿಪಿ ನಿಯಮಗಳು ೨೦೦೦,ಹೊಸ ತಿದ್ದುಪಡಿಗಳ ಕುರಿತು ಸ್ಪಷ್ಟೀಕರಣ-ಶೂನ್ಯ ವಿವರಣ ಪುಸ್ತಿಕೆ ಮುದ್ರಣ.

ಸುತ್ತೋಲೆ ಸಂ.ಪಿ.ಡಬ್ಲ್ಯುಡಿ ೩೩ ಎಫ್‌ಸಿ-೧೧೧/೨೦೦೧. ದಿ.೨೧.೦೩.೨೦೦೧ರ ಪ್ಯಾರ ೨ರಲ್ಲಿ ಹೇಳಿರುವಂತೆ ವಾರದಲ್ಲಿ ಯಾವುದೇ ಟೆಂಡರ್ ಬುಲೆಟಿನ್‌ನಲ್ಲಿ ಯಾವುದೇ ವಿವರಣೆಗಳೂ ಇಲ್ಲದೇ ಹೋದಲ್ಲಿ ಶೂನ್ಯ ವರದಿಯನ್ನು ಪ್ರಕಟಿಸಿ ವಿತರಿಸಬೇಕೆಂದು ತಿಳಿಸಲಾಗಿತ್ತು. ಇದೀಗ ಕೆಟಿಪಿಪಿ ನಿಯಮಗಳು ೨೦೦೦ ದ ನಿಯಮ೪ರ ಮತ್ತು ೭ರ ಷರತ್ತುಗಳ ಅನ್ವಯ ಶೂನ್ಯ ವರದಿ ಪ್ರಕಟಣೆಗೆ ಯಾವುದೇ ಅವಕಾಶವಿಲ್ಲವೆಂದು ಸಾರ್ವಜನಿಕ ಆಡಳಿತ ಮತ್ತು ನ್ಯಾಯ ಇಲಾಖೆ ಅಭಿಪ್ರಾಯಪಟ್ಟಿದೆ. ಹೀಗಾಗಿ ಸುತ್ತೋಲೆಯ ೨ನೇ ಪ್ಯಾರದಿಂದ ಕೆಳಕಂಡ ಅಂಶಗಳನ್ನು ಕೈಬಿಡಲು ತಿಳಿಸಲಾಗಿದೆ.
“ಯಾವುದಾದರೂ ಒಂದು ವಾರದಲ್ಲಿ ಟೆಂಡರ್ ಬುಲೆಟಿನ್/ಪುಸ್ತಿಕೆಯಲ್ಲಿ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇಲ್ಲದೇ ಹೋದಲ್ಲಿ ಆಗ ಶೂನ್ಯ ವರದಿಯನ್ನು ಪ್ರಕಟಿಸಿ ವಿತರಿಸಬೇಕು. ಎಲ್ಲ ಟೆಂಡರ್ ಬುಲೆಟಿನ್ ಅಧಿಕಾರಿಗಳಿಗೆ ಈ ಮೂಲಕ ಈ ಮೂಲಕ ತಿಳಿಯಪಡಿಸುವುದೇನೆಂದರೆ ಯಾವುದಾದರೂ ವಾರದಲ್ಲಿ ಸಾರ್ವಜನಿಕರಿಗೆ ಟೆಂಡರ್ ಬುಲೆಟಿನ್‌ನಲ್ಲಿ ಯಾವುದೇ ಮಾಹಿತಿ ಇಲ್ಲದೇ ಹೋದರೆ ಆಗ ‘ಶೂನ್ಯ‘ವರದಿ ಪ್ರಕಟಿಸಿ ವಿತರಿಸಬಾರದು.“

(ಚಿರಂಜೀವಿ ಸಿಂಗ್)
ಮುಖ್ಯ ಕಾರ್ಯದರ್ಶಿ
ಹಣಕಾಸು ಇಲಾಖೆ


                                               ಅಧಿಸೂಚನೆ
ನಂ PWD 389 FC-3/೨೦೦೧ (ಭಾಗ) ಬೆಂಗಳೂರು, ದಿನಾಂಕ ೩೦ ಜನವರಿ ೨೦೦೨

                                               ಸುತ್ತೋಲೆ

ವಿಷಯ:
ಎಸ್.ಎಸ್.ಐ ಗಳಿಗೆ ಮೌಲ್ಯದಲ್ಲಿ ಆದ್ಯತೆ- ಕೆಟಿಪಿಪಿ ನಿಯಮಗಳು ೨೦೦೦ತಿದ್ದುಪಡಿ ಕುರಿತಂತೆ ಸ್ಪಷ್ಟೀಕರಣ

ಉಲ್ಲೇಖ: ಅಧಿಸೂಚನೆ ನಂ.ಪಿಡಬ್ಲೂಡಿ /೩೮೯ ಎಫ್‌ಸಿ-೩/೨೦೦೧(ಭಾಗ) ದಿನಾಂಕ ೩೦-೦೮-೨೦೦೧ (೨). ವಿ.ಒ.ಟಿಪ್ಪಣಿ ಸಂ.ಸಿಐ ೧೬೭ ಎಸ್‌ಪಿಐ ೨೦೦೧, ದಿ.೦೨.೦೧.೦೨
ಸಿ ಮತ್ತು ಐ ಇಲಾಖೆ ೩೦.೦೮.೨೦೦೧ ಅಧಿಸೂಚನೆಯನ್ನು ಮಾರ್ಪಾಟು ಮಾಡುವಂತೆ ಹಣಕಾಸು ಇಲಾಖೆಯನ್ನು ವಿನಂತಿಸಿತು. ಸಣ್ಣ ಕ್ಯೆಗಾರಿಕೆಗಳು ರಾಜ್ಯದ ಇತರ ಮಧ್ಯಮ ಮತ್ತು ದೊಡ್ಡ ಪ್ರಮಾಣದ ಕೈಗಾರಿಕೆಗಳೊಂದಿಗೆ ಟೆಂಡರ್ ಸಲ್ಲಿಸವಾಗ ಸಣ್ಣ ಕೈಗಾರಿಕೆಗಳಿಗೆ ನೀಡುವ ೧೫% ಅದ್ಯತಾ ಮೌಲ್ಯ ಹಲವು ಸಂಖ್ಯೆಯ ಸಣ್ಣ ಕೈಗಾರಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅವುಗಳ ಅಹವಾಲಾಗಿತ್ತು.

ಕೆಟಿಪಿಪಿ ನಿಯಮಗಳು ೨೦೦೦ದ ೨೫ ನೇ ನಿಯಮದಲ್ಲಿ ಕನಿಷ್ಟ ಮೌಲ್ಯಮಾಪನ ಕುರಿತು ಅನುಸರಿಸಬೇಕಾದ ಕ್ರಮಗಳ ಕುರಿತು ತಿಳಿಸಲಾಗಿದೆ. ಈ ನಿಯಮದಂತೆ ಅತ್ಯಂತ ಕಡಿಮೆ ಮೊತ್ತ ದಾಖಲಿಸಿರುವ (ಕೊಟೇಶನ್‌ಗಳನ್ನು) ಟೆಂಡರ್‌ಗಳನ್ನು ಮಾತ್ರ ಸ್ವೀಕರಿಸಬೇಕು. ಹೊಸ ಕೈಗಾರಿಕಾ ನೀತಿಯಲ್ಲಿ ಘೋಷಿಸಿರುವಂತೆ ಸಣ್ಣ ಕೈಗಾರಿಕೆಗಳು ಸಲ್ಲಿಸುವ ಟೆಂಡರ್‌ಗಳಿಗೆ ೧೫% ಮೌಲ್ಯದಲ್ಲಿ ಆದ್ಯತೆ ನೀಡುವ ಕೆಟಿಪಿಪಿ ಕಾಯ್ದೆ ೧೯೯೯ನ್ನು ತಿದ್ದುಪಡಿ ಮಾಡುವಂತೆ ಸಿ ಮತ್ತು ಐ ಇಲಾಖೆ ಆಗ್ರಹಿಸಿತ್ತು. ಈ ಕುರಿತಂತೆ ಸಂಸದೀಯ ವ್ಯವಹಾರಗಳು ಮತ್ತು ಶಾಸಕಾಂಗ ಇಲಾಖೆಯೊಂದಿಗೆ ಸಂಪರ್ಕಿಸಿ ಎಸ್.ಎಸ್.ಐಗಳ ಮನವಿಯನ್ನು ಪರಿಶೀಲಿಸಿ ಅಧಿಸೂಚನೆ ಸಂ.ಪಿ.ಡಬ್ಲ್ಯುಡಿ ೩೮೯ ಎಫ್‌ಸಿ -೩ :೨೦೦೧ ದಿ.೩೦.೦೮.೨೦೦೧ ಯನ್ನು ಹೊರಡಿಸಲಾಯಿತು. ಹೊಸ ಕೈಗಾರಿಕಾ ನೀತಿ ೨೦೦೧-೨೦೦೬ ಸ.ಆ.ಸಂ.ಸಿ.ಐ.೧೬೭ ಎಸ್‌ಪಿಐ ೨೦೦೧ ದಿ.೩೦ ಜೂನ್ ೨೦೦೧ರಲ್ಲಿ ಹೇಳಿರುವಂತೆ ೧.೦೪.೨೦೦೧ರಿಂದ ಅನ್ವಯವಾಗುವಂತೆ ಮುಂದಿನ ಐದು ವಷಗಳ ವರೆಗೆ ಅತ್ಯಂತ ಕಡಿಮೆ ಮೊತ್ತದ ಟೆಂಡರ್‌ನ್ನು ಪರಿಶೀಲಿಸುವ ವೇಳೆಯಲ್ಲಿ ರಾಜ್ಯದ ಸಣ್ಣ ಕೈಗಾರಿಕೆಗಳಿಗೆ ೧೫% ಆದ್ಯತಾ ಮೌಲ್ಯ ನೀಡುವಂತೆ ಅಧಿಸೂಚನೆಯಲ್ಲಿ ಸೂಚಿಸಲಾಯಿತು.
ಮೇಲಿನ ಅಧಿಸೂಚನೆಯನ್ನು ವಿವಿಧ ಸಂಗ್ರಹಣಾ ಸಂಸ್ಥೆಗಳು ಬೇರೆ ಬೇರೆ ವಿಧದಲ್ಲಿ ಅರ್ಥೈಸಿಕೊಂಡಿದ್ದು ಟೆಂಡರ್‌ಗಳನ್ನು ಅಂತಿಮಗೊಳಿಸುವಲ್ಲಿ ಇದು ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಅತ್ಯಂತ ಕಡಿಮೆ ಮೊತ್ತದ ಟೆಂಡರ್‌ನ್ನು ಪರಿಶೀಲಿಸುವ ವೇಳೆಯಲ್ಲಿ ರಾಜ್ಯದ ಸಣ್ಣ ಕೈಗಾರಿಕೆಗಳಿಗೆ ೧೫% ಆದ್ಯತಾ ಮೌಲ್ಯ ನೀಡುವಂತೆ ಅಧಿಸೂಚನೆಯಲ್ಲಿ ಸೂಚಿಸಿರುವ ಕುರಿತಂತೆ ಕೆಳಕಂಡ ಸ್ಪಷ್ಟೀಕರಣ ನೀಡಲಾಯಿತು.

೧. ಟೆಂಡರ್‌ನ್ನು ಪರಿಶೀಲಿಸುವ ವೇಳೆಯಲ್ಲಿ ರಾಜ್ಯದ ಸಣ್ಣ ಕೈಗಾರಿಕೆಗಳಿಗೆ ೧೫% ಆದ್ಯತಾ ಮೌಲ್ಯಕ್ಕೆ ಅನುವು ಮಾಡಿಕೊಡಬೇಕು. ಒಂದೇ ಟೆಂಡರ್ ಅರ್ಜಿಯಲ್ಲಿ ಈ ಕುರಿತು ನಮೂದಿಸಿರಬೇಕು. ಮತ್ತೊಂದು ರಾಜ್ಯದ ಮಧ್ಯಮ ಪ್ರಮಾಣದ ಅಥವಾ ದೊಡ್ಡ /ಸಣ್ಣ ಪ್ರಮಾಣದ ಕೈಗಾರಿಕೆ ನಮೂದಿಸಿದ ಬೆಲೆಗೆ ಅನುಗುಣವಾಗಿ ಅತ್ಯಂತ ಕಡಿಮೆ ಬೆಲೆಯನ್ನು ನಿರ್ಧರಿಸಿ ೧೫% ಆದ್ಯತಾ ಮೌಲ್ಯ ನೀಡಬೇಕು.

೨. ೧೫% ಆದ್ಯತಾ ಮೌಲ್ಯದ ಪರಿಮಿತಿಯೊಳಗೆ ಎಸ್.ಎಸ್.ಐ. ಸಲ್ಲಿಸಿರುವ ಅತಿ ಕಡಿಮೆ ಮೊತ್ತದ ಟೆಂಡರ್‌ನ್ನು ಅತೀ ಕಡಿಮೆ ಮೌಲ್ಯದ ಟೆಂಡರ್ ಎಂದು ಪರಿಗಣಿಸಿ ಟೆಂಡರ್ ಆದೇಶ ನೀಡಬೇಕು.

4. ಈ ಬಗ್ಗೆ ಇನ್ನಷ್ಟು ಸ್ಪಷ್ಟಪಡಿಸಲು ಈ ವಿವರಣೆ ನೀಡಲಾಗಿದೆ.
 

 1. L1 L2 L3 L4
  L&MI/SSI of another state Rs. 100 SSI. of the state Rs.108 SSI of the state Rs.112 SSI. of the state Rs.115

  ೪. ಟೆಂಡರ್ ಮೌಲ್ಯದ ಪರಿಮಿತಿ ರೂ.೧೧೫, ಅಂದರೆ ರೂ.೧೦೦ +ರೂ.೧೦೦ರ ೧೫%
  ೫. ಎಲ್೨, ಎಲ್೩, ಎಲ್೪ ಎಸ್‌ಎಸ್‌ಐ ಘಟಕಗಳ ಟೆಂಡರ್ ಪರಿಶೀಲನೆಗೆ ಅರ್ಹ. ಎಲ್೨ ಅತಿಕಡಿಮೆ ಮೊತ್ತದ ಟೆಂಡರ್ ಸಲ್ಲಿಸಿರುವುದರಿಂದ ಟೆಂಡರ್ ಆದೇಶ ಅದಕ್ಕೇ ಸಲ್ಲಬೇಕು.
  ೬. ಎಲ್ಲ ಸಂಗ್ರಹಣಾ/ಖರೀದಿ ಏಜೆನ್ಸಿಗಳು ರಾಜ್ಯದ ಎಸ್‌ಎಸ್‌ಐಗಳು ಸಲ್ಲಿಸುವ ಟೆಂಡರ್‌ಗಳನ್ನು ಪರಿಶೀಲಿಸುವ ವೇಳೆ ಮೇಲ್ಕಂಡ ವಿಧಾನವನ್ನೇ ಅನುಸರಿಸಲು ಸೂಚಿಸಲಾಗಿದೆ.

  (ಚಿರಂಜೀವಿ ಸಿಂಗ್)
  ಸರಕಾರದ ಮುಖ್ಯ ಕಾರ್ಯದರ್ಶಿ
  ಹಣಕಾಸು ಇಲಾಖೆ.

   

Top